ಗರ್ಡರ್​ ಜೋಡಿಸುವ ಕಾರ್ಯ ಪೂರ್ಣ…

Indrali 1

ಇದ್ರಾಳಿಯಲ್ಲಿ ರೈಲ್ವೆ ಮೇಲ್ಸೇತುವೆ ಕಾಮಗಾರಿ

ವಿಜಯವಾಣಿ ಸುದ್ದಿಜಾಲ ಉಡುಪಿ
ಉಡುಪಿ-ಮಣಿಪಾಲ ರಾಷ್ಟ್ರೀಯ ಹೆದ್ದಾರಿ 169-ಎಯಲ್ಲಿ ಇಂದ್ರಾಳಿಯಲ್ಲಿ ರೈಲ್ವೆ ಮೇಲ್ಸೇತುವೆಯ ಬೌಸ್ಟ್ರಿಂಗ್​ ಗರ್ಡರ್​ ಜೋಡಿಸುವ ಕಾರ್ಯ ಮೇ 13ರಂದು ಸಂಜೆಯೊಳಗೆ ಪೂರ್ಣಗೊಂಡಿದೆ.

blank

ರೈಲ್ವೆ ಇಲಾಖೆಯ ಅನುಮತಿಯ ಮೇರೆಗೆ ಮೇ 12ರಂದು ಬೆಳಗ್ಗೆ 11:30ರಿಂದ ಸ್ಟೀಲ್​ ಗರ್ಡರ್​ ಬ್ರಿಡ್ಜ್​ ಜೋಡಣೆ ಕಾರ್ಯ ನಡೆದಿತ್ತು.

ವೆಲ್ಡಿಂಗ್​ ಕಾರ್ಯ

Indrali 2ಸುಮಾರು 450 ಮೆಟ್ರಿಕ್​ ಟನ್​ ತೂಕದ 60 ಮೀಟರ್​ ಉದ್ದದ ಗರ್ಡರ್​ ಸೇತುವೆಯನ್ನು ಇಂದ್ರಾಳಿ ಪೆಟ್ರೋಲ್​ ಪಂಪ್​ ಮುಂಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ನಿರ್ಮಿಸಲಾಗುತ್ತಿತ್ತು. ಒಂದು ವರ್ಷದಿಂದ ವೆಲ್ಡಿಂಗ್​ ಕಾರ್ಯ ನಡೆದಿತ್ತು.

ಗ್ರಿಬ್ಸ್​ ಮೂಲಕ ಸ್ಥಳಾಂತರ

ಸಿದ್ಧಗೊಂಡಿದ್ದ ಸ್ಟೀಲ್​ ಸೇತುವೆಯನ್ನು ಇನ್ನೊಂದು ತುದಿಯವರೆಗೆ ತಲುಪಿಸಲು ಗ್ರಿಬ್ಸ್​ ತಂತ್ರಜ್ಞಾನದ ಮೂಲಕ ಸಾಗಿಸಲಾಯಿತು. ಸೇತುವೆಯ ಕೆಲಭಾಗದಲ್ಲಿ ಒಂದರ ಮೇಲೊಂದರಂತೆ ಗ್ರಿಬ್ಸ್​ ಅಳವಡಿಸಿ, ಅದರ ಮೇಲೆ ರೈಲ್ವೆ ಹಳಿಯ ಮಾದರಿಯಲ್ಲೇ ಎರಡೂ ಕಡೆ ಹಳಿ ನಿರ್ಮಿಸಿ ಯಂತ್ರದ ಮೂಲಕ ಗರ್ಡರ್​ ಬ್ರಿಡ್ಜ್​ಅನ್ನು ಇನ್ನೊಂದು ತುದಿಗೆ ಎಳೆಯಲಾಯಿತು.

ಕಾಂಕ್ರೀಟ್​ ಸ್ಲ್ಯಾಬ್​ಗೆ ಜೋಡಣೆ

Indrali 3ನೂರಾರು ಅಡಿ ಕೆಳ ಭಾಗದಲ್ಲಿ ರೈಲು ಹಳಿಗಳಿದ್ದು, ಈ ಮೊದಲೇ ಎರಡೂ ಬದಿಗಳಲ್ಲಿ ಸಿದ್ಧಪಡಿಸಿಟ್ಟುಕೊಂಡಿದ್ದ ಕಾಂಕ್ರೀಟ್​ ಸ್ಲ್ಯಾಬ್​ಗಳಿಗೆ ಗರ್ಡರ್​ ಸೇತುವೆಯನ್ನು ಹೊಂದಿಸಿ ಜೋಡಿಸಲಾಗಿದೆ. ರೈಲು ಸಂಚಾರದ ವೇಳೆ ಜೋಡಣೆ ಕಾರ್ಯ ಸ್ಥಗಿತಗೊಳಿಸಲಾಗಿತ್ತು.

Indrali Kotಅತ್ಯಂತ ಸುರಕ್ಷತಾ ಕ್ರಮಗಳೊಂದಿಗೆ ಎರಡು ದಿನದ ಅವಧಿಯಲ್ಲಿ ಗರ್ಡರ್​ ಸೇತುವೆಯನ್ನು ಇನ್ನೊಂದು ತುದಿಗೆ ಸ್ಥಳಾಂತರಿಸಿ ಜೋಡಿಸಲಾಗಿದೆ. ಮೊದಲ ದಿನ ನಾನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೆ. ಇನ್ನೂ ಕೆಲವಷ್ಟು ತಾಂತ್ರಿಕ ಕಾರ್ಯಗಳಿದ್ದು, ಸರಿಯಾಗಿ ಸೇತುವೆ ಜೋಡಿಸಿದ ಬಳಿಕ ಅದರ ಮೇಲೆ ಕಾಂಕ್ರೀಟ್​ ರಸ್ತೆ ನಿರ್ಮಿಸಲಾಗುತ್ತದೆ.
| ಕೋಟ ಶ್ರೀನಿವಾಸ ಪೂಜಾರಿ. ಸಂಸದ

Share This Article
blank

ತುಪ್ಪ ತಿನ್ನೋದರಿಂದ ದಪ್ಪಾ ಆಗ್ತಾರಾ? ಯಾವ ಸಮಯದಲ್ಲಿ ಸೇವಿಸುವುದು ಬೆಸ್ಟ್​, ಇಲ್ಲಿದೆ ಉತ್ತರ | Ghee

Ghee Benefits: ತುಪ್ಪ ಬಹುತೇಕರಿಗೆ ಇಷ್ಟ. ತಾವು ಸೇವಿಸುವ ಆಹಾರದಲ್ಲಿ ತುಪ್ಪವಿದ್ದರೆ ವಿಶೇಷ ರುಚಿ ಎಂದು…

ಈ ಪದಾರ್ಥಗಳು ನಾಲಿಗೆಗೆ ಕಹಿ ಆದ್ರೂ ಆರೋಗ್ಯಕ್ಕೆ ವರದಾನ; ಇದರ ಬಗ್ಗೆ ತಿಳಿಯಿರಿ.. | Health Tips

Health Tips: ಸಾಧಾರಣವಾಗಿ ನಾವು ಕಹಿ ಆಹಾರ ಪದಾರ್ಥಗಳು ಎಂದರೆ ದೂರ ಓಡುತ್ತೇವೆ. ನಮ್ಮಲ್ಲಿ ಹಲವರು…

blank