ವಡೋದರ: ನಾಯಕಿ ಆಶ್ಲೇ ಗಾರ್ಡ್ನರ್ (52 ರನ್, 32 ಎಸೆತ, 5 ಬೌಂಡರಿ, 3 ಸಿಕ್ಸರ್ ಹಾಗೂ 39ಕ್ಕೆ 2 ವಿಕೆಟ್) ಆಲ್ರೌಂಡ್ ನಿರ್ವಹಣೆಯ ಬಲದಿಂದ ಗುಜರಾತ್ ಜೈಂಟ್ಸ್ “ಮಹಿಳಾ ಐಪಿಎಲ್ ಖ್ಯಾತಿಯ’ ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ (ಡಬ್ಲುಪಿಎಲ್) ಯುಪಿ ವಾರಿಯರ್ಸ್ ಎದುರು 6 ವಿಕೆಟ್ಗಳ ಸುಲಭ ಗೆಲುವು ದಾಖಲಿಸಿದೆ.
ನೂತನ ಕೋಟಂಬಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಜೈಂಟ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಲೆಗ್ ಸ್ಪಿನ್ನರ್ ಪ್ರಿಯಾ ಮಿಶ್ರಾ (25ಕ್ಕೆ 3) ಸಹಿತ ಇತರ ಬೌಲರ್ಗಳ ಸಂಟಿತ ಬಿಗಿ ದಾಳಿಯ ನಡುವೆಯೂ ನಾಯಕಿ ದೀಪ್ತಿ ಶರ್ಮ (39 ರನ್, 27 ಎಸೆತ, 6 ಬೌಂಡರಿ) ಆಸರೆಯಲ್ಲಿ ಯುಪಿ ವಾರಿಯರ್ಸ್ ತಂಡ 9 ವಿಕೆಟ್ಗೆ 143 ರನ್ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತು. ಪ್ರತಿಯಾಗಿ ಆರಂಭಿಕ ಆಘಾತದ ನಡುವೆಯೂ ಆಶ್ಲೇ ಗಾರ್ಡ್ನರ್ ಜವಾಬ್ದಾರಿಯುತ ಆಟದ ನೆರವಿನಿಂದ ಗುಜರಾತ್ ಜೈಂಟ್ಸ್ 18 ಓವರ್ಗಳಲ್ಲಿ 4 ವಿಕೆಟ್ಗೆ 144 ರನ್ಗಳಿಸಿ ಮೊದಲ ಗೆಲುವಿನ ಸಂಭ್ರಮ ಕಂಡಿತು.
ಯುಪಿ ವಾರಿಯರ್ಸ್: 9 ವಿಕೆಟ್ಗೆ 143 (ಕಿರಣ್ 15, ವೃಂದಾ ದಿನೇಶ್ 6,ಉಮಾ 24, ದೀಪ್ತಿ ಶರ್ಮ 39, ಹ್ಯಾರಿಸ್ 4, ಶ್ವೇತಾ 16, ಅಲಾನ್ ಕಿಂಗ್ 19*,ಎಕೆಲ್ ಸ್ಟೋನ್ 2, ಸೈಮಾ ಠಾಕೂರ್ 15, ಪ್ರಿಯಾ ಮಿಶ್ರಾ 25ಕ್ಕೆ 3, ಡಿಯೆಂಡ್ರಾ 34ಕ್ಕೆ 2, ಆಶ್ಲೇ ಗಾರ್ಡ್ನರ್ 39ಕ್ಕೆ 2).
ಗುಜರಾತ್ ಜೈಂಟ್ಸ್: 18 ಓವರ್ಗಳಲ್ಲಿ 4 ವಿಕೆಟ್ಗೆ 144 (ವೊಲ್ವಾರ್ಡ್ 22, ಮೂನಿ 0, ಹೇಮಲತಾ 0, ಆಶ್ಲೇ ಗಾರ್ಡ್ನರ್ 52, ಹರ್ಲೀನ್ 33*, ಡಿಯೆಂಡ್ರಾ 34*, ಎಕೆಲ್ ಸ್ಟೋನ್ 16ಕ್ಕೆ 2).