ಮೆಟ್ರೋ ಸ್ಟೇಷನ್​ನಲ್ಲಿ ಯುವತಿಯ ಹುಚ್ಚಾಟ; ಕಾನ್​ಸ್ಟೇಬಲ್ ಧೈರ್ಯಕ್ಕೆ ಭಾರಿ ಮೆಚ್ಚುಗೆ

ನವದೆಹಲಿ: ಕೆಲಸದ ಒತ್ತಡ ಹೆಚ್ಚಾಗಿದೆ ಎನ್ನುವ ಕಾರಣಕ್ಕೆ ಯುವತಿಯೊಬ್ಬಳು ಮೆಟ್ರೋ ಸ್ಟೇಷನ್​ನಿಂದ ಹಾರಿ ಪ್ರಾಣ ಕಳೆದುಕೊಳ್ಳಲು ಪ್ರಯತ್ನಿಸಿರುವ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿ ಹತ್ತಿರದ ಫರಿದಾಬಾದ್​ನಲ್ಲಿ ನಡೆದಿದೆ. ಪೊಲೀಸ್ ಕಾನ್​ಸ್ಟೇಬಲ್ ಒಬ್ಬರಿಂದಾಗಿ ಆಕೆಯ ಪ್ರಾಣ ಉಳಿಯುವಂತಾಗಿದೆ. ಫರಿದಾಬಾದ್​ನ ಸೆಕ್ಟರ್ 28 ಮೆಟ್ರೋ ಸ್ಟೇಷನ್​ನಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಯುವತಿಯೊಬ್ಬಳು ಸ್ಟೇಷನ್​ನ ಹೊರಭಾಗದ ಗೋಡೆಯಲ್ಲಿದ್ದ ಅಡ್ಡಪಟ್ಟಿಯಲ್ಲಿ ಕುಳಿತುಕೊಂಡು, ಅಲ್ಲಿಂದ ಹಾರಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾಳೆ. ಮೇಲಿನಿಂದ ಮೆಟ್ರೋ ಸ್ಟೇಷನ್ ಸಿಬ್ಬಂದಿ ಅದೆಷ್ಟೇ ವಿನಂತಿ ಮಾಡಿಕೊಂಡರೂ ಆಕೆ ಅವರ ಮಾತು ಕೇಳಿಲ್ಲ. … Continue reading ಮೆಟ್ರೋ ಸ್ಟೇಷನ್​ನಲ್ಲಿ ಯುವತಿಯ ಹುಚ್ಚಾಟ; ಕಾನ್​ಸ್ಟೇಬಲ್ ಧೈರ್ಯಕ್ಕೆ ಭಾರಿ ಮೆಚ್ಚುಗೆ