ಟಿಲಿಬಿಸಿ (ಜಾರ್ಜಿಯಾ): ನಿರಾಶ್ರಿತರ ಶಿಬಿರದ ಹೊರಗೆ ಮೃತ ಮಹಿಳೆಯ ಶವದೊಂದಿಗೆ ಸಂಭೋಗ ನಡೆಸಿದ ಆರೋಪದಲ್ಲಿ ಜಾರ್ಜಿಯಾದ ವ್ಯಕ್ತಿಯೊಬ್ಬ ಬಂಧನಕ್ಕೆ ಒಳಗಾಗಿದ್ದಾನೆ.
ಇದನ್ನೂ ಓದಿ: 13 ವರ್ಷದ ಬಾಲಕನನ್ನು ಹೆಣ್ಣು ಮಗುವಿನ ತಂದೆಯಾಗಿ ಮಾಡಿದ ವಿವಾಹಿತೆಗೆ ಸಿಕ್ಕ ಶಿಕ್ಷೆ ಏನು ಗೊತ್ತಾ?
ಶಿಬಿರದ ಮುಂದೆ ಇಬ್ಬರು ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವ ಬಗ್ಗೆ ಬಿಬ್ ಕೌಂಟಿ ಅಧಿಕಾರಿಗಳು ಭಾನುವಾರ ದೂರವಾಣಿ ಕರೆ ಸ್ವೀಕರಿಸಿದ್ದರು. ತಕ್ಷಣ ವಾಲ್ನಟ್ ಸ್ಟ್ರೀಟ್ನ 100ನೇ ಬ್ಲಾಕ್ಗೆ ತೆರಳಿದ್ದಾರೆ. ಈ ವೇಳೆ ಡೇಬ್ರೇಕ್ ಸಂಪನ್ಮೂಲ ಕೇಂದ್ರದ ಬಳಿ 55 ವರ್ಷದ ಕೆನ್ನಿ ಒಬ್ರಾಯನ್ ಮಹಿಳೆಯೊಬ್ಬಳ ಜತೆ ಸಂಭೋಗದಲ್ಲಿ ತೊಡಗಿರುವುದನ್ನು ನೋಡಿದ್ದಾರೆ.
ಬಳಿಕ ಆರೋಪಿ ಒಬ್ರಾಯನ್ನನ್ನು ತನ್ನ ಬಟ್ಟೆಗಳನ್ನು ತೊಟ್ಟಿಕೊಳ್ಳುವಂತೆ ಹೇಳಿ ಮಹಿಳೆಯನ್ನು ಪರಿಶೀಲಿಸಿದಾಗ ಆಕೆ ಸಾವಿಗೀಡಾಗಿರುವುದನ್ನು ನೋಡಿ ಅಧಿಕಾರಿಗಳು ಬೆಚ್ಚಿ ಬಿದ್ದಿದ್ದಾರೆ. ಆಕೆ ಸ್ವಲ್ಪ ಸಮಯದ ಮುಂಚೆಯೇ ಮೃತಳಾಗಿದ್ದಾಳೆಂದು ವೈದ್ಯಾಧಿಕಾರಿಗಳು ಸಹ ತಿಳಿಸಿದ್ದಾರೆ.
ಇದನ್ನೂ ಓದಿ: ಯಾರೂ ಊಹಿಸಿರದ ಗುಟ್ಟೊಂದನ್ನು ರಟ್ಟು ಮಾಡಿದ್ರೂ ಡೊನಾಲ್ಡ್ ಟ್ರಂಪ್…!
ಮಹಿಳೆಯ ಸಾವಿಗೆ ಕಾರಣ ಏನಿರಬಹುದೆಂದು ತಿಳಿಯಲು ಅಧಿಕಾರಿಗಳು ತನಿಖೆಯನ್ನು ಆರಂಭಿಸಿದ್ದಾರೆ. ಆಕೆಯ ಸಾವಿನ ಸುದ್ದಿಯನ್ನು ಸಂಬಂಧಿಕರಿಗೆ ತಿಳಿಸುವವರೆಗೂ ಆಕೆಯ ಗುರುತನ್ನು ಬಿಡುಗಡೆ ಮಾಡದಿರಲು ಅಧಿಕಾರಿಗಳು ನಿರ್ಧರಿಸಿದ್ದಾರೆ.
ಅತ್ತ ಆರೋಪಿ ಒಬ್ರಾಯನ್ಗೆ ನೆಕ್ರೋಫಿಲಿಯಾ (ಶವಗಳೊಂದಿಗೆ ಸಂಭೋಗ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇಂತಹ ಪ್ರಕರಣಗಳಿಗೆ 2 ವರ್ಷಗಳಿಗೂ ಹೆಚ್ಚಿನ ಕಾಲ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. (ಏಜೆನ್ಸೀಸ್)
ಸುದ್ದಿವಾಹಿನಿಯೊಂದರ 25ಕ್ಕೂ ಹೆಚ್ಚು ಮಂದಿಗೆ ಕರೊನಾ ಪಾಸಿಟಿವ್; ಕಚೇರಿ ಸೀಲ್ ಡೌನ್