ಮಕ್ಕಳಿಗೆ ಮಾಜಿ ಸಚಿವ ಎ.ಚೌಡರೆಡ್ಡಿ ಹಿತವಚನ | ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಮಗ್ರಿಗಳ ವಿತರಣೆ
ಚಿಂತಾಮಣಿ: ನಗರದ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಶ್ರೀ ವಿದ್ಯಾಗಣಪತಿ ಟೆಂಪಲ್ ಟ್ರಸ್ಟ್ ವತಿಯಿಂದ ಶುಕ್ರವಾರ ನೋಟ್ ಪುಸ್ತಕ ಹಾಗೂ ಲೇಖನ ಸಾಮಗ್ರಿಗಳನ್ನು ವಿತರಿಸಲಾಯಿತು.
ಟ್ರಸ್ಟ್‌ನ ಅಧ್ಯಕ್ಷ ಹಾಗೂ ಮಾಜಿ ಗೃಹಸಚಿವ ಎ.ಚೌಡರೆಡ್ಡಿ ಮಾತನಾಡಿ, ಟ್ರಸ್ಟ್ ಪ್ರಾರಂಭವಾದಾಗಿನಿಂದ ಉತ್ತಮ ಕಾರ್ಯಗಳನ್ನು ಹಮ್ಮಿಕೊಂಡು ಬರುತ್ತಿದೆ. ಮಕ್ಕಳು ಉತ್ತಮ ವಿದ್ಯಾಭ್ಯಾಸ ಪಡೆದುಕೊಂಡು ಉತ್ತಮ ಪ್ರಜೆಗಳು ಆಗಬೇಕೆಂದು ಸಲಹೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಉಮಾದೇವಿ ಮಾತನಾಡಿ, ಸರ್ಕಾರದ ಸೌಲಭ್ಯದ ಜತೆಗೆ ದಾನಿಗಳು ಕೈಜೋಡಿಸಿ ಮಕ್ಕಳ ಗುಣಾತ್ಮಕ ಶಿಕ್ಷಣಕ್ಕೆ ಶ್ರಮಿಸುತ್ತಿದ್ದಾರೆ. ಹಲವಾರು ವರ್ಷಗಳಿಂದ ಟ್ರಸ್ಟ್‌ನಿಂದ ಶಾಲಾ ಮಕ್ಕಳಿಗೆ ಲೇಖನ ಸಾಮಾಗ್ರಿ ವಿತರಿಸುತ್ತಿರುವುದು ಸಂತಸ ವಿಚಾರ ಎಂದರು.
ಸರ್ಕಾರ 18 ವರ್ಷ ವಯಸ್ಸಿನ ಮಕ್ಕಳ ಕಲಿಕಾ ಉದ್ದೇಶದಿಂದ ಸಮೀಪದ ಶಾಲೆಗಳಿಗೆ ದಾಖಲಾತಿ, ಗುಣಾತ್ಮಕ ಶಿಕ್ಷಣ, ಪಠ್ಯಪುಸ್ತಕ, ಸಮವಸ್ತ್ರ, ಬಿಸಿಯೂಟ, ಕ್ಷೀರಭಾಗ್ಯ ಯೋಜನೆಯಡಿ ಕೆನೆಭರಿತ ಹಾಲು, ಮೊಟ್ಟೆ ವಿತರಣೆಯಂತಹ ಉತ್ತಮ ಸೌಲಭ್ಯಗಳನ್ನು ನಿಡುತ್ತಿದೆ ಎಂದು ಬಿಇಓ ವಿವರಿಸಿದರು.
ಟ್ರಸ್ಟ್‌ನ ಉಪಾಧ್ಯಕ್ಷ ಜೆ.ವಿಭಾಕರರೆಡ್ಡಿ ಮಾತನಾಡಿದರು. ನಗರಸಭಾಧ್ಯಕ್ಷ ಅ.ಜಗನ್ನಾಥ್, ಸದಸ್ಯ ರೆಡ್ಡಪ್ಪ ಮಾತನಾಡಿದರು. ನಗರ ಯೋಜನಾ ಪ್ರಾಧಿಕಾದ ಅಧ್ಯಕ್ಷ ಶ್ರೀನಾಥಬಾಬು, ಟ್ರಸ್ಟ್‌ನ ಸದಸ್ಯರಾದ ಮುನಿಸ್ವಾಮಿರೆಡ್ಡಿ, ಕೆ.ಸಿ.ಗೋಪಾಲರೆಡ್ಡಿ, ಎಸ್.ಜಿ. ಶ್ರೀನಿವಾಸ್, ರಾಜಗೋಪಾಲ್, ಶ್ರೀನಿವಾಸ್‌ನಾಯ್ಡು, ನಾಗರಾಜ್, ನಗರಸಭೆಯ ಉಪಾದ್ಯಕ್ಷೆ ರಾಣಿಯಮ್ಮ, ಸರ್ಕಾರಿ ನೌಕರರ ಸಂಘ ಅಧ್ಯಕ್ಷ ಆರ್.ಅಶೋಕ್ ಕುಮಾರ್, ಎಚ್.ಎಂ ವೆಂಕಟರವಣಪ್ಪ, ನಗರಸಭಾ ಸದಸ್ಯರು, ಮುಖಂಡರು ಮತ್ತಿತರರು ಉಪಸ್ಥಿತರಿದ್ದರು.