More

  ಕಸ ಎಸೆದರೆ ಪರವಾನಗಿ ರದ್ದು

  ಬೆಳಗಾವಿ: ನಗರ ಪ್ರದೇಶದಲ್ಲಿ ಎಲ್ಲೆಂದರಲ್ಲಿ ಕಸ ಚೆಲ್ಲುವ ಹೋಟೆಲ್‌ಗಳ ಪರವಾನಗಿ ರದ್ದು ಮಾಡಲಾಗುವುದು. ಜತೆಗೆ ಪರಿಸರ ಇಲಾಖೆಯಿಂದ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಹಸಿರು ನ್ಯಾಯಾಧಿಕರಣ ರಾಜ್ಯಮಟ್ಟದ ಸಮಿತಿ ಅಧ್ಯಕ್ಷ, ನ್ಯಾ.ಸುಭಾಷ ಆಡಿ ಹೇಳಿದ್ದಾರೆ.

  ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಘನ ತ್ಯಾಜ್ಯ ನಿರ್ವಹಣೆ ಕುರಿತು ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಅಸೋಸಿಯೇಷನ್ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಅಂಗಡಿ ಮತ್ತು ಹೋಟೆಲ್‌ಗಳಲ್ಲಿ ಸ್ವಚ್ಛತೆ ಇರಬೇಕು. ಬಯೋ ಮೆಡಿಕಲ್ ತ್ಯಾಜ್ಯಗಳಾದ ಸಿರೀಂಜ್, ಅವಧಿ ಮೀರಿದ ಟ್ಯಾಬ್ಲೆಟ್‌ಗಳು, ಇ-ತ್ಯಾಜ್ಯಗಳಾದ ಇಲೆಕ್ಟ್ರಾನಿಕ್, ಕಂಪ್ಯೂಟರ್ ತ್ಯಾಜ್ಯಗಳನ್ನು ಸಂಗ್ರಹ ಕೇಂದ್ರಕ್ಕೆ ವಿಲೇವಾರಿ ಮಾಡಬೇಕು. ಪಾಲಿಕೆಯಲ್ಲಿ ಸ್ವಚ್ಛತೆಗೆ ಸಂಬಂಧಿಸಿದಂತೆ ವಾರ್ಡ್ ಕಮಿಟಿಗಳು ಆಗಿಲ್ಲ.

  ಹಾಗಾಗಿ ಕಮಿಟಿ ರಚನೆ ಮಾಡಿ ತಿಂಗಳಿಗೊಮ್ಮೆ ಸಭೆ ನಡೆಸಬೇಕು. ಯಾರು, ಎಲ್ಲಿ ಕಸ ತಂದು ಹಾಕುತ್ತಾರೆ ಎಂಬುದರ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು. ಅಂಥವರಿಂದ ದಂಡ ವಸೂಲಿ ಮಾಡಬೇಕು ಹಾಗೂ ರಸ್ತೆ ಸೇರಿ ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ಬೇಕಾಬಿಟ್ಟಿಯಾಗಿ ಕಸ ಎಸೆದವರಿಗೆ ಭಾರಿ ಮೊತ್ತದ ದಂಡ ವಿಧಿಸಬೇಕು ಎಂದು ಸೂಚಿಸಿದರು. ಪಾಲಿಕೆ ಆಯುಕ್ತ ಜಗದೀಶ, ವಿವಿಧ ಇಲಾಖೆ ಅಧಿಕಾರಿಗಳು, ಅಸೋಸಿಯೇಷನ್ ಪದಾಧಿಕಾರಿಗಳು ಇದ್ದರು.

  ತ್ಯಾಜ್ಯ ವಿಲೇವಾರಿ ಮಾಡದ ಅಧಿಕಾರಿಗೆ ದಂಡ: ಗಿಡ ಕತ್ತರಿಸಿದ ಬಳಿಕ ತ್ಯಾಜ್ಯ ವಿಲೇವಾರಿ ಕುರಿತು ಸರಿಯಾಗಿ ಮಾಹಿತಿ ನೀಡದ ಹೆಸ್ಕಾಂ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಆಡಿ, ಸರಿಯಾಗಿ ತ್ಯಾಜ್ಯ ವಿಲೇವಾರಿ ಮಾಡದಿದ್ದರೆ ನಿಮಗೂ ದಂಡ ಹಾಕಲಾಗುತ್ತದೆ. ಈಗಾಗಲೆ ನಿಮ್ಮಿಂದ ಸಾಕಷ್ಟು ದುಡ್ಡು ಬರಬೇಕಿದೆ. ಕಸ ವಿಲೇವಾರಿ ಮಾಡಲು ಹಿಂದೇಟು ಹಾಕಿದರೆ ನಿಮಗೂ ವೈಯಕ್ತಿಕವಾಗಿ ದಂಡ ಹಾಕಲಾಗುತ್ತದೆ ಎಂದು ಎಚ್ಚರಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಸಿನಿಮಾ

  Latest Posts