ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಗಿಣಿರಾಮ ಧಾರಾವಾಹಿ ಅಭಿಮಾನಿಗಳಿಗೆ ಸಣ್ಣದೊಂದು ಶಾಕ್ ಎದುರಾಗಿದೆ. ನೆಚ್ಚಿನ ಜೋಡಿಯನ್ನು ತೆರೆ ಮೇಲೆ ಕಾಣುತ್ತಿದ್ದವರಿಗೆ ಇನ್ನು ಕೆಲ ದಿನಗಳ ಕಾಲ ಮಹತಿ ಕಾಣಸಿಗುವುದಿಲ್ಲ.
ಹೌದು! ಮಹತಿ ಪಾತ್ರದಲ್ಲಿ ನಟಿಸುತ್ತಿರುವ ನಟಿ ನಯನಾಗೆ ಕರೊನಾ ಸೋಂಕು ದೃಢವಾಗಿದೆ. ಈ ಬಗ್ಗೆ ಅವರೇ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ನನಗೆ ಕರೊನಾ ಸೋಂಕು ದೃಢವಾಗಿದೆ. ಹೆದರಬೇಕಾಗಿರುವುದೇನಿಲ್ಲ. ಮನೆಯಲ್ಲೇ ಇರುತ್ತೇನೆ. 15 ದಿನಗಳ ಕಾಲ ಕ್ವಾರಂಟೈನ್ ಆಗಿ ಚಿಕಿತ್ಸೆ ಪಡೆಯಲಿದ್ದೇನೆ. ಧಾರಾವಾಹಿ ಸೆಟ್ಗೆ ಕೆಲ ದಿನಗಳ ಕಾಲ ಹೋಗಲಾಗುವುದಿಲ್ಲ. ಆದ್ದರಿಂದ ಸ್ಕ್ರಿಪ್ಟ್ನಲ್ಲಿ ಕೊಂಚ ಬದಲಾವಣೆ ಆಗುವ ಸಾಧ್ಯತೆಯಿದೆ ಎಂದು ಅವರು ಬರೆದುಕೊಂಡಿದ್ದಾರೆ.
ಶೀಘ್ರ ಗುಣಮುಖವಾಗಿ ಆದಷ್ಟು ಬೇಗ ಧಾರಾವಾಹಿ ಸೆಟ್ಗೆ ಮರಳುತ್ತೇನೆ ಎಂದು ಕೂಡ ಅವರು ಬರೆದುಕೊಂಡಿದ್ದಾರೆ.
ರಾಜ್ಯದಲ್ಲಿ ಕರೊನಾ ಸೋಂಕಿನ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಸೋಂಕು ನಿಯಂತ್ರಣಕ್ಕೆ ಸರ್ಕಾರ ಸಕಲ ಪ್ರಯತ್ನಗಳನ್ನು ಮಾಡುತ್ತಿದೆ. (ಏಜೆನ್ಸೀಸ್)
ರಾಜ್ಯಕ್ಕೆ ವೀಕೆಂಡ್ ಲಾಕ್ಡೌನ್ ಶಾಕ್! ಏನಿರತ್ತೆ? ಏನಿರಲ್ಲ? ಇಲ್ಲಿದೆ ಸಂಪೂರ್ಣ ಮಾಹಿತಿ