ಕಲಾದಗಿ: ಗ್ರಾಮದ ಸರ್ಕಾರಿ ಪಶು ಆಸ್ಪತ್ರೆಯಲ್ಲಿ ಕಾಲುಬಾಯಿ ರೋಗ ಲಸಿಕಾ ಅಭಿಯಾನಕ್ಕೆ ಕಲಾದಗಿ ಗ್ರಾಪಂ ಅಧ್ಯಕ್ಷೆ ಖಾತುನಬೀ ರೋಣ ಹಾಗೂ ಉಪಾದ್ಯಕ್ಷ ಕೀರಪ್ಪ ಮಾದರ ಚಾಲನೆ ನೀಡಿದರು.

ಪಶು ವೈದ್ಯಾಧಿಕಾರಿ ಎಂ.ಡಿ. ಹೂಗಾರ ಮಾತನಾಡಿ, ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ರಾಜ್ಯಾದ್ಯಂತ ನಡೆಯುತ್ತಿರುವ ಉಚಿತ ಲಸಿಕಾ ಅಭಿಯಾನದಲ್ಲಿ ಎಲ್ಲ ರೈತ ಭಾಂಧವರು ಪಾಲ್ಗೊಳ್ಳಬೇಕು. ಕಾಲುಬಾಯಿ ರೋಗ ಸಾಂಕ್ರಾಮಿಕವಾಗಿದ್ದು ಕಡ್ಡಾಯವಾಗಿ ಎಲ್ಲ ಮಾಲಿಕರು ತಮ್ಮ ಹಸುಗಳಿಗೆ, ಎಮ್ಮೆಗಳಿಗೆ ಲಸಿಕೆ ಹಾಕಿಸುವುದರೊಂದಿಗೆ ಜಾನುವಾರುಗಳು ರೋಗಕ್ಕೆ ತುತ್ತಾಗದಂತೆ ಎಚ್ಚರಿಕೆ ವಹಿಸಬೇಕು ಎಂದರು.
ಮುಖಂಡರಾದ ಹಸನ್ ಅಹ್ಮದ ರೋಣ, ಮುತ್ತು ಮಾದರ, ಸಿಬ್ಬಂದಿ ಮಲ್ಲಪ್ಪ ಮೇಟಿ,ಬಾಬು ಮಾದರ ಇದ್ದರು.
TAGGED:ಕಲಾದಗಿ