ಬೆಂಗಳೂರು: ಅಪ್ಪು ಅವರು ತನ್ನ ಕುಟುಂಬ, ಅಸಂಖ್ಯಾತ ಅಭಿಮಾನಿಗಳನ್ನು ಬಿಟ್ಟು ಹೋಗಿ ಒಂದು ತಿಂಗಳು ಕಳೆದಿದೆ. ಆದರೆ, ಅಭಿಮಾನಿಗಳು ಮಾತ್ರ ಅಪ್ಪುಗೆ ಸಾವಿಲ್ಲ ಎನ್ನುತ್ತ ಯಾವುದೋ ಒಂದು ರೂಪದಲ್ಲಿ ನೆನಪಿಸಿಕೊಳ್ಳುತ್ತಿದ್ದಾರೆ. ಹೌದು.. ಅಪ್ಪು ನಮ್ಮೊಂದಿಗೆ ಇಲ್ಲದಿದ್ದರೂ ಅವರ ಅಭಿಮಾನಿಗಳು ಅನ್ನದಾನ, ನೇತ್ರದಾನ, ರಕ್ತದಾನ, ಬೈಕ್ ರೈಡ್, ಸೈಕಲ್ ರೈಡ್, ಸಮಾಜ ಸೇವೆ ಎಂದು ಹೀಗೆ ಪುನೀತ್ ಅವರ ಸ್ಮರಣೆ ಮಾಡುತ್ತಲೇ ಇದ್ದಾರೆ. ಈ ಮಧ್ಯೆ ಆಸ್ಟ್ರೇಲಿಯಾದಲ್ಲೂ ಅಪ್ಪುಗೆಂದು ಕನ್ನಡಿಗರು ಗೀತ ನಮನ ಮಾಡಿದ್ದಾರೆ.
ಇದನ್ನೂ ಓದಿ: ನಟ ಪುನೀತ್ ರಾಜಕುಮಾರ್ ಫೌಂಡೇಷನ್ ಸಹಾಯಾರ್ಥ ನಡೆಯಬೇಕಿದ್ದ ಶೋಗೆ ಪೊಲೀಸರ ತಡೆ, ಇಂದಿನ ಕಾರ್ಯಕ್ರಮ ರದ್ದು..
ನಟ ಪುನೀತ್ ರಾಜಕುಮಾರ್ಗೆ ಇಲ್ಲಿ ಮಾತ್ರವಲ್ಲದೆ ಬೇರೆ ಬೇರೆ ದೇಶಗಳಲ್ಲೂ ಅಭಿಮಾನಿಗಳಿದ್ದಾರೆ. ಈಗಾಗಲೇ ಹಲವು ದೇಶಗಳಲ್ಲಿ ಅಪ್ಪು ಅವರನ್ನು ಬೇರೆ ಬೇರೆ ಕಾರ್ಯಕ್ರಮಗಳ ಮೂಲಕ ನೆನಪಿಸಿಕೊಂಡು, ಸಂತಾಪಗಳನ್ನು ಸೂಚಿಸಿದ್ದಾರೆ. ಹೀಗೆಯೇ, ಪುನೀತ್ ಅವರು ಅಗಲಿ ಇಂದಿಗೆ ಒಂದು ತಿಂಗಳಾಗಿದ್ದು, ಆ ಪ್ರಯುಕ್ತ ಆಸ್ಟ್ರೇಲಿಯಾದ ಅಡಿಲೇಡ್ನಲ್ಲಿನ ಕನ್ನಡಿಗರು ಮತ್ತು ಅಪ್ಪು ಅಭಿಮಾನಿಗಳು ನವೆಂಬರ್ 27ರಂದು ಗೀತ ನಮನ ಕಾರ್ಯಕ್ರಮ ನಡೆಸಿದರು. ಈ ಕಾರ್ಯಕ್ರಮದಲ್ಲಿ 300ಕ್ಕೂ ಹೆಚ್ಚು ಕನ್ನಡಿಗರು ಭಾಗವಹಿಸಿದ್ದಾರೆ.
ಗೀತ ನಮನ ಕಾರ್ಯಕ್ರದಲ್ಲಿ ಅಪ್ಪು ಅವರ ಸಿನಿಮಾ ಹಾಡುಗಳನ್ನು ಹಾಡಲಾಗಿದೆ. ಜೊತೆಗೆ, ಪುನೀತ್ ರಾಜಕುಮಾರ್ ಕುರಿತು ಹಲವು ವಿಷಯಗಳನ್ನು ಕಲೆ ಹಾಕಿ 10 ನಿಮಿಷದ ವಿಡಿಯೋವೊಂದನ್ನು ಪ್ರರ್ದಶಿಸಲಾಗಿದೆ. ಆ ವಿಡಿಯೋ ಅಲ್ಲಿ ಸೇರಿದ್ದ ಎಲ್ಲರ ಕಣ್ಣಲ್ಲಿ ನೀರು ತರಿಸಿದೆ. ಪುನೀತ್ ಸಾಮಾಜಿಕ ಸೇವೆ, ಮಕ್ಕಳ ಪ್ರೀತಿ, ಕರುಣೆ, ಸಿನಿಮಾಗಳು, ಕುಟುಂಬ ಪ್ರೀತಿ ಹೀಗೆ ಹತ್ತು ಹಲವಾರು ವಿಷಯಗಳನ್ನು ಆಧರಿಸಿ ಆ ವಿಡಿಯೋ ಮಾಡಲಾಗಿದೆ.
ಇದನ್ನೂ ಓದಿ: ಪುನೀತ್ ಸಾವಿಗೆ ನಿಜವಾದ ಕಾರಣ ಏನು ಎಂಬುದನ್ನು ಬಿಚ್ಚಿಟ್ಟ ರಾಘವೇಂದ್ರ ರಾಜಕುಮಾರ್
ಅಪ್ಪು ನಿಧನದ ಸಮಯದಲ್ಲೂ ಆಸ್ಟ್ರೇಲಿಯಾದ ಕನ್ನಡ ಸಂಘದವರು ದೀಪ ನಮನ ಮಾಡಿ ಅವರ ಆತ್ಮಕ್ಕೆ ಶಾಂತಿ ಕೋರಿದ್ದರು. ಅಲ್ಲದೇ ಮುಂದಿನ ತಿಂಗಳಲ್ಲಿ ಒಂದು ದೊಡ್ಡ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ಅದಕ್ಕೆ ಪುನೀತ್ ಕುಟುಂಬದವರನ್ನು ಆಹ್ವಾನಿಸಲು ತೀರ್ಮಾನಿಸಿದ್ದಾರೆ. ಹೀಗೆ ಅಪ್ಪು ತಮ್ಮ ಅಭಿಮಾನಿಗಳ ಮನದಲ್ಲಿ ಎಂದೆಂದಿಗೂ ಅಜರಾಮರವಾಗಿರಲಿ ಎಂದು ಹರಸಿ ಹಾರೈಸೋಣ.
ಟ್ವಿಟರ್ ಸಿಇಒ ಆಗಿ ಭಾರತ ಮೂಲದ ಪರಾಗ್ ಅಗರ್ವಾಲ್; ಬಾಂಬೆ ಐಐಟಿ ಪದವೀಧರನಿಗೆ ಒಲಿಯಿತು ಮಹತ್ವದ ಸ್ಥಾನ
ಒಮಿಕ್ರಾನ್ ಮಾರಕವಲ್ಲ ಎಂಬ ಅಭಿಪ್ರಾಯದ ಬೆನ್ನಿಗೇ ಹೊರಬಿತ್ತು ಅದು ಜಾಗತಿಕವಾಗಿ ಅಪಾಯಕಾರಿ ಎನ್ನುವ ವಿಷಯ!