ಶಿಕಾರಿಪುರದಲ್ಲಿ ಗೌರಿಶಂಕರ ಕಲ್ಯಾಣ, ಇಷ್ಟಲಿಂಗ ಪೂಜೆ

blank

ಶಿಕಾರಿಪುರ: ಪಟ್ಟಣದ ಮಂಗಲಭವನದಲ್ಲಿ ಸೆ.12, 13ರಂದು ಗೌರಿಶಂಕರ ಕಲ್ಯಾಣೋತ್ಸವ, ಇಷ್ಟಲಿಂಗ ಮಹಾಪೂಜೆ, ತಾಲೂಕು ವೀರಶೈವ ಜಂಗಮ ಪುರೋಹಿತ ಅರ್ಚಕರ ಸಂಘದ ಪ್ರಥಮ ವಾರ್ಷಿಕೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ತಾಲೂಕು ಅಧ್ಯಕ್ಷ ಪ್ರಭುಸ್ವಾಮಿ ಆರಾಧ್ಯಮಠ ಹೇಳಿದರು.

12ರಂದು ಮಧ್ಯಾಹ್ನ 4.30ಕ್ಕೆ ಉಜ್ಜಯಿನಿ ಜಗದ್ಗುರು ಶ್ರೀ ಸಿದ್ದಲಿಂಗರಾಜ ದೇಶೀಕೇಂದ್ರ ಶಿವಾಚಾರ್ಯ ಭಗವತ್ಪಾದರ ಸಾನ್ನಿಧ್ಯದಲ್ಲಿ ಗೌರಿಶಂಕರ ಕಲ್ಯಾಣೋತ್ಸವ ಪೂಜೆ ನಡೆಯಲಿದೆ. ಸಂಜೆ 6.30ಕ್ಕೆ ಶ್ರೀಗೌರಿಗೆ ಮಾಂಗಲ್ಯಧಾರಣೆ ನೆರವೇರಲಿದೆ. ಉಜ್ಜಯಿನಿ ಶ್ರೀ ಸಿದ್ದಲಿಂಗರಾಜ ದೇಶೀಕೇಂದ್ರ ಸ್ವಾಮೀಜಿ, ತೊಗರ್ಸಿ ಮಳೆಹಿರೇಮಠದ ಮಹಂತ ದೇಶೀಕೇಂದ್ರ ಶ್ರೀ, ಕಡೇನಂದಿಹಳ್ಳಿ ಶ್ರೀ ವೀರಭದ್ರೇಶ್ವರ ಶ್ರೀ, ಶಿರಾಳಕೊಪ್ಪದ ಸಿದ್ದೇಶ್ವರ ಶ್ರೀಗಳು, ಸಾಲೂರಿನ ಗುರುಲಿಂಗ ಜಂಗಮ ಶ್ರೀ, ಸುರಗಿಹಳ್ಳಿ ಮಹಂತ ಶ್ರೀ, ಶಿಕಾರಿಪುರದ ಚನ್ನಬಸವ ಶ್ರೀಗಳು ಸಾನ್ನಿಧ್ಯ ವಹಿಸುವರು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಂಸದ ಬಿ.ವೈ.ರಾಘವೇಂದ್ರ, ತೇಜಸ್ವಿನಿ ರಾಘವೇಂದ್ರ, ಶಾಸಕ ಬಿ.ವೈ.ವಿಜಯೇಂದ್ರ, ಪ್ರೇಮಾ ವಿಜಯೇಂದ್ರ, ತಾಲೂಕು ಜಂಗಮ ಸಮಾಜದ ಅಧ್ಯಕ್ಷ ಪುಟ್ಟಸ್ವಾಮಿ ಬೆಂಡೇಕಟ್ಟೆ, ತಾಲೂಕು ವೀರಶೈವ ಮಹಾಸಭಾ ಅಧ್ಯಕ್ಷ ಸುಧೀರ್ ಮಾರವಳ್ಳಿ, ಪುಟ್ಟಯ್ಯ ಶಾಸಿ ಭಾಗವಹಿಸುವರು ಎಂದರು.
13ರಂದು ಬೆಳಗ್ಗೆ 10ಕ್ಕೆ ಉಜ್ಜಯಿನಿ ಜಗದ್ಗುರು ಶ್ರೀ ಸಿದ್ದಲಿಂಗರಾಜ ದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ ಇಷ್ಟಲಿಂಗ ಮಹಾಪೂಜೆ ನೆರವೇರಿಸುವರು. 11.30ಕ್ಕೆ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಧರ್ಮಸಭೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಕಾಳೇನಹಳ್ಳಿಯ ಡಾ. ಸಿದ್ದಲಿಂಗ ಸ್ವಾಮೀಜಿ, ತೊಗರ್ಸಿ ಶ್ರೀ ಚನ್ನವೀರ ದೇಶೀಕೇಂದ್ರ ಸ್ವಾಮೀಜಿ, ದಿಂಡದಹಳ್ಳಿ ಶ್ರೀ ಪಶುಪತಿ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಕಡೇನಂದಿಹಳ್ಳಿ ರೇವಣಸಿದ್ದೇಶ್ವರ ಶ್ರೀ, ಬಿ.ವೈ.ರಾಘವೇಂದ್ರ, ಬಿ.ವೈ.ವಿಜಯೇಂದ್ರ, ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ, ತಹಸೀಲ್ದಾರ್ ಮಲ್ಲೇಶ್ ಬಿ. ಪೂಜಾರ್, ಡಿವೈಎಸ್ಪಿ ಕೇಶವ್, ಆರ್‌ಎಫ್‌ಒ ರೇವಣಸಿದ್ದಯ್ಯ ಹಿರೇಮಠ್, ಸಾಲೂರಿನ ಪ್ರಭುಸ್ವಾಮಿ ಆರಾಧ್ಯಮಠ ಪಾಲ್ಗೊಳ್ಳುವರು ಎಂದು ತಿಳಿಸಿದರು.
ಮಹಾಂತಯ್ಯ, ಶಿವಕುಮಾರ್, ವಾಗೀಶಯ್ಯ, ಪ್ರಸಾದಯ್ಯ, ಕೊಟ್ರೇಶಯ್ಯ, ಮೃತ್ಯುಂಜಯ, ನಂದೀಶಯ್ಯ, ಯೋಗೀಶಯ್ಯ, ಚನ್ನವೀರಯ್ಯ ಸುದ್ದಿಗೋಷ್ಠಿಯಲ್ಲಿದ್ದರು.

Share This Article

ಕೂಡಲೇ ಇವುಗಳನ್ನು ತಿನ್ನುವುದನ್ನು ನಿಲ್ಲಿಸದಿದ್ರೆ ನಿಮ್ಮ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗೋದು ಗ್ಯಾರಂಟಿ! Sperm Count

Sperm Count : ಇತ್ತೀಚಿನ ದಿನಗಳಲ್ಲಿ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುವುದು ಸಾಮಾನ್ಯ ಸಮಸ್ಯೆಯಾಗಿದೆ. ಇದು…

ಕ್ಯಾರೆಟ್​ ಬರ್ಫಿಗೆ ಫಿದಾ ಆಗದವರೇ ಇಲ್ಲ; ಮನೆಯಲ್ಲೇ ಮಾಡಲು ಇಲ್ಲಿದೆ ಸಿಂಪಲ್​ ವಿಧಾನ | Recipe

ಕ್ಯಾರೆಟ್​​ ಹಲ್ವಾ ಎಲ್ಲರಿಗೂ ಇಷ್ಟ, ಅದಕ್ಕಾಗಿಯೇ ಕ್ಯಾರೆಟ್ ಹಲ್ವಾವನ್ನು ಎಲ್ಲಾ ಋತುವಿನಲ್ಲೂ ಹಲವಾರು ಬಾರಿ ತಯಾರಿಸಿ…

ಆರೋಗ್ಯಕರ ಹೃದಯಕ್ಕೆ ಮೊಟ್ಟೆ ಎಷ್ಟು ಸಹಕಾರಿ ಗೊತ್ತಾ?; ನಿಮಗಾಗಿ ಹೆಲ್ತಿ ಮಾಹಿತಿ | Health Tips

ಮೊಟ್ಟೆಗಳು ಪ್ರೋಟೀನ್‌ನ ಉತ್ತಮ ಮೂಲವಾಗಿದ್ದು, ವಿಟಮಿನ್ ಬಿ, ಫೋಲೇಟ್, ಕೊಬ್ಬಿನಲ್ಲಿ ಕರಗುವ ಜೀವಸತ್ವಗಳು (ಎ, ಡಿ,…