More

    ಕಾವೇರಿ ಭವನದ ಮುಂದೆ ಕಸದ ರಾಶಿ; ಐಎಎಸ್ ಅಧಿಕಾರಿಗಳು ಕೆಲಸ ಮಾಡುವ ಸ್ಥಳದಲ್ಲೇ ಸ್ವಚ್ಛತೆಯ ಕೊರತೆ 

    ಬೆಂಗಳೂರು: ಕೆಂಪೇಗೌಡ ರಸ್ತೆಯ ಕಾವೇರಿ ಭವನದ ಸಂಕೀರ್ಣದಲ್ಲಿ ಹಲವು ಸರ್ಕಾರಿ ಕಚೇರಿಗಳು, ಬ್ಯಾಂಕ್​ಗಳು ಹಾಗೂ ಗ್ರಾಹಕ ನ್ಯಾಯಲಯಗಳು ಕಾರ್ಯನಿರ್ವಹಿಸುತ್ತವೆ. ಇದಕ್ಕಂಟಿಕೊಂಡೇ ಸಿವಿಲ್ ನ್ಯಾಯಾಲಯಗಳ ಸಂಕೀರ್ಣವಿದೆ. ಇಷ್ಟೊಂದು ಪ್ರಾಮುಖ್ಯತೆ ಹೊಂದಿರುವ ಸ್ಥಳದಲ್ಲಿ ಕಸದ ರಾಶಿಯೇ ಬಿದ್ದಿದೆ. ಇದರಿಂದಾಗಿ ಕಾವೇರಿ ಭವನ ಸಂಕೀರ್ಣದ ಉದ್ಯೋಗಿಗಳು ಮತ್ತು ಸಾರ್ವಜನಿಕರಲ್ಲಿ ಸಾಂಕ್ರಾಮಿಕ ರೋಗಕ್ಕೆ ತುತ್ತಾಗುವ ಭೀತಿ ಮೂಡಿದೆ.

    ಕಾವೇರಿ ಭವನದಲ್ಲಿ ನೀರಾವರಿ ಇಲಾಖೆ, ವಿದ್ಯುತ್ ಪ್ರಸರಣ ನಿಗಮ, ಗ್ರಾಹಕರ ನ್ಯಾಯಾಲಯ, ಬ್ಯಾಂಕ್​ಗಳು ಹಾಗೂ ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇಶಕರ ಕಚೇರಿಯೂ ಇದೆ. ಹಲವು ಐಎಎಸ್ ಮತ್ತು ಕೆಎಎಸ್ ಅಧಿಕಾರಿಗಳನ್ನು ಒಳಗೊಂಡಂತೆ ನೂರಾರು ಸಿಬ್ಬಂದಿ ಇಲ್ಲಿ ಕೆಲಸ ಮಾಡುತ್ತಾರೆ. ತಮ್ಮ ಕಚೇರಿ ಬಳಿ ಬಿದ್ದಿರುವ ಕಸದ ರಾಶಿ ಕಂಡರೂ ಅದಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ಮುಗುಮ್ಮಾಗಿದ್ದಾರೆ.

    ಕಚೇರಿ ಕಸವೇ ಹೆಚ್ಚು

    ಕಸದ ರಾಶಿಯಲ್ಲಿ ಕಾವೇರಿ ಭವನ ಸಂಕೀರ್ಣದಲ್ಲಿರುವ ಕಚೇರಿಗಳ ತ್ಯಾಜ್ಯವೇ ಹೆಚ್ಚಾಗಿದೆ. ಮನೆಗಳು ಮತ್ತು ಅಂಗಡಿ ಮಳಿಗೆಗಳಿಗೆ ಮೂಲದಲ್ಲೇ ತ್ಯಾಜ್ಯ ವಿಂಗಡಿಸಿ ಕಸದ ವಾಹನಕ್ಕೆ ಕೊಡುವುದನ್ನು ಬಿಬಿಎಂಪಿ ಕಡ್ಡಾಯಗೊಳಿಸಿದೆ. ಎಲ್ಲೆಂದರಲ್ಲಿ ಕಸ ಹಾಕಿ ಬ್ಲಾಕ್ ಸ್ಪಾಟ್ ನಿರ್ವಿುಸಿದರೆ 500 ರೂ. ದಂಡ ಹಾಕಲು ಮಾರ್ಷಲ್​ಗಳನ್ನು ನೇಮಿಸಿದೆ. ಆದರೆ, ಸರ್ಕಾರಿ ಕಚೇರಿಯ ಬಳಿಯೇ ಕಸದ ರಾಶಿ ನಿರ್ವಣವಾಗಿದೆ. ಆದರೂ ಬಿಬಿಎಂಪಿ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳಲು ವಿಫಲರಾಗಿದ್ದಾರೆ.

    ಕಳೆದ 20 ದಿನಗಳಿಂದ ಇಲ್ಲಿ ಕಸ ಸುರಿಯಲಾಗುತ್ತಿದೆ. ಕಸದ ರಾಶಿ ಗಮನಿಸಿದರೂ ನೋಡಿಲ್ಲ ಎಂಬಂತೆ ಅಧಿಕಾರಿಗಳು ಕಾರಿನಲ್ಲಿ ಹೋಗುತ್ತಾರೆ. ಇದು ತಪು್ಪ. ಮೊದಲು ಕಸದ ರಾಶಿಯನ್ನು ತೆರವುಗೊಳಿಸಬೇಕು. ಕಚೇರಿ ತ್ಯಾಜ್ಯವನ್ನು ಇಲ್ಲಿ ಸುರಿಯದೆ, ಕಸದ ವಾಹನಗಳಿಗೆ ಕೊಡುವ ವ್ಯವಸ್ಥೆ ಮಾಡಬೇಕು.

    | ಅರ್ಜುನ್ ಮೂರ್ತಿ ಸ್ಥಳೀಯ ವ್ಯಾಪಾರಿ 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts