‘ಘನಾಕೃತಿ’ ಶಿಲ್ಪಕಲಾ ಪ್ರದರ್ಶನಕ್ಕೆ ಚಾಲನೆ

ಮೈಸೂರು: ಸಿದ್ದಾರ್ಥನಗರದ ಚಾಮರಾಜೇಂದ್ರ ದೃಶ್ಯ ಕಲಾ ಕಾಲೇಜಿನಲ್ಲಿ ಮೂರು ದಿನಗಳ ಕಾಲ ಆಯೋಜಿಸಿರುವ ಕಲಾವಿದ ವೀರಣ್ಣ ಎಂ.ಅರ್ಕಸಾಲಿ ಅವರ ‘ಘನಾಕೃತಿ’ ಶಿಲ್ಪಕಲಾ ಪ್ರದರ್ಶನಕ್ಕೆ ಶನಿವಾರ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಆತ್ಮಜ್ಞಾನಾನಂದ ಮಹಾರಾಜ್ ಚಾಲನೆ ನೀಡಿದರು.

ಕಾಲೇಜಿನ ಶಿಲ್ಪಕಲಾ ವಿಭಾಗದ ಉಪನ್ಯಾಸಕರೂ ಆದ ವೀರಣ್ಣ ಎಂ.ಅರ್ಕಸಾಲಿ ಅವರು ಏ.30 ರಿಂದ ಮೇ 6 ರವರೆಗೆ ಮುಂಬೈನ ಜಹಾಂಗೀರ್ ಆರ್ಟ್ ಗ್ಯಾಲರಿಯಲ್ಲಿ ನಡೆಯಲಿರುವ ಶಿಲ್ಪಕಲಾ ಪ್ರದರ್ಶನದಲ್ಲಿ ತಮ್ಮ ಜೀವಮಾನದಲ್ಲಿ ತಯಾರಿಸಿರುವ ಕಲಾಕೃತಿಗಳನ್ನು ಪ್ರದರ್ಶನ ಮಾಡಲಿದ್ದಾರೆ. ಇದಕ್ಕೆ ಪೂರಕವಾಗಿ ಚಾಮರಾಜೇಂದ್ರ ದೃಶ್ಯ ಕಲಾ ಕಾಲೇಜಿನಲ್ಲಿ ಏ.23ರವರೆಗೆ ಪ್ರದರ್ಶನ ಆಯೋಜಿಸಿದ್ದಾರೆ. ಪ್ರದರ್ಶನದಲ್ಲಿ ಕಲ್ಲು, ಕಬ್ಬಿಣ, ಮರಗಳಿಂದ ತಯಾರಿಸಿರುವ 27 ಕಲಾಕೃತಿಗಳನ್ನು ಇಡಲಾಗಿದೆ. ಸಾರ್ವಜನಿಕರು ಬೆ.10 ರಿಂದ ಸಂ.5 ಗಂಟೆ ವರೆಗೆ ಪ್ರದರ್ಶನ ವೀಕ್ಷಿಸಬಹುದಾಗಿದೆ.

ಉದ್ಘಾಟನಾ ಕಾರ್ಯಕ್ರಮದಲ್ಲಿ ವೈದ್ಯ ಡಾ.ಎನ್.ಎಸ್.ಭಾಸ್ಕರ್, ಕಲಾವಿದ ವೀರಣ ್ಣ ಎಂ. ಅರ್ಕಸಾಲಿ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *