ಸಿನಿಮಾ

ಭೀಕರ ಅಪಘಾತ: ಚಲಿಸುತ್ತಿದ್ದ ಗ್ಯಾಸ್​ ಟ್ಯಾಂಕರ್​ ಹೆದ್ದಾರಿಯಲ್ಲಿ ಪಲ್ಟಿ, ಗ್ಯಾಸ್ ಸೋರಿಕೆ!

ಉತ್ತರಕನ್ನಡ: ಗ್ಯಾಸ್​ ಟ್ಯಾಂಕರ್​ವೊಂದು ಹೆದ್ದಾರಿಯಲ್ಲಿ ಪಲ್ಟಿಯಾದಂಥ ಭೀಕರ ಅಪಘಾತವೊಂದು ಸಂಭವಿಸಿದೆ. ಉತ್ತರಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಈ ಅಪಘಾತ ಉಂಟಾಗಿದೆ.

ಮಂಗಳೂರು ಕಡೆಯಿಂದ ಹುಬ್ಬಳ್ಳಿ ಕಡೆ ಚಲಿಸುತ್ತಿದ್ದ ಗ್ಯಾಸ್ ಟ್ಯಾಂಕರ್ ಹೊನ್ನಾವರ ಪಟ್ಟಣದ ಶರಾವತಿ ಸರ್ಕಲ್ ಬಳಿ ಪಲ್ಟಿಯಾಗಿದೆ. ಪರಿಣಾಮವಾಗಿ ಟ್ಯಾಂಕರ್​ನಿಂದ ಸಣ್ಣಪ್ರಮಾಣದಲ್ಲಿ ಗ್ಯಾಸ್ ಸೋರಿಕೆಯಾಗಿದೆ.

ಇದನ್ನೂ ಓದಿ: ಇಂದಿರಾ ಕ್ಯಾಂಟೀನ್ ಮತ್ತೆ ಆರಂಭ: ಸಿಎಂ ಸಿದ್ದರಾಮಯ್ಯ ಘೋಷಣೆ

ಟ್ಯಾಂಕರ್ ಪಲ್ಟಿಯಾದ್ದರಿಂದ ಚಾಲಕನಿಗೆ ಗಂಭೀರ ಗಾಯವಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದವರು ಮತ್ತು ಪೊಲೀಸರು ಆಗಮಸಿದ್ದು, ಹೆಚ್ಚಿನ ನಿಗಾ ವಹಿಸಿದ್ದಾರೆ. ಈ ಅಪಘಾತದಿಂದಾಗಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ.

2000 ರೂ. ನೋಟು ಬದಲಾವಣೆ: ಬದಲಿಸಿಕೊಳ್ಳಲು ಐಡಿ ಬೇಕಾ, ಖಾತೆ ಇರಲೇಬೇಕಾ?

Latest Posts

ಲೈಫ್‌ಸ್ಟೈಲ್