ಮನೋಲ್ಲಾಸ ಹಾಗೂ ಚೈತನ್ಯ ತುಂಬುವ ಶುಂಠಿ, ಲಿಂಬೆ ಸಂಯೋಜನೆ

ಒಂದು ಇಂಚು ಹಸಿ ಶುಂಠಿ ಜಜ್ಜಿ, ಅದರ ರಸ ತೆಗೆದು ಅರ್ಧ ಲಿಂಬು, ಎರಡು ಚಮಚ ಜೇನುತುಪ್ಪ ಹಾಗೂ ಒಂದು ಗ್ಲಾಸ್ ನೀರು ಬೆರೆಸಿದರೆ ಅದು ಮನೋಲ್ಲಾಸ ನೀಡುವ, ಚೈತನ್ಯ ತುಂಬುವ ಪಾನೀಯವಾಗುತ್ತದೆ. ಈ ಪಾನೀಯದ ಸೇವನೆಯಿಂದ ಆಂತರ್ಯದಿಂದ ಆರಾಮದಾಯಕ ಭಾವನೆ ಹೊರಡುಗುತ್ತದೆ. ಈ ಪಾನೀಯದ ತಯಾರಿಕೆಯಲ್ಲಿ ಬಳಸಲಾಗುವ ಶುಂಠಿ, ಲಿಂಬು ಎರಡೂ ಸೋಂಕುಗಳ ವಿರುದ್ಧ ಹೋರಾಡುವಂತಹ ಗುಣಗಳನ್ನು ಹೊಂದಿವೆ. ಆಂಟಿ ಬ್ಯಾಕ್ಟೀರಿಯಲ್, ಆಂಟಿ ಫಂಗಲ್, ಆಂಟಿ ಡಯಾಬಿಟಿಕ್, ಆಂಟಿ ಕ್ಯಾನ್ಸರ್, ಆಂಟಿ ವೈರಲ್ ಗುಣಗಳು ದೇಹದಲ್ಲಿ ತೊಂದರೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.

ಸುಸ್ತನ್ನು ಕಡಿಮೆ ಮಾಡಲು ಇದು ಪರಿಣಾಮಕಾರಿ. ವಾಂತಿ ಬಂದಂತಾಗುವುದೂ ಸಹ ಕಡಿಮೆಯಾಗಲು ಅನುಕೂಲಕಾರಿ. ಪ್ರಯಾಣದ ಸಂದರ್ಭದಲ್ಲಿ ಆಗುವ ತೊಂದರೆಗಳನ್ನು ಕಡಿಮೆ ಮಾಡಲು ಈ ಪಾನೀಯ ನೆರವಾಗುತ್ತದೆ. ಶುಂಠಿ ಹಾಗೂ ಲಿಂಬುವಿನಲ್ಲಿ ಆಂಟಿ ಇನ್​ಫ್ಲಮೇಟರಿ ಗುಣಗಳು ಇರುವುದನ್ನು ಅನೇಕ ಸಂಶೋಧನಾ ಕೇಂದ್ರಗಳು ವೈಜ್ಞಾನಿಕವಾಗಿ ಸಾಬೀತುಪಡಿಸಿದೆ. ದೇಹದ ಕೋಶಗಳಿಗೆ ಆಗಬಹುದಾದ ಹಾನಿಯನ್ನು ಕಡಿಮೆ ಮಾಡಲು ಈ ಪಾನೀಯವು ಅನುಕೂಲಕಾರಿ. ಚರ್ಮದ ಆರೋಗ್ಯಕ್ಕೆ ಇದು ಉತ್ತಮ. ಬೇಸಿಗೆಯಲ್ಲಿ ಚರ್ಮದ ಸೌಂದರ್ಯ ವೃದ್ಧಿಗೆ ಹೆಚ್ಚು ನೆರವಾಗುತ್ತದೆ.

ದೇಹದಲ್ಲಿ ರೋಗ ನಿರೋಧಕ ಶಕ್ತಿಯ ಹೆಚ್ಚಳಕ್ಕೆ, ತೂಕ ಇಳಿಕೆಗೆ, ಆಂತರಿಕವಾಗಿ ದೇಹದ ಶುದ್ಧೀಕರಣಕ್ಕೆ ಶುಂಠಿ, ಲಿಂಬು ಮತ್ತು ಜೇನುತುಪ್ಪದ ಪಾನೀಯವು ಸಹಕಾರಿ. ಮಕ್ಕಳಿಗೆ ಈ ಪಾನೀಯವನ್ನು ಕೊಡುವುದು ಅವರ ದೇಹ ನಿರ್ವಹಣೆಗೆ ಅನುಕೂಲಕಾರಿಯಾಗುತ್ತದೆ. ವಿಟಮಿನ್ ಸಿ ಇದರಲ್ಲಿರುವುದು ಇದರ ಹೆಚ್ಚಿನ ಆರೋಗ್ಯ ಅನುಕೂಲಕಾರಿ ಗುಣಗಳಿಗೆ ಕಾರಣವಾಗಿದೆ. ಬಿಸಿನೀರಿಗೆ ಜೇನುತುಪ್ಪ ಸೇರಿಸಬಾರದು. ಸಾಮಾನ್ಯ ತಾಪಮಾನದಲ್ಲಿನ ನೀರು ಅಥವಾ ಉಗುರುಬಿಸಿ ನೀರು ಬಳಸಿ ಪಾನೀಯ ತಯಾರಿಸುವುದು ಯೋಗ್ಯವಾದುದು.

Leave a Reply

Your email address will not be published. Required fields are marked *