More

    ವಯಸ್ಸಾದಂತೆ ಕಾಣುತ್ತಿದ್ದ 15 ವರ್ಷದ ಬಾಲಕಿ ಬದುಕಲ್ಲಿ ನಡೆಯಿತು ಮಹಾ ಪವಾಡ: ಇಂದು ಆಕೆ ಸುರಸುಂದರಿ!

    ಬೀಜಿಂಗ್​: ವಿರಳ ಕಾಯಿಲೆಯಿಂದ ವಯಸ್ಸಾದಂತೆ ಕಾಣುತ್ತಿದ್ದ 15 ವರ್ಷದ ಹುಡುಗಿಯೊಬ್ಬಳು ಪ್ಲ್ಯಾಸ್ಟಿಕ್ ಸರ್ಜರಿಯಿಂದ ಹೊಸ ಜೀವನದ ಸ್ವರೂಪ ಪಡೆದುಕೊಂಡಿರುವ ಅಪರೂಪದ ಪ್ರಕರಣ ಚೀನಾದಲ್ಲಿ ಕಂಡಬಂದಿದೆ. ಪರೋಪಕಾರಿಗಳ ತಂಡವೊಂದು ಸೇರಿ ಸಂತ್ರಸ್ತ ಹುಡುಗಿಗೆ ಹೊಸ ಬಾಳನ್ನು ನೀಡಿದ್ದಾರೆ. ​

    ಚೀನಾದ ಶೆನ್ಯಾಂಗ್​ ನಿವಾಸಿಯಾಗಿರುವ ಸಿಯೊಡೊನಿಮ್​ ಕ್ಷಿಯೊ ಫೆಂಗ್​ ಹೆಸರಿನ ಬಾಲಕಿ ವಿರಳ ಕಾಯಿಲೆಯಿಂದ ವಯಸ್ಸಾದಂತೆ ಕಾಣುತ್ತಿದ್ದಳು. ಅವಳ ಸುಕ್ಕುಗಟ್ಟಿದ ಮುಖವನ್ನು ನೋಡಿ ಶಾಲೆಯಲ್ಲಿ ಎಲ್ಲರೂ ಭಯಬೀಳುತ್ತಿದ್ದರು. ಇದರಿಂದ ಫೆಂಗ್​ಗೆ ಏಕಾಂಗಿ ಭಾವನೆ ಮತ್ತು ಕೀಳರಿಮೆ ಕಾಡುತ್ತಿತ್ತು. ಇತರರಂತೆ ನಾನಿಲ್ಲವಲ್ಲ ಎಂದು ದಿನನಿತ್ಯ ಫೆಂಗ್​ ಕೊರಗುತ್ತಿದ್ದಳು.

    ಇದೀಗ ಪ್ಲ್ಯಾಸ್ಟಿಕ್​ ಸರ್ಜರಿಗೆ ಒಳಗಾಗಿರುವ ಫೆಂಗ್​, ಇಂದು ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಕೊಂಡು ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದರು. ಬಹಳ ಸುಂದರ ಹುಡುಗಿಯಂತೆ ಫೆಂಗ್​ ಕಾಣಿಸುತ್ತಿದ್ದಳು.

    8 ಮಿಲಿಯನ್ ಮಂದಿಯಲ್ಲಿ ಒಬ್ಬರಿಗೆ ಕಾಣಿಸಿಕೊಳ್ಳುವ ಕಾಯಿಲೆ
    ಫೆಂಗ್​ ಸ್ಥಿತಿಯ ಬಗ್ಗೆ ಶೆನ್ಯಾಂಗ್​ ಸನ್​ಲೈನ್​ ಪ್ಲ್ಯಾಸ್ಟಿಕ್​ ಸರ್ಜರಿ ಆಸ್ಪತ್ರೆಯ ಸರ್ಜನ್​ ಮಾತನಾಡಿ, ಫೆಂಗ್​ 8 ಮಿಲಿಯನ್ ಮಂದಿಯಲ್ಲಿ ಒಬ್ಬರಿಗೆ ಸಂಭವಿಸುವ ವಿರಾಳಾತಿವಿರಳವಾದ ಪ್ರೊಗೆರಿಯಾ ಕಾಯಿಲೆಗೆ ತುತ್ತಾಗಿದ್ದಳು. ಇದರಿಂದಾಗಿ ಫೆಂಗ್​ ವಯಸ್ಸಾದಂತೆ ಕಾಣುತ್ತಿದ್ದಳು. ಅದೃಷ್ಟವಶಾತ್​ ಫೆಂಗ್​ ಪ್ರಕರಣದಲ್ಲಿ ಈ ಕಾಯಿಲೆ ಆಕೆಯ ಚರ್ಮಕ್ಕೆ ಮಾತ್ರ ಪ್ರಭಾವ ಬೀರಿತ್ತು. ಇದರಿಂದ ಆಕೆಯ ಅಂಗಾಗಳಿಗೆ ಯಾವುದೇ ತೊಂದರೆಯಾಗಿರಲಿಲ್ಲ ಎಂದು ಹೇಳಿದ್ದಾರೆ.

    ಪರೋಪಕಾರಿಗಳಿಗೆ ಧನ್ಯವಾದಗಳು
    ಫೆಂಗ್​ ಕುಟುಂಬ ಆರ್ಥಿಕವಾಗಿ ಸದೃಢವಾಗಿಲ್ಲ. ಹೀಗಾಗಿ ಆಕೆಗೆ ಚಿಕಿತ್ಸೆ ಕೊಡಿಸುವಷ್ಟು ಹಣವಿರಲಿಲ್ಲ. ಆದರೆ, ಪರೋಪಕಾರಿಗಳು ಒಗ್ಗಟ್ಟಿನಿಂದಾಗಿ ಇಂದು ಫೆಂಗ್​ ಹೊಸ ರೂಪ ಪಡೆದುಕೊಂಡಿದ್ದಾಳೆ. ಸುಮಾರು 20,000 ಪೌಂಡ್​ (18,58,448 ರೂ.) ವೈದ್ಯಕೀಯ ವೆಚ್ಚ ಭರಿಸಿ ಫೆಂಗ್​ಗೆ ಚಿಕಿತ್ಸೆ ಕೊಡಿಸಲಾಗಿದೆ.

    ಡಿಸೆಂಬರ್​ 29ರಂದು ಸುಮಾರು 10 ಸರ್ಜನ್​ಗಳಿಂದ ಆಪರೇಷನ್​ ನಡೆದಿದೆ. ಮೂವರು ಅರಿವಳಿಕೆ ತಜ್ಞರು ಮತ್ತು ಐವರು ನರ್ಸ್​ಗಳು ಕೂಡ ಆಪರೇಷನ್​ನಲ್ಲಿ ಕೈಜೋಡಿಸಿದ್ದರು. ಫೆಂಗ್​ ದೇಹದಲ್ಲಿದ್ದ 2.7 ಇಂಚಿನ ದಪ್ಪ ಚರ್ಮವನ್ನು ತೆಗದುಹಾಕಿ, ಪ್ಲ್ಯಾಸ್ಟಿಕ್​ ಸರ್ಜರಿ ಮಾಡಲಾಗಿದೆ.

    ದಯಾಪರತೆ ಮೆರೆದ ಆಸ್ಪತ್ರೆ
    ಫೆಂಗ್​ಗೆ ಚಿಕಿತ್ಸೆ ನೀಡಿದ ಆಸ್ಪತ್ರೆಯೂ ಕೂಡ ಆಕೆಯ ಬೆನ್ನಿಗೆ ನಿಂತಿದೆ. ಅಂತಿಮವಾಗಿ 56,000 ಪೌಂಡ್​(52,03,204 ರೂ.) ಆಸ್ಪತ್ರೆ ಬಿಲ್​ ಅನ್ನು ರದ್ದುಗೊಳಿಸಿದೆ. ನಿಧಿ ಸಂಗ್ರಹ ಹಣವನ್ನು ಆಕೆಯ ಚೇತರಿಕೆ ಮತ್ತು ಭವಿಷ್ಯದ ಅಧ್ಯಯನಕ್ಕೆ ನೀಡುವುದಾಗಿ ಆಸ್ಪತ್ರೆ ನಿರ್ವಹಣಾ ಮಂಡಳಿ ತಿಳಿಸಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts