ಸರ್ವ ಧರ್ಮಿಯರ ಗೌರವಕ್ಕೆ ಪಾತ್ರವಾಗಿರುವ ಗರುಡುಗಂಭ


ಕೆ.ಆರ್.ನಗರ: ಕೃಷ್ಣರಾಜನಗರದ ಗರುಡುಗಂಭಕ್ಕೆ ಮೈಸೂರು ಅರಸರ ಕಾಲದ ಇತಿಹಾಸ ಇದೆ ಎಂದು ಶಾಸಕ ಎಚ್.ವಿಶ್ವನಾಥ್ ಹೇಳಿದರು.

ಪಟ್ಟಣದ ಹೃದಯ ಭಾಗದಲ್ಲಿರುವ ಗರುಡುಗಂಭ 85ನೇ ವಾರ್ಷಿಕ ಮಹೋತ್ಸವದ ಅಂಗವಾಗಿ ಭಾನುವಾರ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಗರುಡುಗಂಭಕ್ಕ ತನ್ನದೇ ಆದ ಇತಿಹಾಸ ಇದೆ. ಕನ್ನಡ, ಇಂಗ್ನಿಷ್, ಹಿಂದಿ ಮತ್ತು ಉರ್ದು ಭಾಷೆಯ ನಾಮಫಲಕವನ್ನು ಒಳಗೊಂಡಿದೆ. ಆ ಮೂಲಕ ಸರ್ವ ಧರ್ಮಿಯರ ಗೌರವಕ್ಕೆ ಪಾತ್ರವಾಗಿದೆ ಎಂದು ತಿಳಿಸಿದರು.

ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಮಾತನಾಡಿ, ಮೈಸೂರು ಮಹಾರಾಜರ ಕೊಡುಗೆಗಳಲ್ಲಿ ಗರುಡಗಂಭವೂ ಒಂದು. ಇದರ 85ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಆಚರಿಸುವ ಮೂಲಕ ರಾಜವಂಶಸ್ಥರನ್ನು ನೆನೆಪು ಮಾಡಿಕೊಳ್ಳುವಂತಾಗಿದೆ ಎಂದು ಹೇಳಿದರು.

ಯಾವುದೇ ವ್ಯಕ್ತಿ ಸಮಾಜಕ್ಕೆ ಒಳ್ಳೆಯ ಕೆಲಸ ಮಾಡಿದಾಗ ಅವರನ್ನು ಅಭಿನಂದಿಸುವ ಕೆಲಸವನ್ನು ಎಲ್ಲರೂ ಮಾಡಬೇಕು. ಸ್ವರಾಜ್ ಇಂಡಿಯಾ ಪಕ್ಷದ ತಾಲೂಕು ಅಧ್ಯಕ್ಷ ಗರುಡಗಂಭಸ್ವಾಮಿ ಪ್ರತಿ ವರ್ಷ ಜನತೆಯನ್ನು ಒಗ್ಗೂಡಿಸಿ ಕಾರ್ಯಕ್ರಮ ಆಚರಿಸುತ್ತಿದ್ದಾರೆ. ಅವರ ಸೇವಾಕಾರ್ಯ ಇದೇ ರೀತಿ ಮುಂದುವರಿಯಲಿ ಎಂದು ಹಾರೈಸಿದರು.

ಸಚಿವ ಸಾ.ರಾ.ಮಹೇಶ್, ಶಾಸಕ ಎಚ್.ವಿಶ್ವನಾಥ್, ರೈತ ಮುಖಂಡ ಅಶ್ವತ್ಥರಾಜೇ ಅರಸ್ ಅವರನ್ನು ಸ್ವರಾಜ್ ಇಂಡಿಯಾ ಪಕ್ಷದ ವತಿಯಿಂದ ಸನ್ಮಾನಿಸಲಾಯಿತು.

ಸ್ವರಾಜ್ ಇಂಡಿಯಾ ಪಕ್ಷದ ತಾಲೂಕು ಅಧ್ಯಕ್ಷ ಗರುಡಗಂಭಸ್ವಾಮಿ, ತಾ.ಪಂ.ಮಾಜಿ ಅಧ್ಯಕ್ಷ ಅಣ್ಣಯ್ಯನಾಯಕ, ನಗರ ಯೋಜನಾ ಪ್ರಾಧಿಕಾರದ ಸದಸ್ಯ ಶಿವಕುಮಾರ್, ರೈತ ಮುಖಂಡರಾದ ಅರ್ಜುನಹಳ್ಳಿ ಸಂಪತ್‌ಕುಮಾರ್, ವಕೀಲ ಹರೀಶ್, ಅಶ್ವತ್ಥರಾಜೇ ಅರಸ್, ನಾಸಿರ್, ರಮೇಶ್, ಯೋಗೇಶ್, ಕಾಳೇನಹಳ್ಳಿ ಮಹೇಶ್, ಮಂಚನಾಯಕ, ತಿಮ್ಮಶೆಟ್ಟಿ ಹಾಜರಿದ್ದರು.

Leave a Reply

Your email address will not be published. Required fields are marked *