ಮಲಬದ್ಧತೆಯಿಂದ ತೊಂದರೆ ಅನುಭವಿಸುತ್ತಿದ್ದೀರಾ?; ಇಲ್ಲಿದೆ ನೋಡಿ ಪರಿಣಾಮಕಾರಿ ಮನೆಮದ್ದು..

blank

ತುಪ್ಪ ನಮ್ಮ ಆರೋಗ್ಯಕ್ಕೆ ವಿವಿಧ ರೀತಿಯಲ್ಲಿ ಪ್ರಯೋಜನಕಾರಿ ಆಗಿದೆ. ಸಾಮಾನ್ಯವಾಗಿ ತುಪ್ಪ ಹೊಟ್ಟೆಗೆ, ಮೆದುಳಿನ ಚುರುಕುತನಕ್ಕೆ, ಕೂದಲಿಗೆ, ಚರ್ಮಕ್ಕೆ ತುಂಬಾ ಒಳ್ಳೆಯದು ಎನ್ನುವುದು ತಿಳಿದಿರುವ ವಿಚಾರ. ಆದರೆ ತುಪ್ಪದ ಸೇವನೆ ಆರೋಗ್ಯಕ್ಕೆ ಮಾತ್ರವಲ್ಲದೆ ಮಲಬದ್ಧತೆಗೂ ಸೂಕ್ತ ಪರಿಹಾರ ನೀಡುತ್ತದೆ ಎಂಬುದು ನಿಮಗೆ ತಿಳಿದಿದೆಯೇ? ಹಾಗಾದರೆ ಮಲಬದ್ಧತೆ ವಿರುದ್ಧ ತುಪ್ಪ ಯಾವ ರೀತಿ ಕೆಲಸ ಮಾಡುತ್ತದೆ. ಇದರ ಉಪಯೋಗಗಳೇನು? ಹೇಗೆಲ್ಲ ತುಪ್ಪ ಸೇವಿಸಬಹುದು? ಎಂಬೆಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

blank

ಹೊಟ್ಟೆಯಲ್ಲಿನ ಎಂಥದ್ದೋ ತಳಮಳ ನಿಮಗೆ ಮಲಬದ್ಧತೆಯ ಸೂಚನೆ ನೀಡುತ್ತಿರಬಹುದು. ಒಂದು ವೇಳೆ ಈ ಹೊಟ್ಟೆಕಟ್ಟುವಿಕೆಯಿಂದ ನೀವು ಬಳಲುತ್ತಿದ್ದು, ಅದಕ್ಕಾಗಿ ಒಂದಷ್ಟು ಔಷಧ ತಿನ್ನುವುದು, ಸಾಲದ್ದಕ್ಕೆ ಇನ್ನೊಂದಷ್ಟು ಆಹಾರಪದಾರ್ಥಗಳನ್ನು ಟ್ರೈ ಮಾಡಿ ರೋಸಿ ಹೋಗಿದ್ದೀರಾ? ಹಾಗಿದ್ದರೆ ಚಿಂತೆ ಬಿಡಿ.. ಮಲಬದ್ಧತೆ ನಿರ್ವಹಿಸಲು ನಿಮಗಾಗಿ ಒಂದು ದೇಸಿ ಹ್ಯಾಕ್ ಇಲ್ಲಿದೆ. ಇದನ್ನು ಸಾಮಾನ್ಯವಾಗಿ ಹಿಂದೆಲ್ಲ ನಮ್ಮ ಹಿರಿಯರು ಮನೆಗಳಲ್ಲಿ ಬಳಸುತ್ತಿದ್ದರು.

ಮಲಬದ್ಧತೆಗೆ ಕಾರಣ: ಒಂದೇ ಸ್ಥಳದಲ್ಲಿ ಹೆಚ್ಚು ಗಂಟೆಗಳ ಕಾಲ ಕುಳಿತು ಕೆಲಸ ಮಾಡುವುದರಿಂದ ಮತ್ತು ದೈಹಿಕ ಚಟುವಟಿಕೆಯ ಕೊರತೆಯಿಂದಾಗಿ ಇತ್ತೀಚೆಗೆ ಮಲಬದ್ಧತೆ ಸಮಸ್ಯೆ ಹೆಚ್ಚಾಗುತ್ತಿದೆ. ನೀವು ಸಹ ಇದೇ ರೀತಿಯ ಸಮಸ್ಯೆ ಎದುರಿಸುತ್ತಿದ್ದರೆ, ಬಿಸಿ ನೀರು ಮತ್ತು ತುಪ್ಪ ಪರಿಣಾಮಕಾರಿ ಯಾಗಿ ಪರಿಹಾರ ನೀಡಬಲ್ಲದು.

ಬಿಸಿನೀರು ಮತ್ತು ತುಪ್ಪದಿಂದ ಮಲಬದ್ಧತೆ ನಿವಾರಣೆ ಹೇಗೆ?

ತುಪ್ಪ ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ನಯಗೊಳಿಸುತ್ತದೆ. ಇದರಿಂದ ಕರುಳಿನ ಚಲನೆ ಸುಲಭವಾಗುತ್ತದೆ. ಅಲ್ಲದೆ ಬಿಸಿನೀರಿನೊಂದಿಗೆ ತುಪ್ಪವನ್ನು ಬೆರೆಸಿದಾಗ, ಇದು ಗಟ್ಟಿಯಾದ ಮಲವನ್ನು ಮೃದುಗೊಳಿಸುತ್ತದೆ. ಬಿಸಿನೀರು ದೇಹದಿಂದ ತ್ಯಾಜ್ಯವನ್ನು ಹೊರಹಾಕಲು ಸಹಾಯ ಮಾಡುತ್ತದೆ ಎನ್ನುತ್ತಾರೆ ಆಯುರ್ವೇದ ತಜ್ಞರು.

ತುಪ್ಪವು ನಮ್ಮ ದೇಹವನ್ನು ನಯಗೊಳಿಸುವುದಲ್ಲದೆ ಕರುಳಿನ ಪ್ರದೇಶವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. ಇದು ತ್ಯಾಜ್ಯದ ಪರಿಚಲನೆಯನ್ನು ಸುಧಾರಿಸುತ್ತದೆ ಮತ್ತು ಮಲಬದ್ಧತೆಯ ಅಪಾಯವನ್ನು ಕಡಿಮೆ ಮಾಡುತ್ತದೆ ಎನ್ನುತ್ತಾರೆ ವೈದ್ಯರು.

ಪೋಲಿಷ್ ಜರ್ನಲ್ ಪ್ರಜೆಗ್ಲಾಡ್ ಗ್ಯಾಸ್ಟ್ರೋಎಂಟರಾಲಜಿ ವಿಮರ್ಶೆಯಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ತುಪ್ಪವು ಬ್ಯುಟರಿಕ್ ಆಮ್ಲದ ಶ್ರೀಮಂತ ಮೂಲವಾಗಿದೆ. ಬ್ಯುಟರಿಕ್ ಆಮ್ಲದ ಸೇವನೆಯು ಕರುಳಿನ ಚಯಾಪಚಯವನ್ನು ಸುಧಾರಿಸುತ್ತದೆ ಮತ್ತು ಮಲ ಚಲನೆಗೆ ಸಹಾಯ ಮಾಡುತ್ತದೆ ಎಂದು ತಿಳಿಸಿದೆ. ಇದರೊಂದಿಗೆ ಹೊಟ್ಟೆ ನೋವು, ಉಬ್ಬುವುದು ಸೇರಿದಂತೆ ಇತರ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ ಎನ್ನಲಾಗಿದೆ.

ತುಪ್ಪವು ಅತ್ಯುತ್ತಮ ನೈಸರ್ಗಿಕ ವಿರೇಚಕವಾಗಿದೆ. ತುಪ್ಪದ ಸೇವನೆಯು ತೂಕ ನಷ್ಟ, ಉತ್ತಮ ನಿದ್ರೆ ಸೇರಿದಂತೆ ಮೂಳೆಗಳ ಬಲ ಹೆಚ್ಚಿಸುವಂತಹ ಅನೇಕ ವಿಷಯಗಳಲ್ಲಿ ಸಹಾಯ ಮಾಡುತ್ತದೆ.

ತುಪ್ಪ ಮತ್ತು ಬಿಸಿ ನೀರನ್ನು ಸೇವಿಸುವ ವಿಧಾನ

ಒಂದು ಲೋಟ ಬೆಚ್ಚಗಿನ ನೀರಿನಲ್ಲಿ ಒಂದು ಚಮಚ ತುಪ್ಪವನ್ನು ಬೆರೆಸಿ ಮತ್ತು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ನೀವು ಇದನ್ನು ಪ್ರತಿದಿನ ಕುಡಿಯಬಹುದು. ಆದರೆ ನೀರು ತುಂಬ ಬಿಸಿಯಾಗಿರದಂತೆ ನೋಡಿಕೊಳ್ಳಬೇಕು.

ಜೀರ್ಣಾಂಗ, ಕರುಳು ಮತ್ತು ಕೊಲೊನ್ ಗಟ್ಟಿಯಾದಾಗ ಅಥವಾ ಒಣಗಿದಾಗ ಮಲಬದ್ಧತೆ ಸಂಭವಿಸುತ್ತದೆ. ತುಪ್ಪದ ನಯಗೊಳಿಸುವ ಗುಣಲಕ್ಷಣಗಳು ಜೀರ್ಣಾಂಗ ವ್ಯವಸ್ಥೆ ಮೃದುಗೊಳಿಸುವ ಮೂಲಕ ಮಲಬದ್ಧತೆ ತಡೆಗೆ ಸಹಾಯ ಮಾಡುತ್ತದೆ ಮತ್ತು ದೇಹದಿಂದ ತ್ಯಾಜ್ಯವನ್ನು ಸುಲಭವಾಗಿ ತೆಗೆದುಹಾಕುತ್ತದೆ. ಹಾಗಿದ್ದರೆ ಇನ್ನೇಕೆ ತಡ ಮಲಬದ್ಧತೆಗೆ ಪರಿಹಾರ ಹುಡುಕುತ್ತಿರುವವರು, ಈ ಮನೆಮದ್ದನ್ನು ತಪ್ಪದೇ ಟ್ರೈ ಮಾಡಿ ನೋಡಿ.

ಪ್ರೆಗ್ನೆನ್ಸಿ ಡಯೆಟ್ ಬಗ್ಗೆ ಗೊಂದಲ ಬೇಡ: ಇಲ್ಲಿದೆ ನೋಡಿ ಪೋಷಕಾಂಶಭರಿತ ಆಹಾರ-ಪದಾರ್ಥಗಳ ಪಟ್ಟಿ

ಈತ ನಿಮ್ಮಲ್ಲಿಗೂ ಬಂದಿರಬಹುದು!; ಗಸ್ತು ಪೊಲೀಸರ ಕೈಗೆ ಸಿಕ್ಕಿಬಿದ್ದ ನಕಲಿ ಆದಾಯ ತೆರಿಗೆ ಅಧಿಕಾರಿ
Share This Article

ಅಧಿಕ ನೀರು ಕುಡಿಯುವುದರಿಂದ ಈ 6 ದೊಡ್ಡ ಸಮಸ್ಯೆಗಳು ಕಾಡಬಹುದಂತೆ! | Drinking water

Drinking water:ಸಾಮಾನ್ಯವಾಗಿ ನೀರು ಕುಡಿಯವುದರಿಂದ ಅನೇಕ ರೋಗದ ಸಮಸ್ಯೆಗಳು ದೂರುವಾಗುತ್ತದೆ. ಅಲ್ಲದೆ, ಆರೋಗ್ಯಕ್ಕೆ ಊಟ ಎಷ್ಟು…

ಪದೇಪದೆ ವಿವಾಹದ ಪ್ರಸ್ತಾಪಗಳು ಮುರಿದು ಬೀಳುತ್ತಿದೆಯೇ? ಈ ಕ್ರಮಗಳು ಅನುಸರಿಸಿ; ಮದುವೆಯ ಅಡೆತಡೆಗಳನ್ನು ನಿವಾರಿಸಿ | Marriage Proposals

Marriage Proposals : ಜೀವನದ ಅತಿದೊಡ್ಡ ತಿರುವು ಎಂದ್ರೆ ಅದು ಮದುವೆ. ಮದುವೆ ಎಂದ್ರೆ ಎಲ್ಲರಿಗೂ…

ಸ್ನಾಕ್ಸ್​ ತಿನ್ನುವುದರಿಂದಲೂ ತೂಕ ಇಳಿಸಿಕೊಳ್ಳಬಹುದು!: ಈ ಸಿಂಪಲ್​ ಹೆಲ್ತ್​​ ಟಿಪ್ಸ್​ ಫಾಲೋ ಮಾಡಿ.. | Weight Lose

Weight Lose: ಸರಿಯಾದ ಆಯ್ಕೆಗಳೊಂದಿಗೆ ಸ್ನಾಕ್ಸ್ ತಿನ್ನುವುದರಿಂದಲೂ ಕೂಡ ತೂಕ ಇಳಿಕೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ…