ಹೊರಗೆ ಶೃಂಗಾರ ಒಳಗೆ ಗೋಳಿಸೊಪ್ಪು

blank

ಇಂದು ಎಲ್ಲದರ ಮಾನದಂಡ ಬಾಹ್ಯ ಸಾಧನೆ. ಆಂತರಿಕ ಮೌಲ್ಯಗಳ ಬಗ್ಗೆ, ಅಧ್ಯಾತ್ಮದ ಬಗ್ಗೆ ಯಾರೂ ತಲೆ ಕೆಡಿಸಿ ಕೊಳ್ಳುವುದಿಲ್ಲ. ಒಂದು ಸಣ್ಣ ಕಥೆ ಹೀಗಿದೆ: ಒಬ್ಬ ಶಾಲಾ ಗೇಟಿನ ಬಳಿ ಬಲೂನ್ ಮಾರಿ ಜೀವನ ಸಾಗಿಸುತ್ತಿದ್ದ. ಕೆಲವೊಮ್ಮೆ ವ್ಯಾಪಾರ ಕಡಿಮೆಯಾದಾಗ ಆತ ರಂಗು ರಂಗಿನ ಬಲೂನು ತಂದು ಅದರಲ್ಲಿ ಹೀಲಿಯಂ ಗ್ಯಾಸ್ ತುಂಬಿ ಅದನ್ನು ಗಾಳಿಯಲ್ಲಿ ತೇಲಿ ಬಿಡುತ್ತಿದ್ದ. ಇದರಿಂದ ಆಕರ್ಷಿತರಾದ ಮಕ್ಕಳು ಓಡೋಡಿ

ಬಂದು ಬಲೂನು ಖರೀದಿಸುತ್ತಿದ್ದರು. ಆ ಮಕ್ಕಳಲ್ಲಿ ಒಬ್ಬ ಪುಟ್ಟ ಹುಡುಗನಿದ್ದ. ಆತನಿಗೆ ಈ ಬಲೂನು ಗಾಳಿಯಲ್ಲಿ ಹಾರುವ ಸೂತ್ರ ತಿಳಿದಿರಲಿಲ್ಲ. ಬಲೂನುಗಳ ಬಣ್ಣ ಅವನ್ನು ಮೇಲಕ್ಕೊಯ್ಯುತ್ತವೆ ಎಂದು ಆತ ಭಾವಿಸಿದ್ದ. ಇದನ್ನು ತಿಳಿಯಲು ಆತ ಬಲೂನು ಮಾರುವವನಲ್ಲಿ, ‘ಅಂಕಲ್, ಒಂದು ಕಪ್ಪು ಬಲೂನನ್ನು ತೇಲಿ ಬಿಟ್ಟರೆ ಅದು ಕೂಡ ಹಾರುತ್ತಾ?’ ಎಂದು ಕೇಳಿದ. ಆಗ ಆ ಬಲೂನು ಮಾರುವವ ಆ ಪುಟ್ಟ ಹುಡುಗನನ್ನು ಬಹಳ ಪ್ರೀತಿಯಿಂದ ನೋಡಿ ಹೇಳಿದ: ‘ಮಗು, ಬಲೂನಿನ ಬಣ್ಣ ಅದನ್ನು ಮೇಲಕ್ಕೊಯ್ಯುತ್ತಿಲ್ಲ, ಬದಲಿಗೆ ಅದರ ಒಳಗೇನಿದೆಯೋ ಅದು ಅದನ್ನು ಮೇಲಕ್ಕೊಯ್ಯುತ್ತಿದೆ’ ಎಂದ. ಇದರ ಸಂದೇಶವಿಷ್ಟೇ: ಸಮಾಜದಲ್ಲಿ ನಮ್ಮ ಬಾಹ್ಯ ಸಿಂಗಾರ ನಮ್ಮನ್ನು ಉನ್ನತ ವ್ಯಕ್ತಿತ್ವದೆಡೆ ಒಯ್ಯುವುದಿಲ್ಲ, ಬದಲಾಗಿ ಆಂತರಿಕ ಮೌಲ್ಯಗಳು, ಗುಣಗಳು ಇತ್ಯಾದಿ.

ಇತ್ತೀಚೆಗೆ ನಿಧನರಾದ ರತನ್ ಟಾಟಾ, ಮನಮೋಹನ್ ಸಿಂಗ್, ನಮ್ಮ ಹಿಂದಿನ ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ಇವರೆಲ್ಲ ಇದಕ್ಕೆ ಶ್ರೇಷ್ಠ ದೃಷ್ಟಾಂತಗಳು. ನಮಗೆ ಬಾಹ್ಯ ಸಾಧನೆಗಳು ಬೇಕು. ಡಿಗ್ರಿ, ಸಂಬಳ, ಮನೆ, ವಾಹನ ಇತ್ಯಾದಿ ಎಲ್ಲವೂ ಬೇಕು. ಆದರೆ ಆಂತರಿಕವಾಗಿ ಶೂನ್ಯವಾದರೆ ಮತ್ತು ನಾನು- ನನ್ನದೆಂಬ ಅಹಂಕಾರದಲ್ಲಿ ಮುಳುಗಿ ಹೋದರೆ ನಾವು ‘ಹೊರಗೆ ಶೃಂಗಾರ ಒಳಗೆ ಗೋಳಿ ಸೊಪ್ಪು’ ಎಂಬ ನಾಣ್ಣುಡಿಗೆ ಜ್ವಲಂತ ಸಾಕ್ಷಿಗಳಾಗುತ್ತೇವೆ. ಆದುದರಿಂದ ನಾವು ಆಂತರಿಕವಾಗಿಯೂ ಶ್ರೀಮಂತರಾಗೋಣ.

ಚಿನ್ನದ ಕತ್ತಿ, ಕಿರೀಟ… ಹರಾಜಿನತ್ತ ಕಣ್ಣು ಕುಕ್ಕುವ ಜಯಲಲಿತಾ ಆಭರಣಗಳು? ಹೀಗಿದೆ ವರದಿ | Jayalalithaa

Share This Article

ಬೆಣ್ಣೆಯಂತೆ ಕೊಬ್ಬು ಕರಗಬೇಕೆ; ಉತ್ತಮ ಫಲಿತಾಂಶಕ್ಕಾಗಿ ಮನೆಯಲ್ಲಿರುವ ಈ ವಸ್ತುಗಳನ್ನು ಬಳಸಿ | Health Tips

ಕೆಲವರು ಹೊರಗೆ ಊಟ ಮಾಡಿದ ನಂತರವೂ ತೆಳ್ಳಗಿರುತ್ತಾರೆ. ಯಾವುದೇ ಜಿಮ್ ಅಥವಾ ವ್ಯಾಯಾಮವನ್ನೂ ಮಾಡುವುದಿಲ್ಲ. ಏಕೆಂದರೆ…

ಶೀತ & ಜ್ವರವಿದ್ದಾಗ ಹುಳಿ ಮೊಸರು ಸೇವಿಸಬಹುದೇ?; ಇಲ್ಲಿದೆ ಉಪಯುಕ್ತ ಮಾಹಿತಿ | Health Tips

ಶೀತ ಮತ್ತು ಜ್ವರದ ಚಿಕಿತ್ಸೆಯ ಜತೆಗೆ ಹಲವು ರೀತಿಯ ಮುನ್ನೆಚ್ಚರಿಕೆಗಳನ್ನು ಸಹ ತೆಗೆದುಕೊಳ್ಳಬೇಕಾಗುತ್ತದೆ. ಮೊಸರು ಸೇವಿಸದಿರುವುದು…

ವೇಜ್​, ನಾನ್​ವೆಜ್ ಖಾದ್ಯ​ ‘ಟೊಮ್ಯಾಟೋ’ ಇಲ್ಲದೆ ಆಗೋದೆ ಇಲ್ವಾ? ಹೆಚ್ಚು Tomato ತಿನ್ನುವ ನಿಮಗಾಗಿ ಈ ಸುದ್ದಿ!

Tomato :  ನಾವು ನಮ್ಮ ದೈನಂದಿನ ಅಡುಗೆಗಳಲ್ಲಿ ಟೊಮ್ಯಾಟೋವನ್ನು ಬಳಸುತ್ತೇವೆ. ಟೊಮ್ಯಾಟೋಗಳನ್ನು  ಕರಿ, ಗ್ರೇವಿ, ಸೂಪ್…