ಸಿನಿಮಾ

ಶ್ರೀ ವಾಸವಿ ಜಯಂತ್ಯುತ್ಸವ, ವಾದ್ಯಮೇಳದೊಂದಿಗೆ ಮೆರವಣಿಗೆ

ಗಂಗಾವತಿ: ತಾಲೂಕಿನ ಬಸಾಪಟ್ಟಣದ ವಾಸವಿ ಮಂಗಲ ಭವನದಲ್ಲಿ ಆರ್ಯವೈಶ್ಯ ಯುವಜನ ಸಂಘದಿಂದ ಶ್ರೀ ವಾಸವಿ ಜಯಂತ್ಯುತ್ಸವ ಶನಿವಾರ ಹಮ್ಮಿಕೊಳ್ಳಲಾಗಿತ್ತು.

ಸಮಾಜದಿಂದ ನಿರ್ಮಿಸಿರುವ ಮಂಗಲ ಭವನ ಉದ್ಘಾಟಿಸಿದ್ದು,ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬೆಳಗ್ಗೆ ಶ್ರೀ ಆಂಜನೇಯ ದೇವಾಲಯದಿಂದ ಭವನದವರಿಗೂ ಶ್ರೀ ವಾಸವಿ ಅಮ್ಮನವರ ಭಾವಚಿತ್ರವನ್ನು ಪೂರ್ಣಕುಂಭ ಮತ್ತು ವಾದ್ಯಮೇಳದೊಂದಿಗೆ ಮೆರವಣಿಗೆ ನೆರವೇರಿಸಲಾಯಿತು.

ಇದನ್ನೂ ಓದಿ: ವಾಸವಿ ದೇವಿ ಭಾವಚಿತ್ರ ಮೆರವಣಿಗೆ

ಮೂರ್ತಿಗೆ ವಿಶೇಷ ಅಲಂಕಾರ, ಕುಂಕುಮಾರ್ಚನೆ,ಮಹಾಮಂಗಳಾರತಿ ಮತ್ತು ಸಾಮೂಹಿಕ ಅನ್ನಸಂತರ್ಪಣೆ ಆಯೋಜಿಸಲಾಗಿತ್ತು. ಮಹಿಳಾ ಮಂಡಳಿಯಿಂದ ಕೋಲಾಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ಶ್ರೀವಾಸವಿ ಮಹಿಳಾ ಮಂಡಳಿ ಸಹಯೋಗದೊಂದಿಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಗೌರವಾಧ್ಯಕ್ಷ ಸತ್ಯನಾರಾಯಣಬಾಬು, ಅಧ್ಯಕ್ಷ ಜಿ.ಸಂತೋಷ ಶ್ರೇಷ್ಠಿ, ಪದಾಧಿಕಾರಿಗಳಾದ ಬಾಲಗುರು ಶ್ರೇಷ್ಠಿ, ಮಲ್ಲಯ್ಯ ಇಂದರಗಿ, ಯಲ್ಲಯ್ಯ ಶ್ರೇಷ್ಠಿ, ಶ್ರೀನಿವಾಸ ಇಂದರಗಿ, ರಾಘವೇಂದ್ರ ಇಂದರಗಿ, ಹನುಮೇಶ ವಡ್ಡರಹಟ್ಟಿ, ಮಂಜುನಾಥ ಇಂದರಗಿ, ಸಂತೋಷ ಇಂದರಗಿ ಸೇರಿ ಬಸಾಪಟ್ಟಣ, ದಾಸನಾಳ, ವಡ್ಡರಹಟ್ಟಿ, ಹಿರೇಬೆಣಕಲ್, ಚಿಕ್ಕಬೆಣಕಲ್, ಲಿಂಗದಹಳ್ಳಿ ವ್ಯಾಪ್ತಿಯ ಭಕ್ತರು ಭಾಗವಹಿಸಿದ್ದರು.

Latest Posts

ಲೈಫ್‌ಸ್ಟೈಲ್