ಕೋಲ್ಕತ: ಐತಿಹಾಸಿಕ ಪಿಂಕ್ ಬಾಲ್ ಟೆಸ್ಟ್ ಪಂದ್ಯ ಕೆಲವೇ ಕ್ಷಣಗಳಲ್ಲಿ ಆರಂಭವಾಗಲಿದ್ದು, ಟಾಸ್ ಗೆದ್ದ ಬಾಂಗ್ಲಾದೇಶ ಭಾರತದ ವಿರುದ್ಧ ಬ್ಯಾಟಿಂಗ್ ಆಯ್ದುಕೊಳ್ಳುವ ಮೂಲಕ ಚೊಚ್ಚಲ ಹಗಲು-ಇರುಳು ಪಂದ್ಯದಲ್ಲೇ ಟಾಸ್ ಗೆದ್ದು ಸಂಭ್ರಮಿಸಿದೆ.
ಚೊಚ್ಚಲ ಬಾರಿಗೆ ಭಾರತ ಮತ್ತು ಬಾಂಗ್ಲಾದೇಶ ಪಿಂಕ್ ಬಾಲ್ ಟೆಸ್ಟ್ ಪಂದ್ಯಕ್ಕೆ ಸಾಕ್ಷಿಯಾಗುತ್ತಿವೆ. ಈ ಸಂಭ್ರಮದ ನಡುವೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ಪಿಂಕ್ ಬಾಲ್ ಮಾದರಿಯ ಸ್ವೀಟ್ಸ್ ಚಿತ್ರವನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಿ ಸಂಭ್ರಮಿಸಿದ್ದಾರೆ.
ಐತಿಹಾಸಿಕ ಕ್ಷಣವನ್ನು ಸ್ಮರಣೀಯವಾಗಿಸಲು ಗುರುವಾರ ರಾತ್ರಿಯಿಂದಲೇ ಇಡೀ ಕೋಲ್ಕತ ನಗರ ಪಿಂಕ್ ಬಣ್ಣ ಮಯವಾಗಿದೆ. ಇದೀಗ ಪಿಂಕ್ ಬಣ್ಣದ ಸ್ವೀಟ್ಸ್ ಫೋಟೋವನ್ನು ಹಾಕಿ ಕೋಲ್ಕತದಲ್ಲಿ ಸ್ವೀಟ್ಸ್ ಕೂಡ ಪಿಂಕ್ ಬಣ್ಣಮಯವಾಗಿದೆ ಎಂದು ಗಂಗೂಲಿ ಟ್ವೀಟ್ ಮಾಡಿದ್ದಾರೆ. ಪಶ್ಚಿಮ ಬಂಗಾಳ ಮೂಲದ ಸ್ವೀಟ್ಗಳು ಸಂದೇಶ್ ಎಂದೇ ಹೆಸರಾಗಿವೆ.
ಇದಕ್ಕೂ ಮುನ್ನ ಕೋಲ್ಕತ ನಗರವು ಪಿಂಕ್ ಬಣ್ಣಕ್ಕೆ ತಿರುಗಿದೆ ಎಂದು ಟ್ವೀಟ್ ಮಾಡಿ, ಪಿಂಕ್ ಲೈಟ್ಗಳಿಂದ ಅಲಂಕೃತಗೊಂಡಿರುವ ಕೆಲ ಪ್ರಮುಖ ಕಟ್ಟಡಗಳ ಫೋಟೋವನ್ನು ಗಂಗೂಲಿ ಶೇರ್ ಮಾಡಿಕೊಂಡಿದ್ದರು.
ಇಂದಿನಿಂದ 5 ದಿನಗಳವರೆಗೂ ಕೋಲ್ಕತ ನಗರ ಪಿಂಕ್ ಬಣ್ಣಮಯವಾಗಿರಲಿದೆ. ಈಡನ್ ಗಾರ್ಡನ್ ಕ್ರೀಡಾಂಗಣ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ. ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಸೇರಿದಂತೆ ಅನೇಕ ಗಣ್ಯರು ಕ್ರೀಡಾಂಗಣದಲ್ಲಿ ಉಪಸ್ಥಿತರಿದ್ದಾರೆ. (ಏಜೆನ್ಸೀಸ್)
#INDvsBAN 2nd Test (day/night): Bangladesh win the toss & elect to bat first. #PinkBallTest pic.twitter.com/Gg3HfPEOLo
— ANI (@ANI) November 22, 2019
Sweets go pink in kolkata @BCCI @JayShah @CabCricket pic.twitter.com/dDfJYYRkfk
— Sourav Ganguly (@SGanguly99) November 21, 2019
Well done felu.. pic.twitter.com/KMC9FiHuIi
— Sourav Ganguly (@SGanguly99) November 21, 2019
Welcome to pink test ..@JayShah @bcci pic.twitter.com/lk9h9AX7Ox
— Sourav Ganguly (@SGanguly99) November 21, 2019
Well @bcci and @cab … look forward to 5 days @JayShah pic.twitter.com/EbZigS3JMk
— Sourav Ganguly (@SGanguly99) November 21, 2019