ಗಂಗಾವತಿ: ಕನಕದಾಸರ ಸಂದೇಶಗಳನ್ನು ಜನರಿಗೆ ತಿಳಿಸುವ ಉದ್ದೇಶದಿಂದ ಕನಕದಾಸ ಜಯಂತಿ ಅದ್ದೂರಿ ಮತ್ತು ಅರ್ಥಪೂರ್ಣವಾಗಿ ಆಚರಿಸಲು ಸಿದ್ಧತೆ ಕೈಗೊಳ್ಳಿ ಎಂದು ತಹಸೀಲ್ದಾರ್ ಯು.ನಾಗರಾಜ್ ಹೇಳಿದರು.
ನಗರದ ತಾಲೂಕಾಡಳಿತ ಕಚೇರಿಯಲ್ಲಿ ಕನಕದಾಸ ಜಯಂತ್ಯುತ್ಸವ ನಿಮಿತ್ತ ಬುಧವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ನ.18ರಂದು ತಾಲೂಕಾಡಳಿತ ಮತ್ತು ಹಾಲು ಮತ ಸಮಾಜದ ಸಹಯೋಗದೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕನಕದಾಸ ವೃತ್ತದಲ್ಲಿನ ಮೂರ್ತಿಗೆ ವಿಶೇಷ ಅಲಂಕಾರ ಮತ್ತು ವೇದಿಕೆ ಹಾಕಲಾಗುತ್ತಿದ್ದು, ಜಯಂತ್ಯುತ್ಸವ ಜವಾಬ್ದಾರಿಯನ್ನು ಆಯಾ ಇಲಾಖೆ ಅಧಿಕಾರಿಗಳಿಗೆ ವಹಿಸಲಾಗಿದೆ. ಎಲ್ಲ ವೃತ್ತಗಳಿಗೆ ವಿದ್ಯುತ್ ದೀಪದ ಅಲಂಕಾರ, ತಳೀರು ತೋರಣ ಕಟ್ಟುವುದು ಸೇರಿ ಅದ್ದೂರಿ ಆಚರಣೆಗೆ ವ್ಯವಸ್ಥೆ ಮಾಡಲಾಗುವುದು ಎಂದರು.
ತಾಲೂಕು ಕುರುಬರ ಸಂಘದ ಅಧ್ಯಕ್ಷ ವಿಠಲಾಪೂರ ಯಮನಪ್ಪ, ವಿವಿಧ ಇಲಾಖೆ ಅಧಿಕಾರಿಗಳಾದ ಷಣ್ಮುಖಪ್ಪ, ಸಂತೋಷ ಪಟ್ಟದಕಲ್, ಜೆ.ಸಂಗಪ್ಪ, ಪ್ರಮುಖರಾದ ಕೆ.ನಾಗೇಶಪ್ಪ, ಹನುಮೇಶ ಡ್ಯಾಗಿ, ತಿರುಕಪ್ಪ, ರುದ್ರೇಶ ಡ್ಯಾಗಿ, ಅಶೋಕಗೌಡ, ಗೀತಾವಿಕ್ರಂ, ಶಾಮಣ್ಣ ಅಡ್ಡೇದಾರ್, ಬೆಟ್ಟಪ್ಪ ಬೆಣಕಲ್, ಸಿದ್ದಲಿಂಗನಗೌಡ, ಶರಣಪ್ಪ ಇತರರಿದ್ದರು.