ಬೆಂಗಳೂರು: ಮಹಿಳೆಯರ ಮೇಲಿನ ದೌರ್ಜನ್ಯ ಕುರಿತು ಕಿರುತೆರೆ ನಟಿ ಕಾವ್ಯ ಗೌಡ ತಮ್ಮ ಇನ್ಸ್ಟಾಗ್ರಾಂನಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದು, ಹೆಣ್ಣು ಮಕ್ಕಳಿಗೆ ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ.
ಡಿಯರ್ ಗರ್ಲ್ಸ್, ನಿಮ್ಮ ಪ್ರೀತಿಯನ್ನು ಸಾಬೀತು ಪಡಿಸಲು ನೀವು ಬಟ್ಟೆ ಬಿಚ್ಚ ಬೇಕಾಗಿಲ್ಲ. ಮದುವೆಗೂ ಮುಂಚೆ ಡೇಟಿಂಗ್ ಹೋಗುವುದು ಸರಿ. ಆದರೆ, ಮಂಚಕ್ಕೆ ಹೋಗುವುದು ಒಳ್ಳೆಯದಲ್ಲ. ನಿಮಗಾಗಿ ಸೇಫ್ಟಿ ಪ್ಯಾಡ್ ಖರೀದಿಸಬಹುದಾದ ಹುಡುನನ್ನು ಪಡೆಯಿರಿ, ಕಾಂಡೋಮ್ ಕೊಳ್ಳುವವನಲ್ಲ. ಅವನ ಮನೆಗೆ ಕರೆದೊಯ್ಯುವಂತಹ ಹುಡಗನನ್ನು ಪಡೆಯಿರಿ, ಹೋಟೆಲ್ಗೆ ಕರೆದೊಯ್ಯುವವನಲ್ಲ. ನಿಮ್ಮ ಮುಟ್ಟಿನ ನೋವಿನ ಬಗ್ಗೆ ಕೇಳುವಂತಹ ಹುಡುಗನನ್ನು ಪಡೆಯಿರಿ, ನಿಮ್ಮ ಬೆತ್ತಲೆ ಬೇಡುವವನಲ್ಲ ಮತ್ತು ನಿಮ್ಮ ಮನಸ್ಸು ಮತ್ತು ಹೃದಯವನ್ನು ಆಯ್ಕೆ ಮಾಡುವ ಹುಡುಗನನ್ನು ಪಡೆದುಕೊಳ್ಳಿ, ನಿಮ್ಮೆ ದೇಹ ಕೇಳುವವನಲ್ಲ ಎಂದು ಅರ್ಥಗರ್ಭಿತವಾಗಿ ಕಾವ್ಯ ಅವರು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ರಾಕುಲ್ ಸೇರಿ ಮೂವರು ನಟಿಯರ ಹೆಸರು ಹೇಳಿದ ರಿಯಾ: ಎನ್ಸಿಬಿ ಪಟ್ಟಿಯಲ್ಲಿದೆ ಸ್ಪೋಟಕ ಮಾಹಿತಿ!
ಮತ್ತಷ್ಟು ವಿಚಾರಗಳನ್ನು ಪ್ರಸ್ತಾಪ ಮಾಡಿರುವ ಕಾವ್ಯ, ಗೌರವವು ಪ್ರೀತಿಯ ಶ್ರೇಷ್ಠ ಅಭಿವ್ಯಕ್ತಿಗಳಲ್ಲಿ ಒಂದಾಗಿದೆ. ಒಬ್ಬ ನಿಜವಾದ ವ್ಯಕ್ತಿ ಮಹಿಳೆಗೆ ನೋವು ಮಾಡುವುದಿಲ್ಲ. ಮಹಿಳೆಯೆಂದರೆ ನಿಮ್ಮ ಬಟ್ಟೆಗಳನ್ನು ತೊಳೆಯುವ ಮತ್ತು ನಿಮಗಾಗಿ ಅಡುಗೆ ಮಾಡುವ ಹೆಂಡತಿಯಲ್ಲ. ಮನೆಯಲ್ಲಿ ಸಕಲವನ್ನು ನಿರ್ವಹಿಸಿ ಒಂದು ಕುಟುಂಬವನ್ನು ಒಟ್ಟಿಗೆ ಕೊಂಡೊಯ್ಯುವ ಓರ್ವ ಗೃಹಿಣಿ. ಮಹಿಳೆಯರಿಗೆ ಗೌರವ ತೋರಿಸುವುದು ಶ್ರೇಷ್ಠ ಉಡುಗೊರೆಗಳಲ್ಲಿ ಒಂದಾಗಿದೆ ಎಂದು ಕಾವ್ಯ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಕಾವ್ಯ ಗೌಡ ಅವರ ಪೋಸ್ಟ್ ಇದೀಗ ವೈರಲ್ ಆಗಿದ್ದು, ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಅನೇಕರು ತಮ್ಮದೇ ರೀತಿಯಲ್ಲಿ ಕಾವ್ಯಾರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದಾರೆ.
https://www.instagram.com/p/CE8KB0snzdp/