ವ್ಯಕ್ತಿಗತ ಸ್ವಾರ್ಥ ಬಿಟ್ಟು ಕೆಲಸ ಮಾಡಿ

ಬೀದರ್: ವ್ಯಕ್ತಿಗತ ಸ್ವಾರ್ಥ ಬಿಟ್ಟು ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳುವುದರಿಂದ ವ್ಯಕ್ತಿಯಿಂದ ಸಮಾಜ, ಸಮಾಜದಿಂದ ವ್ಯಕ್ತಿ ಬೆಳೆಯಲು ಸಾಧ್ಯ ಎಂದು ಗೋರಚಿಂಚೋಳಿ ಮಠದ ಶ್ರೀ ರೇವಣಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ಜಿಲ್ಲಾ ಹಾಗೂ ಬೀದರ್ ತಾಲೂಕು ಗಾಣಿಗ ಸಮಾಜದಿಂದ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಅಗ್ರಶ್ರೇಣಿಯಲ್ಲಿ ಪಾಸಾದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿ, ಹಿಂದುಳಿದ ಗಾಣಿಗ ಸಮಾಜವನ್ನು ಆರ್ಥಿಕ, ಶೈಕ್ಷಣಿಕವಾಗಿ ಬಲಪಡಿಸಲು ಸಮಾಜದ ಎಲ್ಲರೂ ಮೊದಲು ಒಗ್ಗಟ್ಟು ಪ್ರದರ್ಶನ ಮಾಡಬೇಕು ಎಂದು ಸಲಹೆ ನೀಡಿದರು.
ಗದಗನ ಜಗದ್ಗುರು ತೋಂಟದಾರ್ಯ ಮಠದ ಶ್ರೀ ಮಹಾಂತ ದೇವರು ಮಾತನಾಡಿ, ನಾವೆಲ್ಲರೂ ಒಂದೇ ಎಂಬ ಮಂತ್ರ ಪಠಿಸುವ ಮೂಲಕ ಗಾಣಿಗ ಸಮಾಜದವರು ಒಂದಾಗಬೇಕು. ಸಮಾಜದಲ್ಲಿನ ಒಳ ಪಂಗಡಗಳನ್ನು ಮರೆತು ಸಂಘಟಿತರಾದರೆ ಅಭಿವೃದ್ಧಿ ಸಾಧ್ಯ. ಮಕ್ಕಳ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಹೇಳಿದರು.
ಡಾ. ಗುಂಡಪ್ಪ ಚಿಲ್ಲರ್ಗೆ ಮಾತನಾಡಿದರು. ಸರ್ಕಾರಿ ಸೇವೆಯಲ್ಲಿ ನಿವೃತ್ತಿ ಹೊಂದಿದ ಸಮಾಜದವರಿಗೆ ಗೌರವ ಸನ್ಮಾನ ಮಾಡಲಾಯಿತು. ಜಿಲ್ಲಾ ಗಾಣಿಗ ಸಮಾಜದ ಗೌರವಾಧ್ಯಕ್ಷ ವಿ.ಎಸ್. ಚಿಲ್ಲರ್ಗೆ, ಕಾರ್ಯದರ್ಶಿ ಸಂಜೀವಕುಮಾರ ಸಜ್ಜನಶೆಟ್ಟಿ, ಬೀದರ್ ತಾಲೂಕಾಧ್ಯಕ್ಷ ಪ್ರೊ. ಎಸ್.ಬಿ. ಸಜ್ಜನಶೆಟ್ಟಿ, ಸಮಾಜದ ಪ್ರಮುಖರಾದ ಶಂಕರರಾವ ಬುಧೇರಾ, ಶಿವಕುಮಾರ ಶಿವಣಿ, ಗುಂಡಪ್ಪ ಸಜ್ಜನಶೆಟ್ಟಿ, ಬಾಬುರಾವ ಸಜ್ಜನಶೆಟ್ಟಿ, ವಿಶ್ವನಾಥ ಸಜ್ಜನಶೆಟ್ಟಿ , ರಾಜಕುಮಾರ ಬುಧೇರಾ, ಮಹೇಶ ಸಜ್ಜನಶೆಟ್ಟಿ ಇತರರಿದ್ದರು.
ಬಸವರಾಜ ಚಿಕ್ಲೆ ಪ್ರಾಸ್ತಾವಿಕ ಮಾತನಾಡಿದರು. ಸಂತೋಷ ಹಿಪ್ಪಳಗಾಂವ ಸ್ವಾಗತಿಸಿದರು. ಮಲ್ಲಿನಾಥ ಸಜ್ಜನಶೆಟ್ಟಿ ನಿರೂಪಣೆ ಮಾಡಿದರು. ವೀರೇಂದ್ರ ಚಿಲ್ಲರ್ಗೆ ವಂದಿಸಿದರು.

Leave a Reply

Your email address will not be published. Required fields are marked *