ಗಂಗಾವತಿ: ವಿಜಯದಶಮಿ ಹಿನ್ನೆಲೆಯಲ್ಲಿ ನಗರದಲ್ಲಿ ಆರೆಸ್ಸೆಸ್ ಸ್ಥಳೀಯ ಘಟಕದಿಂದ ಪಥ ಸಂಚಲನ ಭಾನುವಾರ ಹಮ್ಮಿಕೊಳ್ಳಲಾಗಿತ್ತು.
ಎಪಿಎಂಸಿ ಪ್ರಾಂಗಣದಿಂದ ಶುರುವಾದ ಪಥಸಂಚಲ, ಮಹಾವೀರ ವೃತ್ತ, ಗಾಂಧಿ, ಗಣೇಶ, ಬಸವಣ್ಣ ಸರ್ಕಲ್ ಮೂಲ ಶ್ರೀ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಮೈದಾನದಲ್ಲಿ ಸಮಾರೋಪಗೊಂಡಿತು.
ಪಥಸಂಚಲನ ನಿಮಿತ್ತ ನಗರದ ಪ್ರಮುಖ ರಸ್ತೆಗಳನ್ನು ಚಿತ್ತಾರದ ರಂಗೋಲಿಗಳಿಂದ ಅಲಂಕರಿಸಿದ್ದು, ವೃತ್ತಗಳಲ್ಲಿ ವಿವಿಧ ಸಮಾಜದ ಮುಖಂಡರು ಪಥಸಂಚಲನದಲ್ಲಿ ಭಾಗವಹಿಸಿದ್ದವರ ಮೇಲೆ ಪುಷ್ಪಾರ್ಪಣೆ ಮೂಲಕ ಗೌರವ ಸಲ್ಲಿಸಿದರು. ಗಾಂಧಿ ವೃತ್ತದಲ್ಲಿ ಶಾಸಕ ಗಾಲಿ ಜನಾರ್ದನರೆಡ್ಡಿ ನೇತೃತ್ವದ ಬಿಜೆಪಿ ಮುಖಂಡರು ಭಾಗವಹಿಸಿ, ಗಣವೇಷಧಾರಿಗಳಿಗೆ ಪುಷ್ಪಾರ್ಪಣೆ ಸಲ್ಲಿಸಿದರು. ವಾದ್ಯೋಷ ಗಮನಸೆಳೆದಿದ್ದು, ಚಿಕ್ಕಮಕ್ಕಳು ಭಾಗವಹಿಸಿದ್ದು ವಿಶೇಷ. ನಗರಸಭೆ ಮಾಜಿ ಅಧ್ಯಕ್ಷ ಮೌಲಸಾಬ್ ದಾದೇಸಾಬ್, ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ ಚೌಡ್ಕಿ, ಸದಸ್ಯರಾದ ವಾಸುದೇವ ನವಲಿ, ಅಜಯ್‌ಬಿಚ್ಚಾಲಿ, ಬಿಜೆಪಿ ಜಿಲ್ಲಾಧ್ಯಕ್ಷ ಸಿಂಗನಾಳ ವಿರೂಪಾಕ್ಷಪ್ಪ, ಮುಖಂಡರಾದ ಕಾಶೀನಾಥ ಚಿತ್ರಗಾರ, ಪಂಪಾಪತಿ ಸಿಂಗನಾಳ್ ಇತರರಿದ್ದರು.
ದಿಕ್ಸೂಚಿ ಭಾಷಣ
ತರ ಶ್ರೀ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಮೈದಾನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕಲ್ಮಠದ ಡಾ.ಕೊಟ್ಟೂರು ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಆರೆಸ್ಸೆಸ್ ಬಳ್ಳಾರಿ ವಿಭಾಗದ ಪ್ರಚಾರಕ ಸೋಮಶೇಖರ್ ದಿಕ್ಸೂಚಿ ಭಾಷಣ ಮಾಡಿದರು. ವಾಸ್ತುತಜ್ಞ ಎಚ್.ಎನ್. ಶಾಸಿ, ನಗರ ಸಂಘಚಾಲಕ ದುರ್ಗಾದಾಸ್ ಭಂಡಾಕರ್ ಇತರರಿದ್ದರು.