ಸಮೀಕ್ಷೆಯಂತೆ ನಿರೀಕ್ಷೆಗೂ ಮೀರಿ ಫಲಿತಾಂಶ ಬಂದಿದೆ – ಶಾಸಕ ಪರಣ್ಣಮುನವಳ್ಳಿ ಹೇಳಿಕೆ

ಗಂಗಾವತಿ: ಪ್ರಧಾನಿ ಮೋದಿ ಭ್ರಷ್ಟಚಾರ ರಹಿತ ಆಡಳಿತ ನೋಡಿ ಮತದಾರರು ಬಿಜೆಪಿ ಬೆಂಬಲಿಸಿದ್ದು, ಕೇಂದ್ರದಿಂದ ಕ್ಷೇತ್ರದಲ್ಲಿ ಮತ್ತಷ್ಟು ಅಭಿವೃದ್ಧಿ ಕಾಮಗಾರಿ ನಿರ್ವಹಿಸಲಾಗುವುದು ಎಂದು ಶಾಸಕ ಪರಣ್ಣಮುನವಳ್ಳಿ ಹೇಳಿದರು.

ಸಮೀಕ್ಷೆಯಂತೆ ನಿರೀಕ್ಷೆಗೂ ಮೀರಿ ಲಿತಾಂಶ ಬಂದಿದ್ದು, ರಾಜ್ಯದಲ್ಲಿ ಮೈತ್ರಿ ಪಕ್ಷವನ್ನು ಹೀನಾಯು ಸೋಲಿಸಲಾಗಿದೆ. ಮೈತ್ರಿ ಸರ್ಕಾರದ ದುರಾಡಳಿತಕ್ಕೆ ಮತದಾರರು ತಕ್ಕ ಉತ್ತರ ನೀಡಿದ್ದಾರೆ. ಕ್ಷೇತ್ರದಲ್ಲಿ ಬಿಜೆಪಿ ಗೆಲುವಿನಿಂದ ಕಾರ್ಯಕರ್ತರಲ್ಲಿ ಹುಮ್ಮಸ್ಸು ಹೆಚ್ಚಾಗಿದ್ದು, ಕೇಂದ್ರದಿಂದ ಇನ್ನಷ್ಟು ಅ ಭಿವೃದ್ಧಿ ಬಯಸಿದ್ದಾರೆ. ಈಗಾಗಲೇ ಕೇಂದ್ರೀಯ ವಿದ್ಯಾಲಯ ಆರಂಭವಾಗಿದ್ದು, ಸ್ವಂತ ಕಟ್ಟಡದ ಕಾಮಗಾರಿ ಆರಂಭವಾಗಲಿದೆ. ಕೃಷಿ ಕಾಲೇಜು ಆರಂಭಕ್ಕಾಗಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಪ್ರಸಕ್ತ ಸಾಲಿನಿಂದಲೇ ಇಂಜಿನಿಯರಿಂಗ್ ಕಾಲೇಜು ಆರಂಭವಾಗಲಿದ್ದು, 300 ವಿದ್ಯಾರ್ಥಿಗಳಿಗೆ ಪ್ರವೇಶವಕಾಶ ದೊರೆಯಲಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಗಂಗಾವತಿ-ಬೆಂಗಳೂರು ರೈಲ್ವೆ ಸಂಚಾರಕ್ಕೆ ಪತ್ರ ಬರೆಯಲಾಗುತ್ತಿದ್ದು, ಗಿಣಿಗೇರಾ-ಗದ್ವಾಲ್ ರೈಲ್ವೆ ಯೋಜನೆ ಆಡಳಿತಾವಧಿಯಲ್ಲಿ ಪೂರ್ಣಗೊಳಿಸಲು ಯತ್ನಿಸಲಾಗವುದು. ಕ್ಷೇತ್ರದಲ್ಲಿ ಬಿಜೆಪಿ ಲೀಡ್ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಅತ್ಮವಾಲೋಕನ ಮಾಡಿ, ಕಾರ್ಯಕರ್ತರೊಂದಿಗೆ ಚರ್ಚಿಸಲಾಗುವುದು. ಮೈತ್ರಿ ಸರ್ಕಾರದ ಪತನದ ಕುರಿತಂತೆ ಪಕ್ಷದ ಹೈಕಮಾಂಡ್ ನೋಡಿಕೊಳ್ಳುತ್ತಿದ್ದು, ದೈವಿಚ್ಛೆಯಂತೆ ಸಚಿವನಾಗುವ ಅವಕಾಶ ಸಿಕ್ಕರೆ ಉತ್ತಮವಾಗಿ ನಿಭಾಯಿಸುತ್ತೇನೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಸಿಂಗನಾಳ ವಿರೂಪಾಕ್ಷಪ್ಪ ಮಾತನಾಡಿ, ಮೈತ್ರಿ ಸರ್ಕಾರದ ಆಡಳಿತಕ್ಕೆ ಬೇಸತ್ತ ಮತದಾರರು ಬಿಜೆಪಿ ಬೆಂಬಲಿಸಲಿದ್ದು, ಇನ್ನಷ್ಟು ಲೀಡ್ ಬರುವ ನಿರೀಕ್ಷೆಯಿತ್ತು. ಪ್ರಧಾನಿ ನರೇಂದ್ರ ಮೋದಿ ಪ್ರಭಾವದಿಂದ ರಾಜ್ಯದಲ್ಲಿ ಅತಿ ಹೆಚ್ಚು ಸ್ಥಾನ ಪಡೆಯಲು ಸಾಧ್ಯವಾಗಿದೆ. ಕೊಪ್ಪಳದಲ್ಲಿ ಎರಡನೇ ಬಾರಿ ಆಯ್ಕೆಯಾಗಲು ಕರಡಿ ಸಂಗಣ್ಣನವರ ಜನಪರ ಮತ್ತು ದೂರದೃಷ್ಟಿ ಅಡಳಿತ ಕಾರಣ ಎಂದರು.

ಎಪಿಎಂಸಿ ಮಾಜಿ ಅಧ್ಯಕ್ಷ ಎಚ್.ಎಂ.ತಿಪ್ಪೇರುದ್ರಸ್ವಾಮಿ, ನಗರಸಭೆ ಸದಸ್ಯರಾದ ಸಿಂಗನಾಳ ಉಮೇಶ, ನವೀನ್ ಮಾಲಿ ಪಾಟೀಲ್, ನವಲಿವಾಸು,ರಮೇಶ ಚೌಡ್ಕಿ, ವೆಂಕಟರಮಣ ಪರಶುರಾಂ ಮಡ್ಡೇರ್, ಮುಖಂಡರಾದ ಪಂಪಾಪತಿ ಸಾಹುಕಾರ ಸಿಂಗನಾಳ, ಕಾಮದೊಡ್ಡಿ ದೇವಪ್ಪ, ರಾಚಪ್ಪ ಸಿದ್ದಾಪುರ, ಕಾಶೀನಾಥ ಚಿತ್ರಗಾರ, ಎಸ್.ರಾಘವೇಂದ್ರ ಶ್ರೇಷ್ಠಿ, ವೀರೇಶ ಬಲ್ಕುಂದಿ, ಸೋಮನಾಥ, ಬಿಜೆಪಿ ಮಹಿಳಾ ಸದಸ್ಯರು ಹೊರತುಪಡಿಸಿ ಎಲ್ಲರೂ ಭಾಗವಹಿಸಿದ್ದು, ಮಹಿಳಾ ಸದಸ್ಯರ ಪರ ಕುಟುಂಬ ಸದಸ್ಯರಿದ್ದರು.

Leave a Reply

Your email address will not be published. Required fields are marked *