ಕುರುಬರಹಳ್ಳಿಯಲ್ಲಿ ಗಾರ್ನಿಯರ್​ ಬಣ್ಣ ಕಲರವ, ಉಚಿತ ಅಭಿಯಾನದಲ್ಲಿ ನೂರಾರು ಮಹಿಳೆಯರು, ಪುರುಷರು ಭಾಗಿ

ಬೆಂಗಳೂರು: ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ಜೆ.ಸಿ. ನಗರದ ಕುರುಬರಹಳ್ಳಿಯ ಭೀಷ್ಮ ಫೌಂಡೇಶನ್ ಕಚೇರಿಯಲ್ಲಿ ಗಾರ್ನಿಯರ್ ಕಂಪನಿ ಆಯೋಜಿಸಿದ್ದ ಹೇರ್ ಕಲರಿಂಗ್ ಅಭಿಯಾನದಲ್ಲಿ ನೂರಾರು ಮಹಿಳೆಯರು ಹಾಗೂ ಪುರುಷರು ಕೇಶಕ್ಕೆ ಬಣ್ಣ ಹಾಕಿಸಿಕೊಂಡರು. ವಿಜಯವಾಣಿ ಸಹಯೋಗದಲ್ಲಿ ನಡೆದ ಅಭಿಯಾನಕ್ಕೆ ಮಾಜಿ ಉಪಮೇಯರ್ ಹೇಮಲತಾ ಗೋಪಾಲಯ್ಯ ಚಾಲನೆ ನೀಡಿದರು. ಭೀಷ್ಮ ಫೌಂಡೇಶನ್ ಅಧ್ಯಕ್ಷ ವಿ.ಎಂ. ಗಿರಿ, ಜಿ. ಕುಸುಮಾ ಮಾತನಾಡಿ, ವಿಜಯವಾಣಿ ಪತ್ರಿಕೆಯವರು ಇಂತಹ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಜನರಿಗೆ ಹತ್ತಿರವಾಗುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಲ್ಲದೇ ಇದೇ ಸ್ಥಳದಲ್ಲಿ ಮೇ ತಿಂಗಳಿನಲ್ಲೂ ಮತ್ತಷ್ಟು ಬಾರಿ ಅಭಿಯಾನವನ್ನ ನಡೆಸಲಾಯ್ತು. ವಿಶೇಷವೆಂದರೆ, ತದನಂತರದ ದಿನಗಳಲ್ಲಿ ಕ್ಷೇತ್ರದ ಎಲ್ಲಾ ವಾರ್ಡ್​​​​ಗಳಲ್ಲೂ ಗಾರ್ನಿಯರ್ ಹೇರ್ ಕಲರಿಂಗ್ ಅಭಿಯಾನ ಆಯೋಜಿಸಲಾಗಿತ್ತು.


ವಿಜಯವಾಣಿ ಚಿತ್ರಗಳು ಕುರುಬರಹಳ್ಳಿಯಲ್ಲಿ ಹೇರ್ ಕಲರಿಂಗ್ ಅಭಿಯಾನವನ್ನು ಹೇಮಲತಾ ಗೋಪಾಲಯ್ಯ ಉದ್ಘಾಟಿಸಿದರು. ಭೀಷ್ಮ ಫೌಂಡೇಶನ್ ಅಧ್ಯಕ್ಷ ವಿ.ಎಂ. ಗಿರಿ ಇದ್ದರು.


ಅಭಿಯಾನದಲ್ಲಿ ಹೇರ್ ಕಲರಿಂಗ್ ಮಾಡಿಸಿಕೊಂಡ ಮಹಿಳೆ ಜತೆ ಜಿ. ಕುಸುಮಾ, ಶಂಕ‌ರ್, ಭಗತ್ ಸಿಂಗ್, ಅರುಣ್ ಕುಮಾರ್, ಶರತ್, ನವೀನ್, ಬಾಬು, ಕುಮಾರ ಸಿಂಹ ಇತರರಿದ್ದರು.

ಕಳೆದ ಕೆಲ ದಿನಗಳ ಹಿಂದೆ ಪ್ರಾರಂಭವಾದ ಈ ಗಾರ್ನಿಯರ್​​ ಉಚಿತ ಹೇರ್​​ ಕಲರಿಂಗ್​ ಅಭಿಯಾನವು ಜುಲೈ ತಿಂಗಳ ಅಂತ್ಯದವರೆಗೂ ನಡೆಯಲಿದೆ. ಹೇರ್ ಕಲರ್ ಮಾಡಿಸಿಕೊಂಡು ಮಾತನಾಡಿದ ರಾಜಾಜಿನಗರದ ನಿವಾಸಿ ಗಾಯತ್ರಿ, ಹೇರ್ ಕಲರಿಂಗ್ ಕಂಪನಿ ಗಾರ್ನಿಯರ್, ವಿಜಯವಾಣಿ ಸಹಯೋಗದೊಂದಿಗೆ ಗಾರ್ನಿಯರ್​ ಅಭಿಯಾನ ಪ್ರಾರಂಭಿಸಿ ಉಚಿತವಾಗಿ ಹೇರ್ ಕಲರಿಂಗ್ ಮಾಡಿಕೊಡುತ್ತಿದೆ. ಪತ್ರಿಕೆ ಓದುಗರಿಗೆ ಸುದ್ದಿಗಳನ್ನು ಕಟ್ಟಿಕೊಡುವುರ ಜತೆಗೆ ಇಂತಹ ಸಾಮಾಜಿಕ ಕೆಲಸಗಳಲ್ಲೂ ತೊಡಗಿಸಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆ. ಇಂತಹ ಸೇವಾ ಕಾರ್ಯವನ್ನು ವಿಜಯವಾಣಿ ಪತ್ರಿಕೆ ಮುಂದುವರಿಸಲಿ ಎಂದು ಆಶಿಸಿದ್ಧಾರೆ.

Share This Article

Skin care: ಕಣ್ಣುಗಳ ಕೆಳಗಿರುವ ಚರ್ಮ ಸುಕ್ಕುಗಟ್ಟಿದೆಯೇ? ಹೀಗೆ ಮಾಡಿ..

ಕಣ್ಣುಗಳು(Skin care) ಸೂಕ್ಷ್ಮ ಅಂಗಗಳಾಗಿದ್ದು, ಅವುಗಳ ಕೆಳಗಿರುವ ಚರ್ಮವು ಸಹ ಸೂಕ್ಷ್ಮವಾಗಿರುತ್ತದೆ. ಬಿಸಿಲು, ಪೌಷ್ಠಿಕ ಆಹಾರದ…

Health Tips : ಮೆಟ್ಟಿಲು ಹತ್ತುವಾಗ ಸುಸ್ತಾಗುತ್ತದಾ..! ಈ ಸಲಹೆಗಳನ್ನು ಅನುಸರಿಸಿ

ಬೆಂಗಳೂರು: ಮೆಟ್ಟಿಲು ಹತ್ತುವಾಗ ಉಸಿರಾಟದ ತೊಂದರೆ ಸಾಮಾನ್ಯ. ಈ ಸಮಸ್ಯೆಯು ವಯಸ್ಸಾದಂತೆ ಹೆಚ್ಚಾಗುತ್ತಿದೆ, ಆದರೆ ಇತ್ತೀಚಿನ…