ಹುಬ್ಬಳ್ಳಿ: ಅಧ್ಯಾಪಕ ನಗರದ ಪಿರಾಮಿಡ್ ಧ್ಯಾನ ಮಂದಿರದಲ್ಲಿ ಶುಕ್ರವಾರ ಗಾರ್ನಿಯರ್ ಕಂಪನಿಯಿಂದ ಹೇರ್ ಕಲರಿಂಗ್ ಅಭಿಯಾನ ನಡೆಯಿತು.
ಈ ಉಚಿತ ಹೇರ್ ಕಲರಿಂಗ್ ಅಭಿಯಾನದಲ್ಲಿ ಮಹಿಳೆಯರು ಉತ್ಸಾಹದಿಂದ ಪಾಲ್ಗೊಂಡಿದ್ದರು. ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಉಚಿತ ಅಭಿಯಾನದ ಪ್ರಯೋಜನ ಪಡೆದುಕೊಂಡರು. ಕಂಪನಿಯ ಪರಿಣತರು ಮಹಿಳೆಯರಿಗೆ ಇಷ್ಟವಾದ ಬಣ್ಣದ ಡೈ ಹಚ್ಚಿದರು.
ಜೂ. 22ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಹುಬ್ಬಳ್ಳಿ ವಿದ್ಯಾನಗರ ಚೇತನ ಕಾಲೇಜ್ ರಸ್ತೆಯ ಫೋಕಸ್ ಮಾರ್ಟ್ ಬೇಸ್‌ಮೆಂಟ್ ನಲ್ಲಿ ಗಾರ್ನಿಯರ್ ಹೇರ್ ಕಲರಿಂಗ್ ಅಭಿಯಾನ ನಡೆಯಿತು.
ಸಾರ್ವಜನಿಕರಿಗೆ ಹೇರ್ ಕಲರಿಂಗ್ ಉಚಿತವಾಗಿದ್ದು, ಕಡ್ಡಾಯವಾಗಿ ಮೊಬೈಲ್ ಫೋನ್ ತಂದು, ಒಟಿಪಿ ಆಧಾರಿತ ನೋಂದಣಿ ಮಾಡಿಸಿಕೊಂಡು ಅಭಿಯಾನದ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಆಯೋಜಕರು ತಿಳಿಸಿದ್ದರು.
ಅದರಂತೆಯೇ ಸಾಕಷ್ಟು ಮಂದಿ ಈ ಉಚಿತ ಅಭಿಯಾನದ ಪ್ರಯೋಜನ ಪಡೆದುಕೊಳ್ಳೋಕೆ ಮುಂದಾದ್ರು. ಸದ್ಯ ಈ ಅಭಿಯಾನ ಜುಲೈ ತಿಂಗಳ ಅಂತ್ಯದವರೆಗೂ ನಡೆಯಲಿದ್ದು, ನೀವೂ ಕೂಡಾ ಈ ಅಬಿಯಾನದ ಸದುಪಯೋಗವನ್ನ ಪಡೆದುಕೊಳ್ಳಬಹುದು. ವಿಜಯವಾಣಿ ಸಹಯೋಗದಲ್ಲಿ ಆಯೋಜಿಸಲಾದ ಈ ಉಚಿತ ಅಭಿಯಾನದಲ್ಲಿ ಪಾಲ್ಗೊಂಡ ಸಾಕಷ್ಟು ಮಂದಿ ವಿಜಯವಾಣಿಯಿಂದ ಇಂತಹ ಮತ್ತಷ್ಟು ಕಾರ್ಯಕ್ರಮಗಳು ನಡೆಯಬೇಕೆಂದು ಆಶಿಸಿದ್ರು.
ಹೇರ್ ಕಲರ್ ಮಾಡಿಸಿಕೊಂಡು ಮಾತನಾಡಿದ ಹುಬ್ಬಳ್ಳಿಯ ನಿವಾಸಿಯಾಗಿರುವ ಗಿರೀಶ್, ಉಚಿತ ಹೇರ್ ಕಲರಿಂಗ್ನ ಸಂಪೂರ್ಣ ಸದುಪಯೋಗವನ್ನ ಪಡೆದುಕೊಂಡ್ವಿ, ನಾನು ಜತೆಗೆ ನನ್ನ ಕುಟುಂಬಸ್ಥರೆಲ್ಲರೂ ಉಚಿತ ಕಲರಿಂಗ್ ಮಾಡಿಸಿಕೊಂಡಿದ್ದೇವೆ. ಈ ಹೊಸ ಲುಕ್ ನಮಗೆ ಖುಷಿ ಕೊಟ್ಟಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ರು.
ಅಲ್ಲದೇ ವಿಜಯವಾಣಿಯಿಂದ ಇಂತಹ ಮತ್ತಷ್ಟು ಕಾರ್ಯಕ್ರಮಗಳು ನಡೆಯಲಿ ಎಂದು ಆಶಿಸಿದ್ರು.