More

    ಜೀ ಕನ್ನಡದಲ್ಲಿ ಇಂದಿನಿಂದ ಜೀನ್ಸ್ ಶೋ

    ಬೆಂಗಳೂರು: ಹೊಸ ಹೊಸ ಕಾರ್ಯಕ್ರಮಗಳನ್ನು ನೀಡುವಲ್ಲಿ ಮುಂಚೂಣಿಯಲ್ಲಿರುವ ಜೀ ಕನ್ನಡ ವಾಹಿನಿಯು ಇದೀಗ ‘ಜೀನ್ಸ್’ ಎಂಬ ಫ್ಯಾಮಿಲಿ ಎಂಟರ್​ಟೇನ್​ವೆುಂಟ್​ನ ಕಾರ್ಯಕ್ರಮ ಆರಂಭಿಸಿದೆ.

    ಈ ವಿನೂತನ ‘ಜೀನ್ಸ್’ ಕಾರ್ಯಕ್ರಮದಲ್ಲಿ ಸೆಲೆಬ್ರಿಟಿಗಳಿಂದ ಹಿಡಿದು ಸಾಮಾನ್ಯ ಜನರಿಗೂ ಭಾಗವಹಿಸುವ ಅವಕಾಶ ಇದೆ. ಕಾರ್ಯಕ್ರಮದಲ್ಲಿ ಒಟ್ಟು ನಾಲ್ಕು ಸುತ್ತುಗಳಿದ್ದು, ಪ್ರತಿ ಸುತ್ತಿನಲ್ಲಿಯೂ ಬೇರೆ ಬೇರೆ ಚಟುವಟಿಕೆಗಳು ಇರುತ್ತವೆ.

    ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಸ್ಪರ್ಧೆಯ ಪ್ರಾರಂಭದಲ್ಲಿ 1 ಲಕ್ಷ ರೂ. ನಗದು ಬಹುಮಾನ ನೀಡಲಾಗುತ್ತದೆ. ಪ್ರತಿ ಹಂತದ ಸಾಧನೆ ಆಧಾರದ ಮೇಲೆ ಇದರಲ್ಲಿ ವ್ಯತ್ಯಾಸವಾಗುತ್ತದೆ. ಸೋತರೆ ಕಡಿತಗೊಳ್ಳುತ್ತದೆ, ಗೆದ್ದರೆ ಹೆಚ್ಚಾಗುತ್ತದೆ. ಇಲ್ಲಿ ಗೆಲ್ಲಲು ಚಾಣಾಕ್ಷತನ ಮುಖ್ಯ.

    ನಿರೂಪಕಿ ಸುಷ್ಮಾ ರಾವ್ ಈ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಮೊದಲ ಸುತ್ತು ‘ಪೇರ್ ವಿಥ್ ಪೇರೆಂಟ್ಸ್’ನಲ್ಲಿ ಭಾಗವಹಿಸುವವರು ಆಯಾ ಪೋಷಕರೊಂದಿಗೆ ಅವರವರ ಮಕ್ಕಳನ್ನು ಸೇರಿಸಬೇಕು. ‘ಸೆಲೆಬ್ರಿಟಿ ಆಲ್ಬಂ’ ಎಂಬ ಎರಡನೇ ಸುತ್ತಿನ ಸ್ಪರ್ಧೆಯನ್ನು ಸ್ಪರ್ಧಿಗಳು ಸೆಲೆಬ್ರಿಟಿ ಪೇರೆಂಟ್ಸ್, ಸೆಲೆಬ್ರಿಟಿ ಚಿಲ್ಡ್ರ್, ಸೆಲೆಬ್ರಿಟಿ ಸಿಬ್ಲಿಂಗ್ಸ್ ಮತ್ತು ಸೆಲೆಬ್ರಿಟಿ ಚೈಲ್ಡ್​ಹುಡ್ ಎಂಬ ನಾಲ್ಕು ವಿಭಾಗಗಳನ್ನು ಎದುರಿಸುತ್ತಾರೆ. ಎರಡು ವಿಭಾಗಗಳಲ್ಲಿ ಗೆಲುವು ಸಾಧಿಸಿದರೆ ನಂತರ ಖ್ಯಾತ ವ್ಯಕ್ತಿಗಳನ್ನು ಗುರುತಿಸಬೇಕಿರುತ್ತದೆ.

    ‘ಫ್ಯಾಮಿಲಿ ಮತ್ಯಾರು’ ಎಂಬ ಮೂರನೇ ಸುತ್ತಿನ ಆಟದಲ್ಲಿ ಒಂದು ಅವಿಭಕ್ತ ಕುಟುಂಬ ಇರುತ್ತದೆ. ಅದರಲ್ಲಿ ಒಬ್ಬರು ಮಾತ್ರ ಹೊರಗಿನವರು ಸೇರಿರುತ್ತಾರೆ. ಅವರನ್ನು ಸ್ಪರ್ಧಿಗಳು ಗುರುತಿಸಬೇಕು. ಇನ್ನು ನಾಲ್ಕನೇ ಸುತ್ತಿನ ‘ಸೇಮ್ ಟು ಸೇಮ್ ಆಟದಲ್ಲಿ ಮೂವರು ಅವಳಿ-ಜವಳಿ ಇರುತ್ತಾರೆ. ಅವರಲ್ಲಿ ಒಬ್ಬರನ್ನು ಅದಲು-ಬದಲು ಮಾಡಲಾಗಿರುತ್ತದೆ. ಅದಲು ಬದಲಾದ ಅವಳಿಗಳನ್ನು ಸ್ಪರ್ಧಿಗಳು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕಂಡು ಹಿಡಿಯಬೇಕು. ಈ ಕಾರ್ಯಕ್ರಮ ಜ.18ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ಸಂಜೆ 6.30ಕ್ಕೆ ಜೀ ಕನ್ನಡ ಮತ್ತು ಜೀ ಕನ್ನಡ ಎಚ್​ಡಿ ವಾಹಿನಿಗಳಲ್ಲಿ ಪ್ರಸಾರ ಆಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts