More

    ಟ್ಯಾಂಕರ್‌ ಪಲ್ಟಿ,ಗ್ಯಾಸ್‌ ಸೋರಿಕೆ-ಹೊನ್ನಾವರದಲ್ಲಿ ಆತಂಕ

    ಹೊನ್ನಾವರ: ಗ್ಯಾಸ್‌ ಟ್ಯಾಂಕರ್‌ ಹೊನ್ನಾವರ ಶರಾವತಿ ಸರ್ಕಲ್‌ನಲ್ಲಿ ಪಲ್ಟಿಯಾಗಿದೆ. ಗ್ಯಾಸ್‌ ಸೋರಿಕೆಯಾಗುತ್ತಿದ್ದು, ಪಟ್ಟಣದಲ್ಲಿ ಆತಂಕ ಮನೆ ಮಾಡಿದೆ.

    ಮಂಗಳೂರಿನಿಂದ-ಧಾರವಾಡಕ್ಕೆ ಹೊರಟಿದ್ದ ಎಚ್‌ಪಿ ಗ್ಯಾಸ್‌ ಟ್ಯಾಂಕರ್‌ ಮಧ್ಯಾಹ್ನ 2.30 ರ ಹೊತ್ತಿಗೆ ಪಲ್ಟಿಯಾಗಿದ್ದು, ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ವಾಹನ ಸಂಚಾರ ಬಂದ್‌ ಆಗಿದೆ.

    ಸುಮಾರು 200 ಮೀಟರ್‌ ವ್ಯಾಪ್ತಿಯಲ್ಲಿ ಬ್ಯಾರಿಕೇಡ್‌ ಹಾಕಿ ಜನ ಸಂಚಾರ, ಬಂದ್‌ ಮಾಡಲಾಗಿದೆ. ಸಣ್ಣ ವಾಹನಗಳಿಗೆ ಬಸ್‌ ನಿಲ್ದಾಣದ ಮಾರ್ಗವಾಗಿ ಓಡಾಟ ಮಾಡಲು ಅನುವು ಮಾಡಿಕೊಡಲಾಗುತ್ತಿದೆ.

    ಗ್ಯಾಸ್‌ ಸಣ್ಣ ಪ್ರಮಾಣದಲ್ಲಿ ಸೋರಿಕೆಯಾಗುತ್ತಿದ್ದು, ಹೊನ್ನಾವರ ಹಾಗೂ ಕುಮಟಾ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ತಲುಪಿದ್ದಾರೆ. ಆದರೆ, ಸೋರಿಕೆ ತಡೆಯಲು ತಂತ್ರಜ್ಞರ ಅವಶ್ಯಕತೆ ಇದ್ದು, ಅದಕ್ಕಾಗಿ ಕಾಯಲಾಗುತ್ತಿದೆ.

    ಅಪಘಾತದಲ್ಲಿ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ಹೊನ್ನಾವರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಇದನ್ನೂ ಓದಿ: ಅಂತರರಾಷ್ಟ್ರೀಯ ಬಾಸ್ಕೆಟ್‌ಬಾಲ್ ಫೆಡರೇಷನ್​ ಅಧ್ಯಕ್ಷರಾಗಿ ಕನ್ನಡಿಗ ಗೋವಿಂದರಾಜ್​ ನೇಮಕ

    ಮೊದಲಲ್ಲ ಗ್ಯಾಸ್‌ ಟ್ಯಾಂಕರ್‌ ಅವಗಢ :

    2015 ರಲ್ಲಿ ಕುಮಟಾ ತಾಲೂಕಿನ ಬರ್ಗಿಯಲ್ಲಿ ಗ್ಯಾಸ್‌ ಟ್ಯಾಂಕರ್‌ ಪಲ್ಟಿಯಾಗಿ ಅನಿಲ ಸೋರಿಕೆಯಾಗಿ 12 ಜನ ಮೃತಪಟ್ಟಿದ್ದರು.

    ಈ ಹಿಂದೆ ಇದೇ ಸ್ಥಳದಲ್ಲಿ( ಶರಾವತಿ ಸರ್ಕಲ್‌) ಗ್ಯಾಸ್‌ ಟ್ಯಾಂಕರ್‌ಗಳು ಎರಡು ಬಾರಿ ಪಲ್ಟಿಯಾಗಿದ್ದವು.

    ಅನಿಲ ಸೋರಿಕೆಯ ನಿಯಂತ್ರಣಕ್ಕೆ ಜಿಲ್ಲೆಯ ಆಗ್ನಿಶಾಮಕ ಸಿಬ್ಬಂದಿ ತರಬೇತಿ ಹೊಂದಿದವರಲ್ಲ. ಇದರಿಂದ ಪ್ರತ್ಯೇಕ ತಂಡವೊಂದನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ನೇಮಿಸಬೇಕು ಎಂಬ ಒತ್ತಾಯ ಹಲವು ಬಾರಿ ಕೇಳಿ ಬಂದಿತ್ತು.

    ಆದರೆ, ಯಾವುದೇ ಸುರಕ್ಷತಾ ಕಾರ್ಯಗಳು ಆಗಿಲ್ಲ, ಅವಗಢಗಳು ಮುಂದುವರಿಯುತ್ತಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts