ಗಂಗೂಬಾಯಿ ಹಾನಗಲ್ ಗುರುಕುಲ ಮುಚ್ಚುವುದಿಲ್ಲ

blank

ಹುಬ್ಬಳ್ಳಿ: ಇಲ್ಲಿಯ ನೃಪತುಂಗ ನಗರದಲ್ಲಿರುವ ಗಾನವಿದುಷಿ ಡಾ. ಗಂಗೂಬಾಯಿ ಹಾನಗಲ್ ಗುರುಕುಲವನ್ನು ಸಮರ್ಪಕವಾಗಿ ನಡೆಸಲು ಅಗತ್ಯ ಅನುದಾನ ನೀಡಬೇಕು, ಇದನ್ನು ಬೇರೆಡೆ ಸ್ಥಳಾಂತರ ಮಾಡಬಾರದು ಎಂದು ಶಾಸಕ ಮಹೇಶ ಟೆಂಗಿನಕಾಯಿ ಬೆಳಗಾವಿ ವಿಧಾನ ಮಂಡಲ ಅಧಿವೇಶನದಲ್ಲಿ ಗಮನ ಸೆಳೆದಿದ್ದಾರೆ.

ಬುಧವಾರ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಟೆಂಗಿನಕಾಯಿ ಅವರು, ಡಾ. ಗಂಗೂಬಾಯಿ ಹಾನಗಲ್ ಗುರುಕುಲವನ್ನು ಸ್ಥಳಾಂತರ ಮಾಡುವ ಅಥವಾ ಬಾಗಿಲು ಮುಚ್ಚುವ ಆತಂಕ ಕಾಡುತ್ತಿದೆ. ಈ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾಗಿದೆ ಎಂದು ಹೇಳಿದರು.

ಇದರ ಅಭಿವೃದ್ಧಿಗೆ ಶೀಘ್ರ ಅನುದಾನ ಬಿಡುಗಡೆ ಮಾಡುವ ಮೂಲಕ ಸಂಗೀತ ಕ್ಷೇತ್ರದ ಮಹನೀಯರಿಗೆ ಗೌರವ ನೀಡಬೇಕು. ಭಾರತೀಯ ಪರಂಪರೆ ಉಳಿಸಿ ಬೆಳೆಸಿಕೊಂಡು ಹೋಗುತ್ತಿರುವ ದೇಶದ ಏಕೈಕ ಗುರುಕುಲ ಇದಾಗಿದೆ. ಇದನ್ನು ಹುಬ್ಬಳ್ಳಿಯಲ್ಲಿಯೇ ಉಳಿಸಬೇಕು ಎಂದು ಆಗ್ರಹಿಸಿದರು.

ಸರ್ಕಾರದ ಪರವಾಗಿ ಉತ್ತರ ನೀಡಿದ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಅವರು, ಪ್ರಸ್ತುತ ಗುರುಕುಲ ಟ್ರಸ್ಟ್ ಅನ್ನು ಆರ್ಥಿಕ ಇಲಾಖೆಯ ಅಭಿಪ್ರಾಯದನ್ವಯ ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ವಶಕ್ಕೆ ನೀಡಬೇಕೆ? ಅಥವಾ ಜಿಲ್ಲಾಧಿಕಾರಿ ಹಾಗೂ ಕಾರ್ಯಾಧ್ಯಕ್ಷರು ಡಾ. ಗಂಗೂಬಾಯಿ ಹಾನಗಲ್ ಗುರುಕುಲ ಟ್ರಸ್ಟ್ ಕೋರಿಕೆಯಂತೆ ಕನ್ನಡ ಮತ್ತು ಸಂಸತಿ ಇಲಾಖೆಯ ವಶಕ್ಕೆ ನೀಡಬೇಕೆ? ಎಂಬ ವಿಷಯ ಸರ್ಕಾರದ ಹಂತದಲ್ಲಿ ಪರಿಶೀಲನೆಯಲ್ಲಿದೆ.

ಸದ್ಯ ಗುರುಕುಲ ಟ್ರಸ್ಟ್ ಸಂಸ್ಥೆಯನ್ನು ಹುಬ್ಬಳ್ಳಿಯಿಂದ ಸ್ಥಳಾಂತರಿಸುವುದಾಗಲಿ, ಕಾರ್ಯಚಟುವಟಿಕೆಗಳನ್ನು ಸ್ಥಗಿತಗೊಳಿಸುವುದಾಗಲಿ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.

ಸರ್ಕಾರಕ್ಕೆ ತಪು$್ಪ ಮಾಹಿತಿ:
ಡಾ. ಗಂಗೂಬಾಯಿ ಹಾನಗಲ್ ಗುರುಕುಲಕ್ಕೆ ವಾಷಿರ್ಕ 1.45 ಕೋಟಿ ರೂ. ಅನುದಾನ ಅಗತ್ಯವಿದೆ. ಇದನ್ನು ಒದಗಿಸಿದರೆ ಸುಲಭವಾಗಿ ನಡೆದುಕೊಂಡು ಹೋಗುತ್ತದೆ. ಅದರೆ, ಸರ್ಕಾರದ ಅಧಿಕಾರಿಗಳು 2.19 ಕೋಟಿ ರೂ. ಎಂದು ತಪು$್ಪ ಮಾಹಿತಿ ನೀಡಿದ್ದಾರೆ ಎಂದು ಮಹೇಶ ಟೆಂಗಿನಕಾಯಿ ಸಚಿವರ ಗಮನ ಸೆಳೆದರು. ಇದಕ್ಕೆ ಉತ್ತರಿಸಿದ ಸಚಿವರು ಸರಿಪಡಿಸುವ ಭರವಸೆ ನೀಡಿದರು.

Share This Article

ದೈಹಿಕ – ಮಾನಸಿಕ ಆರೋಗ್ಯಕ್ಕೆ ಪ್ರಯೋಜನ ನೀಡುವ ಬಕಾಸನ

ಪ್ರ: ಬಕಾಸನದ ಮಾಹಿತಿ ಹಾಗೂ ಅಭ್ಯಾಸದ ಕ್ರಮ ತಿಳಿಸಿ ಉ: ಬಕಾಸನ ಎಂಬುದು ಸಂಸ್ಕೃ ಪದ…

Skin Care | ಚಳಿಗಾಲದಲ್ಲಿ ನಿಮ್ಮ ತ್ವಚೆಯು ಹಾಳಾಗದಂತೆ ಎಚ್ಚರವಹಿಸಿ; ಈ ಫೇಸ್​ಪ್ಯಾಕ್ ಟ್ರೈ ಮಾಡಿ ಫಲಿತಾಂಶ ನೀವೇ ನೋಡಿ..

ಚಳಿಗಾಲ ಆರಂಭವಾಯಿತು ಎಂದರೆ ಸಾಕು ತ್ವಚೆಯಲ್ಲಿ ಸಣ್ಣದಾಗಿ ಬಿರುಕು ಕಾಣಿಸಿಕೊಳ್ಳುವುದನ್ನು ನಾವು ನೊಡಬಹುದು. ಇನ್ನು ಮುಖದ…

ಈ ಆಹಾರ ಪದಾರ್ಥದಲ್ಲಿದೆ ಕ್ಯಾನ್ಸರ್ ವಿರುದ್ಧ ಹೋರಾಡುವ ಶಕ್ತಿ; Health Tips ನಿಮಗಾಗಿ

ಕ್ಯಾನ್ಸರ್​​ನಂತಹ ಗಂಭೀರ ಕಾಯಿಲೆಯನ್ನು ತಡೆಗಟ್ಟಲು ಆರೋಗ್ಯಕರ ಆಹಾರ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ಬಹಳ ಮುಖ್ಯ.…