ಗಂಡು ಹೆಣ್ಣು ತಾರತಮ್ಯ ಸಲ್ಲ

ಯಾದಗಿರಿ: ಗಂಡು ಹೆಣ್ಣು ಎಂಬ ತಾರತಮ್ಯ ಸಂಪೂರ್ಣ ತೊಲಗಿದಾಗ ಮಾತ್ರ ನಾಗರಿಕ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಜೆಸ್ಕಾಂ ಇಇ ಡಿ.ರಾಘವೇಂದ್ರ ಅಭಿಪ್ರಯ ವ್ಯಕ್ತಪಡಿಸಿದ್ದಾರೆ.

ಜೆಸ್ಕಾಂ ಕಚೇರಿಯಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಸಹಯೋಗದಡಿ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಿಳಾ ನೌಕರರಿಗೆ ಯಾವುದೇ ಸಮಸ್ಯೆ ಬಾರದಂತೆ ನೋಡಿಕೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ಮಹಿಳಾ ಕುಂದುಕೊರತೆ ವೇದಿಕೆ ಆರಂಭಿಸಲಾಗುವುದು ಎಂದು ಹೇಳಿದರು.

ಕೆಇಬಿ ನೌಕರರ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ಹಣಮಂತರೆಡ್ಡಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಲ್ಯಾಣ ಸಂಸ್ಥೆ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ಚಂದಪ್ಪ, ರಾಜು ಪತ್ತಾರ, ಲೆಕ್ಕಾಧಿಕಾರಿ ಅಶೋಕ, ಸುರೇಖಾ ಡಿ.ಕಟ್ಟಿಮನಿ, ವಿದ್ಯುತ್ ಪರಿವೀಕ್ಷಕಿ ಅನ್ನಪೂರ್ಣ, ಸುಜೀತಕುಮಾರ, ವಿಶ್ವನಾಥರೆಡ್ಡಿ, ಸಂಜೀವಕುಮಾರ ಇತರರಿದ್ದರು.

ಮಹಿಳಾ ದಿನ ನಿಮಿತ್ತ ಹಮ್ಮಿಕೊಂಡಿದ್ದ ಕ್ರೀಡೆ ಇತರ ಚಟುವಟಿಕೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮಹಿಳಾ ಅಧಿಕಾರಿ, ಸಿಬ್ಬಂದಿ ತಮ್ಮ ಅನಿಸಿಕೆ ಹಂಚಿಕೊಂಡರು.