ಬೆಂಗಳೂರು: ನಿರ್ದೇಶಕಿ ನಾಗಿಣಿ ಭರಣ ಆ್ಯಕ್ಷನ್-ಕಟ್ ಹೇಳಿರುವ ಸಿನಿಮಾ ‘ಜೀನಿಯಸ್ ಮುತ್ತ’. ಆದಿವಾಸಿ ಜನಾಂಗದ ಪ್ರತಿಭಾವಂತ ರಂಗಮುತ್ತ ಎಂಬ ಹುಡುಗ ತನ್ನ ತಾಯಿಯ ಅಪರೂಪದ ಕಾಯಿಲೆ ವಿರುದ್ಧ ನಡೆಸುವ ಹೋರಾಟದ ಕಥೆಯಿದು. ಮುತ್ತನ ಬುದ್ಧಿವಂತಿಕೆ ಪ್ರದರ್ಶನ ಹಾಗೂ ಮುಗ್ಧತೆಯನ್ನು ಚಿತ್ರದಲ್ಲಿ ಅಚ್ಚುಕಟ್ಟಾಗಿ ಸೆರೆಹಿಡಿಯಲಾಗಿದೆ. ಜತೆಗೆ ತಾಯಿ-ಮಗನ ಬಾಂಧವ್ಯ, ಬಡವರು ಕಾಯಿಲೆಯ ಚಿಕಿತ್ಸೆಗೆ ಯಾವೆಲ್ಲ ರೀತಿಯ ಹೋರಾಟ ನಡೆಸಬೇಕಾಗುತ್ತದೆ ಎಂಬುದು ಚಿತ್ರದಲ್ಲಿದೆ. ಬಹುತೇಕ ಕಥೆ ಆಸ್ಪತ್ರೆಯಲ್ಲಿ ಸಾಗುತ್ತದೆ. ಸ್ವಲ್ಪ ನಿಧಾನ ಎನಿಸಿದರೂ, ಹೆಚ್ಚು ಭಾವನಾತ್ಮಕವಾಗಿ ದೃಶ್ಯಗಳನ್ನು ತೋರಿಸಲಾಗಿದೆ. ‘ಗೊರು ಗೊರುಕ ಗೊರಕಾನೇ’ ಎಂಬ ಸೋಲಿಗ ಜನಾಂಗದ ಜಾನಪದ ಗೀತೆಯನ್ನು ಚಿತ್ರದಲ್ಲಿ ಬಳಸಲಾಗಿದ್ದು, ಅದೇ ಚಿತ್ರದ ಆಕರ್ಷಣೆಯಾಗಿದೆ. ಸಂಭಾಷಣೆ ಸರಳವಾಗಿದ್ದು, ಒಮ್ಮೊಮ್ಮೆ ಕಣ್ಣು ತೇವಗೊಳಿಸುತ್ತದೆ. ಇಡೀ ಚಿತ್ರವು ಬಾಂಧವ್ಯ, ಮಾನವೀಯತೆ, ಪರಸ್ಪರ ಸಹಾಯ ಮಾಡಬೇಕು ಎನ್ನುವ ಸಂದೇಶದ ಹಾದಿಯಲ್ಲಿ ಸಾಗುತ್ತದೆ. ಮುತ್ತನ ಪಾತ್ರಧಾರಿ ಶ್ರೇಯಸ್ ಜಯಪ್ರಕಾಶ್ ಕಣ್ಣುಗಳಲ್ಲಿ ಮುಗ್ಧವಾಗಿ ಕಾಣಿಸಿಕೊಂಡಿದ್ದಾರೆ. ‘ಚಿನ್ನಾರಿ ಮುತ್ತ’ ವಿಜಯ್ ರಾಘವೇಂದ್ರ ವೈದ್ಯನಾಗಿ ಕಾಣಿಸಿಕೊಂಡಿದ್ದಾರೆ. ಗಿರಿಜಾ ಲೋಕೇಶ್, ಸುಂದರ್ ರಾಜ್, ಪನ್ನಗಭರಣ ಪಾತ್ರಗಳು ಗಮನಸೆಳೆಯುತ್ತವೆ. ಹೆಚ್ಚು ಪಾತ್ರಗಳಿದ್ದರೂ ಎಲ್ಲರನ್ನೂ ಕಥೆ ಒಳಗೊಳ್ಳುತ್ತದೆ. ಇನ್ನೊಂದಿಷ್ಟು ಟ್ವಿಸ್ಟ್‌ಗಳಿದ್ದರೆ ಪ್ರೇಕ್ಷಕರನ್ನು ಮತ್ತಷ್ಟು ಹಿಡಿದಿಡಬಹುದಿತ್ತು. ಸೋಲಿಗ ಹುಡುಗನ ಗೆಲುವಿನ ಕಥೆಯನ್ನು ಒಂದು ಸಾರಿ ನೋಡಲು ಅಡ್ಡಿಯಿಲ್ಲ.
GENIUS MUTTA: ಸೋಲಿಗ ಹುಡುಗನ ಗೆಲುವಿನ ಕಥೆ
You Might Also Like
ಬಿಕ್ಕಳಿಕೆ ಏಕೆ ಬರುತ್ತದೆ? ಕಿರಿಕಿರಿ ಉಂಟುಮಾಡುವ ಅದನ್ನು ನಿಯಂತ್ರಿಸುವುದು ಹೇಗೆ?
ಬೆಂಗಳೂರು: ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
ಈ ದಿನಾಂಕದಂದು ಜನಿಸಿದವರು ದಾನದಲ್ಲಿ ಕರ್ಣನನ್ನು ಮೀರಿಸುತ್ತಾರೆ! ನೀವೂ ಹುಟ್ಟಿದ್ದು ಇದೇ ದಿನಾನಾ?
ಜ್ಯೋತಿಷ್ಯಶಾಸ್ತ್ರದಲ್ಲಿ ಸಂಖ್ಯಾಶಾಸ್ತ್ರವೂ ಒಂದು. ಇದರ ಪ್ರಕಾರ ವ್ಯಕ್ತಿಯ ಜನ್ಮ ದಿನಾಂಕವು ಅವನ ವ್ಯಕ್ತಿತ್ವದ ಬಗ್ಗೆ ಮತ್ತು…
ಗೋಲ್ಡನ್ ಅವರ್ ರಹಸ್ಯ: ಮುಂಜಾನೆ ಬೇಗ ಏಳುವುದರಿಂದ ಇದೆ 6 ಪ್ರಯೋಜನಗಳು
ಬೆಂಗಳೂರು: ಮನೆಯಲ್ಲಿ ಕೆಲವರು ಸೂರ್ಯೋದಯಕ್ಕೂ ಮೊದಲೇ ಏಳುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಮುಂಜಾನೆ ಬೇಗ ಏಳುವುದನ್ನು ರೂಢಿ…