ಗಂಗಾವತಿ: ಪಿಂಜಾರ/ನದಾಫ್ ಅಭಿವೃದ್ಧಿ ನಿಗಮಕ್ಕೆ ಅನುದಾನ ನೀಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ನದಾಫ್/ಪಿಂಜಾರ ಸಂಘದ ತಾಲೂಕು ಘಟಕದ ಪದಾಧಿಕಾರಿಗಳು ನಗರದ ತಾಲೂಕಾಡಳಿತ ಸೌಧದ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿ ಗ್ರೇಡ್ 2 ತಹಸೀಲ್ದಾರ್ ಮಹಾಂತಗೌಡ ಗೌಡರ್‌ಗೆ ಸಲ್ಲಿಸಿದರು.
ಇದನ್ನೂ ಓದಿ: ಪಿಂಜಾರ ನಿಗಮಕ್ಕೆ ಅನುದಾನ ನೀಡಿ
ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಬಾಬುಸಾಬ್ ಮಾತನಾಡಿ, ರಾಜ್ಯಾದ್ಯಂತ 22 ರಿಂದ 25 ಲಕ್ಷ ಜನಸಂಖ್ಯೆ ಹೊಂದಿರುವ ನದಾಫ್ / ಪಿಂಜಾರ ಸಮುದಾಯ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ, ಔದ್ಯೋಗಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಅತ್ಯಂತ ಹಿಂದುಳಿದೆ. ಹಿಂದುಳಿದ ವರ್ಗಗಳ ಇಲಾಖೆಯಡಿ ಪ್ರವರ್ಗ -1ರ ಮೀಸಲಾತಿ ಪಡೆದಿದೆ.
ಅಲ್ಪಸಂಖ್ಯಾತರ ಅಭಿವದ್ಧಿ ನಿಗಮದಿಂದ ಮತ್ತು ಇತರ ಯೋಜನೆಗಳಿಂದ ಸೌಲಭ್ಯ ಪಡೆದುಕೊಳ್ಳಲು ಸರ್ಕಾರದ ನಿರ್ದೇಶನ ಇದ್ದರೂ, ಸತತವಾಗಿ ತಾಂತ್ರಿಕ ದೋಷ ಹಾಗೂ ಅಧಿಕಾರಿಗಳ ನಿರ್ಲಕ್ಷೃದಿಂದ ಯೋಜನೆಗಳು ಸಿಕ್ಕಿಲ್ಲ.
ಹೋರಾಟದ ಲದಿಂದ ಹಿಂದಿನ ಸರ್ಕಾರ ಅಭಿವದ್ಧಿ ನಿಗಮ ೋಷಿಸಿದರೂ ಅನುಮಾನ ನೀಡಿಲ್ಲ. ಸಮಾಜದ ಅಭಿವೃದ್ಧಿ ಹಿತದೃಷ್ಟಿಯಿಂದ ಅನುದಾನ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಸ್ಪಂದಿಸಿಲ್ಲ. ಸರ್ಕಾರ ತಾರತಮ್ಯ ನೀತಿ ಕೈಬಿಟ್ಟು, ಕೂಡಲೇ ಅನುದಾನ ನೀಡಬೇಕೆಂದು ಒತ್ತಾಯಿಸಿದರು.
ಪದಾಧಿಕಾರಿಗಳಾದ ಕೀರ ಸಾಬ್ ದಾಸನಾಳ, ರಾಜಸಾಬ್, ಹುಸೇನ್ ಪೀರಾ ಜವಳಗೆರೆ, ಹುಸೇನಸಾಬ್ ಮರಳಿ, ಮಹಮ್ಮದ್‌ಸಾಬ್, ಅನ್ವರ್ ಪಾಷಾ, ಜಿಲಾನ್‌ಸಾಬ್ ಇತರರಿದ್ದರು.