ಜಯಪುರ: ಭಾರಿ ಸ್ಫೋಟ ಹಾಗೂ ಭೂ ಕಂಪನದಿಂದ ಆತಂಕಕ್ಕೀಡಾಗಿದ್ದ ಕೊಪ್ಪ ತಾಲೂಕು ಅತ್ತಿಕೊಡಿಗೆ ಗ್ರಾಪಂ ವ್ಯಾಪ್ತಿಯಲ್ಲಿ ಭೂಕಂಪನ ಹಾಗೂ ಸ್ಪೋಟದ ಶಬ್ದದ ಪತ್ತೆಗಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಆಧುನಿಕ ಉಪಕರಣಗಳನ್ನು ಅಳವಡಿಸಿದ್ದಾರೆ.
ಕೊಗ್ರೆಮನೆ ಚಂದ್ರಶೇಖರ್ ಅವರ ಮನೆಯಲ್ಲಿ ಇಟ್ಟಿರುವ ಡಿಜಿಟಲ್ ಬ್ರಾಡ್ಬ್ಯಾಂಡ್, ಸೆರಿಮೊಮೀಟರ್, ಸ್ಟ್ರಾಂಗ್ವೋಷನ್ ಎಕ್ಸಿಲರ್ ಗ್ರಾಫ್ ಹಾಗೂ ಡಿಜಿಟೈಸರ್ ಉಪಕರಣಗಳು ಸ್ಪೋಟದ ತೀವ್ರತೆ ಮತ್ತು ಸ್ಪೋಟದ ಕೇಂದ್ರವು ಭೂಗರ್ಭದಲ್ಲಿ ಎಷ್ಟು ಆಳದಲ್ಲಿದೆ ಎಂಬ ಮಾಹಿತಿಯನ್ನು ಪತ್ತೆಹಚ್ಚುತ್ತವೆ.
ಕೆಎಸ್ಎನ್ಡಿಎಂಸಿ ವಿಜ್ಞಾನಿಗಳಾದ ಡಾ. ರಮೇಶ್, ಡಾ. ಅಭಿನಯ, ಡಾ. ಮಹೇಶ್ ಅವರನ್ನೊಳಗೊಂಡ ತಂಡ ಉಪಕರಣ ಅಳವಡಿಸಿದೆ. ತಜ್ಞರು ಪ್ರತಿ 15 ದಿನಗಳಿಗೊಮ್ಮೆ ಸ್ಥಳಕ್ಕೆ ಭೇಟಿ ನೀಡಿ ಉಪಕರಣ ಸಹಾಯದಿಂದ ಹೆಚ್ಚಿನ ಅಧ್ಯಯನ ನಡೆಸಲಿದ್ದಾರೆ. ಶಾಸಕ ಟಿ.ಡಿ.ರಾಜೇಗೌಡ ಅವರನ್ನು ಭೇಟಿಯಾದ ವಿಜ್ಞಾನಿಗಳು ಉಪಕರಣದ ಕಾರ್ಯನಿರ್ವಹಣೆಯ ಮಾಹಿತಿ ನೀಡಿದರು.