More

    ಮಾಫಿಯಾ ವಿರುದ್ಧ ಜಂಟಲ್​ವ್ಯಾನ್

    ಬೆಂಗಳೂರು:  ಅಲ್ಲೊಬ್ಬ ಕುಂಭಕರ್ಣ, ಆತನಿಗೆ ದಿನಕ್ಕೆ 18 ಗಂಟೆ ನಿದ್ರೆ.. ಅಲ್ಲೊಂದು ಎಗ್​ಸೆಲ್ ಮಾಫಿಯಾ, ಅದರ ವಿರುದ್ಧ ಸಿಡಿದೇಳುವ ಆತನಿಗೆ ಇರುವುದು ಎರಡೇ ಆಯ್ಕೆ, ನಿದ್ರೆ ಅಥವಾ ಯುದ್ಧ. ಮುಂದೇನು? ಎಂಬ ಕುತೂಹಲ ಮೂಡಿಸುವ ‘ಜಂಟಲ್​ವ್ಯಾನ್’ ಸಿನಿಮಾದ ಟ್ರೇಲರ್ ಮೊನ್ನೆಮೊನ್ನೆಯಷ್ಟೇ ಬಿಡುಗಡೆ ಆಗಿದ್ದು, ಈಗಾಗಲೇ ನಾಲ್ಕು ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡು ಹಲವರಿಂದ ಮೆಚ್ಚುಗೆಗೆ ಪಾತ್ರವಾಗುತ್ತಿದೆ.

    ‘ಜಿ ಸಿನಿಮಾಸ್’ ಮೂಲಕ ಗುರು ದೇಶಪಾಂಡೆ ನಿರ್ವಣ, ಜಡೇಶ್ ಕುಮಾರ್ ಹಂಪಿ ನಿರ್ದೇಶನದಲ್ಲಿ ಪ್ರಜ್ವಲ್ ದೇವರಾಜ್-ನಿಶ್ವಿಕಾ ನಾಯ್ಡು ಅಭಿನಯಿಸಿರುವ ‘ಜಂಟಲ್​ವ್ಯಾನ್’ ಚಿತ್ರದ ಟ್ರೇಲರ್ ಬಿಡುಗಡೆ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್, ನಟ ಧ್ರುವ ಸರ್ಜಾರಿಂದ ನೆರವೇರಿತು. ನಿರ್ವಪಕರ ಸಂಘದ ಅಧ್ಯಕ್ಷ ಡಿ.ಕೆ.ರಾಮಕೃಷ್ಣ, ಗೌರವ ಕಾರ್ಯದರ್ಶಿ ಕೆ.ಮಂಜು ಮುಂತಾದವರು ಉಪಸ್ಥಿತರಿದ್ದರು.

    ‘ಒಳ್ಳೆಯ ಸಬ್ಜೆಕ್ಟ್ ಆರಿಸಿಕೊಂಡಿದ್ದೀರಿ, ಟೀಮ್ ಕೂಡ ಚೆನ್ನಾಗಿದೆ. ಪ್ರಜ್ವಲ್ ಚೆನ್ನಾಗಿ ನಟಿಸಿದ್ದಾರೆ. ಟ್ರೇಲರ್​ನಿಂದ ಚಿತ್ರದ ಬಗ್ಗೆ ಕುತೂಹಲ ಉಂಟಾಗಿದೆ. ಕನ್ನಡ ಚಿತ್ರಗಳನ್ನು ಪ್ರೋತ್ಸಾಹಿಸುವುದು ನಮ್ಮ ಕರ್ತವ್ಯ. ನಮ್ಮನ್ನೆಲ್ಲ ಸಾಕಲು ಅಭಿಮಾನಿ ದೇವರುಗಳಿದ್ದಾರೆ’ ಎಂದು ಪುನೀತ್ ರಾಜ್​ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು. ‘ಈ ಟೈಟಲ್ ನನ್ನ ಬಳಿ ಇತ್ತು. ಆದರೆ ನಾನು ಅವರು ಕೇಳಿದಾಕ್ಷಣ ಕೊಟ್ಟೆ’ ಎಂದರು ಕೆ.ಮಂಜು. ‘ನನ್ನ ಸಿನಿಜೀವನಕ್ಕೆ ಪುನೀತ್ ರಾಜ್​ಕುಮಾರ್ ಅವರೇ ಸ್ಪೂರ್ತಿ’ ಎಂದರು ಪ್ರಜ್ವಲ್.

    ‘ಈ ಕಥೆ ಮೇಲೆ 8 ತಿಂಗಳು ಕೆಲಸ ಮಾಡಿದ್ದೇವೆ. ಪ್ರತಿಯೊಬ್ಬರೂ ಹಾರ್ಡ್​ವರ್ಕ್ ಮಾಡಿದ್ದೇವೆ’ ಎಂದರು ನಿರ್ವಪಕ ಗುರು ದೇಶಪಾಂಡೆ. ನಟ ಸಂಚಾರಿ ವಿಜಯ್. ಧ್ರುವ ಸರ್ಜಾ, ನಟಿ ನಿಶ್ವಿಕಾ ನಾಯ್ಡು, ವಿಲನ್ ಆಗಿ ಕಾಣಿಸಿಕೊಂಡಿರುವ ಹೊಸ ಪ್ರತಿಭೆ ಅರ್ಜುನ್, ನಿರ್ದೇಶಕ ಜಡೇಶ್​ಕುಮಾರ್ ಹಂಪಿ, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಮುಂತಾದವರು ಸಮಾರಂಭಕ್ಕೆ ಸಾಕ್ಷಿಯಾದರು.

    ರಿಲೀಸ್​ಗೂ ಮುನ್ನ ರಿಮೇಕ್​ಗೆ ಬೇಡಿಕೆ

    ‘ಜಂಟಲ್​ವ್ಯಾನ್’ ಚಿತ್ರ ಜ. 31ಕ್ಕೆ ಬಿಡುಗಡೆ ಆಗಲಿದೆ. ಆದರೆ ಅದಕ್ಕೂ ಮುನ್ನ ರಿಮೇಕ್​ಗೆ ಬೇಡಿಕೆ ಬಂದಿದೆ ಎನ್ನುತ್ತಾರೆ ನಿರ್ವಪಕ ಗುರು ದೇಶಪಾಂಡೆ. ‘ಟ್ರೇಲರ್ ಕಂಡ ಮೇಲೆ ತಮಿಳು, ತೆಲುಗು ಮಲಯಾಳಂ ಚಿತ್ರರಂಗದಿಂದ ರಿಮೇಕ್​ಗೆ ಬೇಡಿಕೆ ಬಂದಿದೆ. ನಟ ಸಾಯಿಕುಮಾರ್, ನಟ ಸಿಂಬು ಮ್ಯಾನೇಜರ್ ಸೌಂದರ್, ತಿರುಸ್ಸುರ್ ಸುನಿಲ್ ಶೌರ್ಯ ಕ್ರಮವಾಗಿ ತೆಲುಗು, ತಮಿಳು, ಮಲಯಾಳಂ ರಿಮೇಕ್ ಬಗ್ಗೆ ಮಾತುಕತೆ ನಡೆಸಿದ್ದಾರೆ’ ಎಂದರು ಗುರು.

    ಸಿನಿಮಾ

    ಲೈಫ್‌ಸ್ಟೈಲ್

    ಸಿನಿಮಾ

    Latest Posts