ಹೆಣ್ಣು ಮಕ್ಕಳು ಇನ್ನಷ್ಟು ಸ್ಟ್ರಾಂಗ್! ಉಜ್ವಲ ಭವಿಷ್ಯಕ್ಕೆ ಸಮಗ್ರ ತರಬೇತಿ

blank

| ಕಿರುವಾರ ಎಸ್.ಸುದರ್ಶನ್, ಕೋಲಾರ

ಹದಿಹರೆಯದ ಹೆಣ್ಣುಮಕ್ಕಳಿಗೆ ಶಾಲೆಯಲ್ಲಿ ಗುಣಾತ್ಮಕ ಶಿಕ್ಷಣ ಕಲಿಸುವ ಜತೆಗೆ ದೈಹಿಕ, ಸಾಮಾಜಿಕ ಮತ್ತು ಮಾನಸಿಕ ಬೆಳವಣಿಗೆಗೆ ಪೂರಕವಾದ ಮಾಹಿತಿಗಳನ್ನು ತಿಳಿಸಿಕೊಡುವ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಯೋಜನೆಯನ್ನು ಶಿಕ್ಷಣ ಇಲಾಖೆ ಕೈಗೆತ್ತಿಕೊಂಡಿದ್ದು, ಈ ವರ್ಷದಿಂದಲೇ ಜಾರಿಯಾಗಲಿದೆ.

ಉಜ್ವಲ ಭವಿಷ್ಯಕ್ಕಾಗಿ ಅಗತ್ಯವಿರುವ ಶೈಕ್ಷಣಿಕ ಮತ್ತು ಔದ್ಯೋಗಿಕ ಅವಕಾಶಗಳು, ಮಕ್ಕಳ ಹಕ್ಕು ಮತ್ತು ಕರ್ತವ್ಯಗಳನ್ನು ತಿಳಿಸಿಕೊಡುವ ಕಾನೂನು ತಿಳಿವಳಿಕೆ, ಆರ್ಥಿಕ ಚಟುವಟಿಕೆಗಳಿಗೆ ಸಹಕಾರಿಯಾಗುವ ಬ್ಯಾಂಕಿಂಗ್ ಜ್ಞಾನ, ಆಹಾರ ಮತ್ತು ಆರೋಗ್ಯದ ಮಾಹಿತಿಗಳು ಸೇರಿ ಎಲ್ಲ ಆಯಾಮಗಳಲ್ಲಿ ವಿದ್ಯಾರ್ಥಿದೆಸೆಯಿಂದಲೇ ಮಕ್ಕಳನ್ನು ಅಣಿಗೊಳಿಸುವ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕೆಂದು ಸಮಗ್ರ ಶಿಕ್ಷಣ ಕರ್ನಾಟಕ ಸೂಚನೆ ನೀಡಿದೆ. ರಾಜ್ಯದ 5,419 ಶಾಲೆಗಳಲ್ಲಿ ಯೋಜನೆಯನ್ನು ಈ ಸಾಲಿನಿಂದಲೇ (2024-25) ಜಾರಿಗೊಳಿಸುವಂತೆ ಸೂಚಿಸಿದ್ದು, ಪ್ರತಿ ಶಾಲೆಗೆ ಒಂದು ಸಾವಿರ ರೂ.ಗಳಂತೆ 54.19 ಲಕ್ಷ ರೂ. ಅನುದಾನ ಬಿಡುಗಡೆಗೆ ಅನುಮೋದನೆ ನೀಡಲಾಗಿದೆ ಎಂದು ಎಸ್​ಎಸ್​ಕೆ ರಾಜ್ಯ ಯೋಜನಾ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ.

ಕೈಗೊಳ್ಳಬೇಕಾದ ಚಟುವಟಿಕೆಗಳು

ಆಹಾರ, ಆರೋಗ್ಯ ಅರಿವು: ಹದಿಹರೆಯದ ಮಕ್ಕಳ ದೇಹದಲ್ಲಿ ಆಗುವ ದೈಹಿಕ ಬೆಳವಣಿಗೆಯ ಬದಲಾವಣೆಗಳು, ಋತುಸ್ರಾವ ನೈರ್ಮಲ್ಯ ನಿರ್ವಹಣೆ, ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳುವ ವಿಧಾನಗಳ ಕುರಿತು ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ವೈದ್ಯರಿಂದ ಸಲಹೆ ಕೊಡಿಸುವುದು ಸಾಂಕ್ರಾಮಿಕ ರೋಗಗಳ ಹರಡುವಿಕೆ, ಸಮತೋಲನ ಆಹಾರ ಸೇವನೆ, ಆರೋಗ್ಯ ತಪಾಸಣೆಯೊಂದಿಗೆ ಆರೋಗ್ಯ ಮಟ್ಟವನ್ನು ಅಭಿವೃದ್ಧಿಪಡಿಸುವುದು.

ಆಪ್ತ ಸಮಾಲೋಚನಾ ಕೇಂದ್ರ ಸ್ಥಾಪಿಸಿ

ಮಕ್ಕಳ ಸಮಸ್ಯೆಗಳು, ಜವಾಬ್ದಾರಿಗಳನ್ನು ತಿಳಿಸುವುದಕ್ಕಾಗಿ ಶಾಲಾ ಹಂತದಲ್ಲಿ ಶಿಕ್ಷಕರು ಆಪ್ತ ಸಮಾಲೋಚನಾ ಕೇಂದ್ರಗಳನ್ನು ಸ್ಥಾಪಿಸಬೇಕು. ಸಾಮಾಜಿಕ ಸಮಸ್ಯೆಗಳು, ಶುಚಿತ್ವ, ಲಿಂಗ ಸಮಾನತೆ ಸೇರಿ ಹಲವು ವಿಷಯಗಳ ಕುರಿತು ಪ್ರಬಂಧ ಸ್ಪರ್ಧೆ, ರಸಪ್ರಶ್ನೆ, ಆಶುಭಾಷಣ, ಚರ್ಚಾ ಸ್ಪರ್ಧೆ, ನಾಟಕಗಳಂತಹ ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು.ಕಾರ್ಯಕ್ರಮಗಳನ್ನು ಹಮ್ಮಿಕೊಂಡ ಮಾಹಿತಿಗಳನ್ನು ಫೋಟೋ ಸಹಿತಿ ಕಳುಹಿಸಿಕೊಡುವಂತೆ ಸೂಚನೆ ನೀಡಲಾಗಿದೆ.

ತಿಳಿವಳಿಕೆ, ಹೊಸ ಅವಕಾಶ

ಪೊಲೀಸ್​ ಇಲಾಖೆ ವತಿಯಿಂದ ‘ತೆರೆದ ಮನೆ’ ಕಾರ್ಯಕ್ರಮದಡಿ ಮಕ್ಕಳ ರಕ್ಷಣೆಗೆ ಇರುವ ಕಾನೂನುಗಳು, ಹಕ್ಕುಗಳು ಮತ್ತು ಜವಾಬ್ದಾರಿಗಳು ಹಾಗೂ ಕಾನೂನು ಉಲ್ಲಂಘನೆಯಿಂದಾಗುವ ಶಿಕ್ಷೆಗಳ ಬಗ್ಗೆ ಅರಿವು ಸ್ಥಳೀಯ ವಕೀಲರಿಂದ ಮಕ್ಕಳ ಹಕ್ಕುಗಳು, ಕರ್ತವ್ಯಗಳು ಸೇರಿ ಇತರೆ ಕಾನೂನು ಅಂಶಗಳ ಮಾಹಿತಿ. ಆರೋಗ್ಯ ಮಟ್ಟವನ್ನು ಹೆಚ್ಚಿಸಲು ಇರುವ ಸೌಲಭ್ಯಗಳು ಹಾಗೂ ಲಿಂಗ ಸಮಾನತೆ ಮಾಹಿತಿ. ವಿವಿಧ ಇಲಾಖೆಗಳಿಂದ ಉನ್ನತ ವಿದ್ಯಾಭ್ಯಾಸ ಕೈಗೊಳ್ಳಲು ಇರುವ ಸೌಲಭ್ಯಗಳ ಬಗ್ಗೆ ಮಾಹಿತಿ ಒದಗಿಸುವುದು ಎಸ್ಸೆಸ್ಸೆಲ್ಸಿ, ಪಿಯುಸಿ ನಂತರ ಯಾವ ಕೋರ್ಸ್ ಅಧ್ಯಯನ ಮಾಡಬಹುದು ಮತ್ತು ಆ ಕೊರ್ಸ್​ಗಳ ಅಧ್ಯಯನದಿಂದ ದೊರೆಯುವ ಉದ್ಯೋಗವಕಾಶಗಳ ಮಾಹಿತಿಯನ್ನು ಡಯಟ್ ಉಪನ್ಯಾಸಕರು ಹಾಗೂ ಶಿಕ್ಷಕರಿಂದ ಒದಗಿಸುವುದು.

ಬ್ಯಾಂಕಿಂಗ್ ಜ್ಞಾನ

ಬ್ಯಾಂಕ್, ಅಂಚೆ ಕಚೇರಿ, ಸಮೀಪದ ಕೈಗಾರಿಕಾ ಕೇಂದ್ರಗಳಿಗೆ ಮಕ್ಕಳನ್ನು ಕರೆದೊಯ್ಯುವುದು ಅಥವಾ ಸಂಬಂಧಿಸಿದ ಅಧಿಕಾರಿಗಳನ್ನು ಶಾಲೆಗೆ ಕರೆಯಿಸಿ ಸಣ್ಣ ಉಳಿತಾಯ ಖಾತೆ ತೆರೆಯುವುದು, ಡೆಬಿಟ್/ಕ್ರೆಡಿಟ್ ಕಾರ್ಡ್, ಚೆಕ್​ಲಿಸ್ಟ್, ಎಟಿಎಂ ಕಾರ್ಡ್ ಬಳಕೆ, ಉನ್ನತ ವಿದ್ಯಾಭ್ಯಾಸಕ್ಕೆ ಸಾಲದ ನೆರವು ಕೊಡಿಸುವುದು

ಹೆಣ್ಣು ಮಕ್ಕಳ ಹಿತದೃಷ್ಟಿಯಿಂದ ಶಾಲಾ ಹಂತದಲ್ಲಿ ಅಗತ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಖುಷಿಯ ವಿಚಾರ. ಎಲ್ಲ ಶಾಲೆಗಳಲ್ಲಿಯೂ ಈ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಬೇಕಾಗಿದೆ. ಕೇವಲ ಹೆಣ್ಣು ಮಕ್ಕಳಿಗಲ್ಲದೆ, ಗಂಡು ಮಕ್ಕಳಿಗೂ ಇಂತಹ ಶಿಕ್ಷಣ ಅಗತ್ಯವಿದೆ.

| ಎ.ನಳಿನಿಗೌಡ ವಕೀಲೆ

 

ಹದಿಹರೆಯದ ಹೆಣ್ಣುಮಕ್ಕಳಿಗೆ ಈ ವಯಸ್ಸಿನಲ್ಲಿ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಸದೃಢ ದೇಹದಲ್ಲಿ ಸದೃಢ ಮನಸ್ಸಿರುತ್ತದೆ ಎಂಬಂತೆ ದೇಹದಲ್ಲಿನ ಬದಲಾವಣೆ ಒಪ್ಪಿಕೊಂಡು ಗುಣಾತ್ಮಕ ಶಿಕ್ಷಣ ಪಡೆಯಲು ಅರಿವು ನೀಡುವುದು ಕಾರ್ಯಕ್ರಮದ ಉದ್ದೇಶವಾಗಿದೆ.

| ಸವಿತಾ ಬಾಬು ಶಿಕ್ಷಕಿ, ಗುಲ್ಲಹಳ್ಳಿ ಶಾಲೆ

https://www.vijayavani.net/this-is-the-last-date-for-update-of-aadhar-card

Share This Article

2025ರಲ್ಲಿ ಈ 3 ರಾಶಿಯವರಿಗೆ ರಾಜಯೋಗ!? ಅನೇಕ ರೀತಿಯಲ್ಲಿ ಹಣದ ಹರಿವು, ಐಷಾರಾಮಿ ಜೀವನ | Royal Life

Royal Life : ಸಾಮಾನ್ಯವಾಗಿ ನಮ್ಮ ನಡುವೆ ಜಾತಕವನ್ನು ನಂಬುವಂತಹ ಅನೇಕ ಜನರಿದ್ದಾರೆ. ಅದೇ ರೀತಿ…

ಜೇನುತುಪ್ಪ ಜತೆ ಹುರಿದ ಶುಂಠಿ ತಿಂದರೆ ಗಂಟಲು ನೋವು ಮಾಯಾ! ಹೀಗಿವೆ ಪ್ರಯೋಜನಗಳು

ಬೆಂಗಳೂರು: ಜೇನುತುಪ್ಪ ಮತ್ತು ಶುಂಠಿ ಆರೋಗ್ಯಕ್ಕೆ ತುಂಬಾ ಪ್ರಯೋಜನ ಎಂಬ ವಿಷಯ ಬಹುತೇಕರಿಗೆ ತಿಳಿದಿದೆ. ಈ…

ಸಾಮಾನ್ಯವಾಗಿ ಮಾಡುವ ಈ ತಪ್ಪುಗಳಿಂದಲೇ ಲೈಂಗಿಕ ಜೀವನದಲ್ಲಿ ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತೆ ಎಚ್ಚರ! Relationship Tips

Relationship Tips : ಪರಸ್ಪರ ತಿಳುವಳಿಕೆಯುಳ್ಳ ಉತ್ತಮ ಲೈಂಗಿಕ ಜೀವನವು ಸಂತೋಷದ ದಾಂಪತ್ಯಕ್ಕೆ ಕಾರಣವಾಗುತ್ತದೆ. ಲೈಂಗಿಕ…