ಗಂಗಾವತಿ: ಕನ್ನಡ ಪರ ಚಟುವಟಿಕೆಗಳನ್ನು ನಿರಂತರ ಬೆಂಬಲಿಸಲಾಗುತ್ತಿದೆ. ಸಾಹಿತ್ಯದ ಅರ್ಥಪೂರ್ಣ ಕಾರ್ಯಕ್ರಮಗಳಿಗೆ ನಗರಸಭೆಯಿಂದ ನೆರವು ನೀಡಲಾಗುವುದು ಎಂದು ನಗರಸಭೆ ಅಧ್ಯಕ್ಷ ಮೌಲಸಾಬ್ ದಾದೇಸಾಬ್ ಹೇಳಿದರು.
ನಗರದ ಕಸಾಪ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ ಭಾನುವಾರ ಹಮ್ಮಿಕೊಂಡಿದ್ದ ತಾಲೂಕು ಘಟಕದ ಪದಾಧಿಕಾರಿಗಳ ಪದಗ್ರಹಣ ಮತ್ತು ಕೃತಿ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ. ಕನ್ನಡದ ಬೆಳವಣಿಗೆಗೆ ಪ್ರತಿಯೊಬ್ಬರ ಸಹಕಾರ ಮುಖ್ಯವಾಗಿದೆ. ಕನ್ನಡ ಕಾರ್ಯಕ್ರಮಗಳನ್ನು ಶಾಸಕ ಗಾಲಿ ಜನಾರ್ದನರೆಡ್ಡಿ ಪ್ರೋತ್ಸಾಹಿಸುತ್ತಿದ್ದು, ಅವರ ಮಾರ್ಗದರ್ಶನದಲ್ಲಿ ವಿಭಿನ್ನ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಾಹಿತಿ ಲಿಂಗಾರೆಡ್ಡಿ ವೀ.ಆಲೂರು ಮಾತನಾಡಿ, ಕಥಾ ಕಮ್ಮಟ ಆಯೋಜಿಸುವ ಬಗ್ಗೆ ಹೊಸ ಪದಾಧಿಕಾರಿಗಳು ಆಸಕ್ತಿವಹಿಸಬೇಕಿದ್ದು, ಸ್ಥಳೀಯ ಲೇಖಕರ ಕೃತಿ ಪ್ರಕಟಣೆಗೆ ನೆರವಾಗಬೇಕಿದೆ ಎಂದರು.
ಸಾಹಿತಿ ಯಲ್ಲಪ್ಪ ಮಲ್ಲಪ್ಪ ಹರ್ನಾಳಗಿ ರಚಿಸಿದ ಮಕ್ಕಳಿಗಾಗಿ ಮಹಾಭಾರತ ಕೃತಿ ಬಿಡುಗಡೆಗೊಳಿಸಲಾಯಿತು. ಪುಸ್ತಕ ಕುರಿತು ಸಾಹಿತಿ ರಾಘವೇಂದ್ರ ದಂಡಿನ್ ಮಾತನಾಡಿದರು. ಕಸಾಪ ತಾಲೂಕು ಅಧ್ಯಕ್ಷರಾಗಿ ರುದ್ರೇಶ ಎಂ.ಆರಾಳ್ ಅಧಿಕಾರ ಸ್ವೀಕರಿಸಿದರು.
ನಗರಸಭೆ ಉಪಾಧ್ಯಕ್ಷೆ ಪಾರ್ವತೆಮ್ಮ ದುರುಗೇಶ ದೊಡ್ಮನಿ, ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಪೊ.ಪಾಟೀಲ್, ಕೇಂದ್ರ ಸಮಿತಿ ಸದಸ್ಯ ನಬೀಸಾಬ್ ಕುಷ್ಟಗಿ, ನಿಕಟಪೂರ್ವ ಕಸಾಪ ತಾಲೂಕು ಅಧ್ಯಕ್ಷ ಶ್ರೀನಿವಾಸ ಅಂಗಡಿ, ಮುಖಂಡರಾದ ಸಾಗರ ಮುನವಳ್ಳಿ, ಮನೋಹರಗೌಡ ಹೇರೂರು, ಯಮನಪ್ಪ ವಿಠಲಾಪುರ, ಸಣ್ಣಕ್ಕಿ ನೀಲಪ್ಪ, ಸೋಮಶೇಖಗೌಡ, ಮಹೆಬೂಬ್‌ಅಲಿ, ಟಿ.ಆಂಜನೇಯ, ಶಿವಕಾಂತ,ಶಿವಶಂಕರ ಕಲ್ಮಠ, ರಮೇಶ ಗಬ್ಬೂರ್, ಡಾ.ಮಲ್ಲಪ್ಪ ಟಿ.ಹೊಸೂರು,ಡಾ.ಶರಣಬಸಪ್ಪ ಕೋಲ್ಕಾರ್, ಜೆ.ನಾಗರಾಜ್, ವೀರಮಹೇಶ್ವರಿ ಇತರರಿದ್ದರು. ಪದಾಧಿಕಾರಿಗಳಾದ ಶಿವಾನಂದ ತಿಮ್ಮಾಪುರ ಮತ್ತು ಮೈಲಾರಪ್ಪ ಬೂದಿಹಾಳ್ ನಿರ್ವಹಿಸಿದರು.