
ಶ್ರವಣಬೆಳಗೊಳ: ಹೋಬಳಿಯ ಜುಟ್ಟನಹಳ್ಳಿ ಗ್ರಾಮ ಪಂಚಾಯಿತಿ ನೂತನ ಉಪಾಧ್ಯಕ್ಷರಾಗಿ ಗೀತಾಮಣಿ ಮಂಜುನಾಥ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ವಿಮಲಾ ಅವರ ರಾಜೀನಾಮೆಯಿಂದ ತೆರವಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಗೀತಾಮಣಿ ಹೊರತುಪಡಿಸಿ ಮತ್ಯಾರೂ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಚುನಾವಣಾಧಿಕಾರಿಯಾಗಿ ತಹಸೀಲ್ದಾರ್ ಸಂತೋಷ್ ಕುಮಾರ್ ಕರ್ತವ್ಯ ನಿರ್ವಹಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಷ್ಪಾ, ನಿಖಿಲ್, ದೊಡ್ಡೇಗೌಡ, ಪ್ರಸನ್ನಕುಮಾರ್, ವಿಮಲಾ, ಮಮತಾ, ಪಾರ್ವತಮ್ಮ, ಭಾಗ್ಯಮ್ಮ, ದೇವಮ್ಮ, ನಂಜೇಗೌಡ, ಜಯಣ್ಣ, ರಾಮಕೃಷ್ಣೇಗೌಡ, ನಾಗರಾಜ್, ಮುಖಂಡರಾದ ಬೋರೇಗೌಡ, ಪಿ.ಕೆ.ಮಂಜೇಗೌಡ, ಪಿ.ಎನ್.ನಿಂಗೇಗೌಡ, ಶ್ರೀನಿವಾಸ್, ಶಿವರಾಮ್, ಸುಬ್ರಹ್ಮಣ್ಯ ಮುಂತಾದವರಿದ್ದರು.