ಹೋಳಿ ಆಚರಿಸಲು ತೆರಳಿದ್ದ 6 ವರ್ಷದ ಬಾಲಕಿ ಕತ್ತು ಸೀಳಿದ ಸ್ಥಿತಿಯಲ್ಲಿ ಪತ್ತೆ!

ಹೈದರಾಬಾದ್‌: ಹೋಳಿ ಆಚರಿಸಲೆಂದು ಮನೆಯಿಂದ ತೆರಳಿದ್ದ ಆರು ವರ್ಷದ ಬಾಲಕಿಯು ಕತ್ತು ಸೀಳಿದ ಸ್ಥಿತಿಯಲ್ಲಿ ರೈಲ್ವೆ ಹಳಿಗಳ ಬಳಿ ಪತ್ತೆಯಾಗಿರುವ ಘಟನೆ ತೆಲಂಗಾಣದ ಮೆಡ್ಚಾಲ್‌ನಲ್ಲಿ ನಡೆದಿದೆ.

ಗುರುವಾರ ತೆರಳಿದ್ದ ಬಾಲಕಿ ಇಂದು ಶವವಾಗಿ ಪತ್ತೆಯಾಗಿದ್ದು, ಅತ್ಯಾಚಾರ ಎಸಗಿರುವ ಶಂಕೆ ವ್ಯಕ್ತವಾಗಿದೆ. ಬಾಲಕಿಯ ನೆರೆಹೊರೆಯ ಆರು ಜನ ಕಾರ್ಮಿಕರಿಂದ ಸಾಮೂಹಿಕ ಅತ್ಯಾಚಾರವಾಗಿದೆ ಎಂದು ಆರೋಪಿಸಲಾಗಿದೆ.

ಗುರುವಾರ ಮನೆಯಿಂದ ಹೊರಹೋಗಿದ್ದ ಬಾಲಕಿ ಮತ್ತೆ ಮನೆಗೆ ಹಿಂತಿರುಗಿರಲಿಲ್ಲ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. (ಏಜೆನ್ಸೀಸ್)