ಅಸ್ಸಾಂನಲ್ಲಿ 4,700 ಕೆ.ಜಿ ಗಾಂಜಾ ವಶ: ಪೊಲೀಸರ ನೋಡಿದ ಕೂಡಲೇ ಎಸ್ಕೇಪ್​

ಗುವಾಹಟಿ: ಅಸ್ಸಾಂನ ಕರೀಂಗಂಜ್​ ಜಿಲ್ಲೆಯಲ್ಲಿ 4,700 ಕೆ.ಜಿ.ಗೂ ಅಧಿಕ ಪ್ರಮಾಣದ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಪತ್ತೆಯಾಗಿರುವ ಅತಿ ದೊಡ್ಡ ಮಾದಕ ವಸ್ತು ಪ್ರಕರಣಗಳಲ್ಲಿ ಇದೂ ಕೂಡ ಒಂದಾಗಿದೆ ಎಂದು ಅವರು ಹೇಳಿದ್ದಾರೆ. ಪೊಲೀಸರು ಚುರೈಬರಿ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ನಿಯಮಿತ ತಪಾಸಣೆ ನಡೆಸುತ್ತಿದ್ದಾಗ ತ್ರಿಪುರಾದಿಂದ ಆಗಮಿಸುತ್ತಿದ್ದ ಟ್ರಕ್​ನಲ್ಲಿ ಈ ನಿಷಿದ್ಧ ವಸ್ತುವನ್ನು ಸಾಗಿಸುತ್ತಿರುವುದು ಬೆಳಕಿಗೆ ಬಂದಿತು. ನೈಸರ್ಗಿಕ ರಬ್ಬರ್​ ಹಾಳೆಗಳ ಅಡಿಯಲ್ಲಿ ಅಡಗಿಸಿ ಇಡಲಾಗಿದ್ದ 4,728 ಕೆ.ಜಿಗೂ … Continue reading ಅಸ್ಸಾಂನಲ್ಲಿ 4,700 ಕೆ.ಜಿ ಗಾಂಜಾ ವಶ: ಪೊಲೀಸರ ನೋಡಿದ ಕೂಡಲೇ ಎಸ್ಕೇಪ್​