ಹಾವೇರಿ: ಗಾಂಜಾ ಮಾರಾಟ ಮಾಡಲು ಮುಂದಾಗಿದ್ದ ಇಬ್ಬರನ್ನು ನಗರ ಸಿಇಎನ್ ಠಾಣೆ ಪೊಲೀಸರು ಗುರುವಾರ ಬಂಧಿಸಿದ್ದು, ಅವರಿಂದ 6 ಲಕ್ಷ ರೂ. ಮೌಲ್ಯದ 6 ಕೆಜಿ 744 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.
ನಗರದ ಗದಿಗೇರ ಓಣಿ ನಿವಾಸಿ ಸಾಹಿಲ್ ಲಾಲಸಾಬ ಹುಬ್ಬಳ್ಳಿ ಹಾಗೂ ನಾಗೇಂದ್ರನಮಟ್ಟಿ ನಿವಾಸಿ ಅಬ್ದುಲ್ ಗಪೂರ ದಾದಾಪೀರ ಹುಲಗೂರ ಬಂಧಿತ ಆರೋಪಿಗಳು.
ನಗರದ ಪಿಬಿ ರಸ್ತೆಯ ಅಜ್ಜಯ್ಯನ ಗುಡಿ ಬಳಿಯ ಪಾನ್‌ಶಾಪ್‌ನಲ್ಲಿ ಮಾರಾಟ ಮಾಡಲು ಗಾಂಜಾ ಸಂಗ್ರಹಿಸಿ ಇಟ್ಟಿದ್ದರು.
ಎಸ್‌ಪಿ ಅಂಶುಕುಮಾರ, ಎಎಸ್‌ಪಿ ಎಲ್.ವೈ. ಶಿರಕೋಳ ಅವರ ಮಾರ್ಗದರ್ಶನದಲ್ಲಿ ಸಿಇಎನ್ ಠಾಣೆ ಇನ್ಸ್‌ಪೆಕ್ಟರ್ ಶಿವಶಂಕರ ಗಣಾಚಾರಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ.
ಮೊನ್ನೆಯಷ್ಟೇ ಹಾನಗಲ್ಲ ರಸ್ತೆಯಲ್ಲಿ ಆಡೂರ ಪೊಲೀಸರು ಆರು ಕೆಜಿ ಗಾಂಜಾ ಜಪ್ತಿ ಮಾಡಿದ್ದರು. ವಾರದೊಳಗೆ ಪೊಲೀಸರು 12 ಕೆಜಿಗೂ ಅಧಿಕ ಗಾಂಜಾ ಜಪ್ತಿ ಮಾಡಿದಂತಾಗಿದೆ.
TAGGED:two arrest