blank

ಟ್ರಾಫಿಕ್​ ಸಮಸ್ಯೆಗೆ ಮುಕ್ತಿ!

ಟ್ರಾಫಿಕ್​ ಸಮಸ್ಯೆಗೆ ಮುಕ್ತಿ!

ಮುಳಬಾಗಿಲಿನ ಎಂಸಿ ರಸ್ತೆಯ ಹುಣಸೆ ಮರದ ಬಳಿ ಶಿಸ್ತಾಗಿ ದ್ವಿಚಕ್ರ ವಾಹನಗಳನ್ನು ನಿಲ್ಲಿಸಿರುವುದರಿಂದ ರಸ್ತೆ ವಿಶಾಲವಾಗಿರುವುದು.

ಮುಳಬಾಗಿಲಿನಲ್ಲಿ ಬಗೆಹರಿದ ವಾಹನದಟ್ಟಣೆ,ನಿಯಮ ಪಾಲಿಸದವರಿಗೆ ದಂಡಾಸ್ತ್ರ

ಎ.ಅಪ್ಪಾಜಿ ಗೌಡ ಮುಳಬಾಗಿಲು
ನಗರದಲ್ಲಿ ಹಲವು ವರ್ಷಗಳಿಂದ ತೊಂದರೆಯಾಗಿ ಕಾಡುತ್ತಿದ್ದ ಟ್ರಾಫಿಕ್​ ಸಮಸ್ಯೆಗೆ ಪೊಲೀಸರು ಮುಕ್ತಿ ನೀಡಿದ್ದಾರೆ. ನಗರದಲ್ಲಿ ಇತ್ತೀಚಿನ ವರ್ಷಗಳಲ್ಲಿ ಸಂಚಾರಿ ನಿಯಮಗಳೇ ಇಲ್ಲವಾಗಿದ್ದು, ರಸ್ತೆ ಬದಿ ವ್ಯಾಪಾರಿಗಳು ಪುಟ್​ಪಾತ್​ನಲ್ಲಿಯೇ ಹಣ್ಣು, ತರಕಾರಿ, ವೀಳ್ಯದೆಲೆ, ಹೂವು ಮಾರಾಟ ಮಾಡುತ್ತಿದ್ದರು. ಇದರಿಂದ ಪಾದಚಾರಿಗಳು ನಡೆದಾಡಲು ಮುಖ್ಯ ರಸ್ತೆಯನ್ನೇ ಆಶ್ರಯಿಸಬೇಕಾಗಿತ್ತು. ಅಂಗಡಿಗಳ ಮುಂದೆ ಸಾರ್ವಜನಿಕರು ವಾಹನ ನಿಲುಗಡೆ ಮಾಡುತ್ತಿದ್ದರಿಂದ ಮತ್ತಷ್ಟು ಟ್ರಾಫಿಕ್​ ಸಮಸ್ಯೆ ಎದುರಾಗಿತ್ತು.


ಅಂಬೇಡ್ಕರ್​ ವೃತ್ತದಿಂದ ತಾಲೂಕು ಸೊಸೈಟಿ ವೃತ್ತದವರೆಗೆ, ಬೆಸ್ಕಾಂ ಮುಂಭಾಗದಿಂದ ಬಸ್​ ನಿಲ್ದಾಣ ರಸ್ತೆ ಸೇರಿ ತಾಲೂಕು ಕಚೇರಿವರೆಗೂ ರಸ್ತೆಯಲ್ಲಿಯೇ ಪಾದಚಾರಿಗಳು ಓಡಾಡುತ್ತಿದ್ದರಿಂದ ಹಾಗೂ ರಸ್ತೆಯಲ್ಲೇ ವಾಹನ ನಿಲ್ಲಿಸುತ್ತಿದ್ದರಿಂದ ಸುಗಮ ವಾಹನ ಸಂಚಾರಕ್ಕೆ ಸಂಚಕಾರ ಉಂಟಾಗಿತ್ತು.ಈ ಹಿನ್ನೆಲೆಯಲ್ಲಿ ಶಾಸಕ ಸಮೃದ್ಧಿ ವಿ.ಮಂಜುನಾಥ್​ ಸೇರಿ ರಾಜಕೀಯ ನಾಯಕರ ಬೆಂಬಲ, ಎಸ್​ಪಿ ಬಿ.ನಿಖಿಲ್​, ಎಎಸ್​ಪಿಗಳಾದ ರವಿಶಂಕರ್​, ಜಗದೀಶ್​, ಉಪ ವಿಭಾಗದ ಡಿವೈಎಸ್​ ಪಿ.ಡಿ.ಸಿ. ನಂದಕುಮಾರ್​ ಮಾರ್ಗದರ್ಶನದಲ್ಲಿ ಇನ್​ಸ್ಪೆಕ್ಟರ್​ ಎನ್​.ರಾಜಣ್ಣ ಹಾಗೂ ಸಿಬ್ಬಂದಿ ಪುಟ್​ಪಾತ್​ ಒತ್ತುವರಿ ತೆರವು ಹಾಗೂ ಅಡ್ಡಾದಿಡ್ಡಿ ವಾಹನ ನಿಲುಗಡೆಗೆ ಬ್ರೇಕ್​ ಹಾಕಿದ್ದು, ಮುಳಬಾಗಿಲಿನ ಸುಗಮ ಸಂಚಾರಕ್ಕೆ ಮುನ್ನುಡಿಯಾಗಿದೆ.


ಪುಟ್​ಪಾತ್​ ಒತ್ತುವರಿ ತೆರವು: ಇತ್ತೀಚೆಗೆ ತಾಲೂಕು ಸೊಸೈಟಿ ಮುಂಭಾಗದ ವೃತ್ತದಲ್ಲಿ ಹಾಗೂ ಹೂವಿನನ ಮಾರುಕಟ್ಟೆ ವೃತ್ತದಲ್ಲಿ ನಗರಸಭೆಯಿಂದ ಸಿಗ್ನಲ್​ ಲೈಟ್​ ಅಳವಡಿಸಿದ್ದು, ಕಾರ್ಯಗತಕ್ಕೆ ಬರುವ ಮುನ್ನವೇ ಪೊಲೀಸರು ಫುಟ್​ಪಾತ್​ ಅಂಗಡಿಗಳ ಒತ್ತುವರಿ, ಬದಿಯಲ್ಲಿ ಅಡ್ಡಾದಿಡ್ಡಿ ನಿಲ್ಲಿಸುತ್ತಿದ್ದ ದ್ವಿಚಕ್ರ ವಾಹನಗಳನ್ನು ಪೊಲೀಸ್​ ಠಾಣೆಗೆ ಹೊತ್ತೊಯುತ್ತಿದ್ದಂತೆ ರಸ್ತೆಗಳು ವಿಶಾಲವಾಗಿ ಗೋಚರಿಸುತ್ತಿವೆ. ಪೊಲೀಸರ ಕಾರ್ಯವೈಖರಿಗೆ ಎಚ್ಚೆತ್ತುಕೊಂಡ ಜನತೆಗೀಗ ನಗರದಲ್ಲಿ ಟ್ರಾಫಿಕ್​ ಸಮಸ್ಯೆ ನಿವಾರಣೆಯಾಗಿದೆ.


ತಾಲೂಕು ಕೇಂದ್ರದಲ್ಲಿ ಸಂಚಾರ ಸುಗಮವಾಗಿರಬೇಕು. ಶಾಸಕರು ಸೇರಿ ಜನಪ್ರತಿನಿಧಿಗಳು ಈ ಬಗ್ಗೆ ಕಾಳಜಿವಹಿಸಿ ವ್ಯಾಪಾರಿಗಳಿಗೂ ತೊಂದರೆಯಾಗದಂತೆ ಎಪಿಎಂಸಿ ಆವರಣದಲ್ಲಿ ಎಲ್ಲ ಪುಟ್​ಪಾತ್​ ಅಂಗಡಿ ಮಾಲೀಕರಿಗೆ ಅವಕಾಶ ಮಾಡಿಕೊಡಬೇಕು. ಗ್ರಾಹಕರು ವಾಹನ ನಿಲ್ಲಿಸಲು ಸೂಕ್ತ ವ್ಯವಸ್ಥೆ ಮಾಡಿಕೊಟ್ಟರೆ ಎಲ್ಲರಿಗೂ ಅನುಕೂಲವಾಗುತ್ತದೆ.

ಎಂ.ಸಿ.ನೀಲಕಂಠೇಗೌಡ ಅವಣಿ ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ

ಹಲವು ವರ್ಷಗಳಿಂದ ಸಂಚಾರಿ ನಿಯಮಗಳ ಪಾಲನೆ ಇರಲಿಲ್ಲ. ಅಂಗಡಿ ಮುಂಗಟ್ಟುಗಳ ಮುಂದೆ ದ್ವಿಚಕ್ರ ವಾಹನಗಳನ್ನು ನಿಲ್ಲಿಸಿ ಜನರು ವ್ಯಾಪಾರ ಮಾಡುತ್ತಾರೆ. ಈಗ ಏಕಾಏಕಿ ಪುಟ್​ಪಾತ್​ ಅಂಗಡಿ ತೆರವುಗೊಳಿಸಿದ್ದರಿಂದ ತೊಂದರೆ ಉಂಟಾಗಿದೆ. ತೆರವಿಗೆ ಮಾಹಿತಿ ಜತೆಗೆ ಸಮಯಾವಕಾಶ ನೀಡಬೇಕಿತ್ತು.

ಮಹ್ಮದ್​ ಆಸಿಫ್​ ಅಂಗಡಿ ಮಾಲೀಕ

Share This Article

ಮನೆಯಲ್ಲೇ ಗಟ್ಟಿ ಮೊಸರು ಮಾಡುವ ವಿಧಾನ ನಿಮಗೆ ತಿಳಿದಿದೆಯೇ; ಇಲ್ಲಿದೆ ಸಿಂಪಲ್ ಟ್ರಿ​ಕ್ಸ್​​​​​ | Health Tips

ಚಳಿಗಾಲವಿರಲಿ, ಬೇಸಿಗೆಯಿರಲಿ ಮೊಸರನ್ನು ಇಷ್ಟಪಡುವವರು ಹವಾಮಾನ ಬದಲಾದಾಗಲೂ ಅದನ್ನು ತಿನ್ನುವುದನ್ನು ನಿಲ್ಲಿಸುವುದಿಲ್ಲ. ಚಳಿ ಹೆಚ್ಚಾದಾಗಲೂ ಅನೇಕರು…

ಊಟದ ಸಮಯದಲ್ಲಿ ಈ ತಪ್ಪುಗಳನ್ನು ಮಾಡಲೇಬೇಡಿ; ಮಾಹಿತಿ ತಿಳಿದು ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗುವುದನ್ನು ತಪ್ಪಿಸಿ | Health Tips

ಮಧುಮೇಹವು ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ವೇಗವಾಗಿ ಹರಡುತ್ತಿದೆ. WHO ಕೂಡ ಈ ಬಗ್ಗೆ ಕಳವಳ ವ್ಯಕ್ತಪಡಿಸಿದೆ.…

ಈ ಪದಾರ್ಥಗಳನ್ನು ಯಾವುದೇ ಕಾರಣಕ್ಕೂ ಕುಕ್ಕರ್‌ನಲ್ಲಿ ಬೇಯಿಸಬೇಡಿ, ವಿಷಕಾರಿಯಾಗಬಹುದು ಎಚ್ಚರ! Pressure Cooker

Pressure Cooker : ಪ್ರೆಶರ್​ ಕುಕ್ಕರ್ ಇಂದು ಪ್ರತಿ ಮನೆಗಳಲ್ಲೂ ಅಗತ್ಯವಿರುವ ಅಡುಗೆ ಸಲಕರಣೆಗಳಲ್ಲಿ ಒಂದಾಗಿದೆ.…