More

    ಭಗವಂತನ ಸ್ಮರಣೆಯೊಂದಿಗೆ ದೈನಂದಿನ ಜೀವನ ಸಾಗಲಿ

    ಗಂಗಾವತಿ: ಭಗವಂತನ ನಾಮಸ್ಮರಣೆಯೊಂದಿಗೆ ದೈನಂದಿನ ಜೀವನ ಕಳೆಯಬೇಕಿದ್ದು, ಧಾರ್ಮಿಕ ಕಾರ್ಯಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಹುಣಸಿಹೊಳೆ ವೀರಘಟ್ಟ ಕಣ್ವಮಠದ ಶ್ರೀ ವಿದ್ಯಾಕಣ್ವ ವಿರಾಜತೀರ್ಥರು ಹೇಳಿದರು.

    ನಗರದ ಜವಾಹರ ನಗರದ ಶ್ರೀ ಹನುಮಂತ ದೇವರ ದೇವಸ್ಥಾನದಲ್ಲಿ ಹಮ್ಮಿಕೊಂಡ ಶ್ರೀಮದ್ ಯೋಗೀಶ್ವರ ಯಾಜ್ಞವಲ್ಕೃರ ಜಯಂತ್ಯುತ್ಸವದ ಧರ್ಮ ಪ್ರವಚನ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು.

    ಧಾರ್ಮಿಕ ಕಾರ್ಯಕ್ರಮ ಹೆಚ್ಚಾದಂತೆಲ್ಲ ಸಂಸ್ಕಾರ ಹೆಚ್ಚುತ್ತಿದ್ದು, ಉತ್ತಮ ಭವಿಷ್ಯತ್ವಕ್ಕೆ ನಾಂದಿಯಾಗಲಿದೆ. ವಿದ್ವತ್ ಸಭೆಗಳ ಮೂಲಕ ಯತಿ ಪರಂಪರೆಯನ್ನು ಜಗತ್ತಿಗೆ ಸಾರಬೇಕಿದೆ ಎಂದರು.

    ಇದನ್ನೂ ಓದಿ: ಮದುವೆ ಮನೆಯಿಂದ ಓಡಿಹೋದ ವಧು: ಆಕೆಗಾಗಿ 13 ದಿನ ಕಾದು ಕುಳಿತ ವರ

    ಇದಕ್ಕೂ ಮುನ್ನ ಸುದರ್ಶನ ಹೋಮ, ಪೂರ್ಣಾಹುತಿ, ಬೃಹದಾರಣ್ಯಕ ಪಾರಾಯಣ, ಶ್ರೀಗಳಿಂದ ಮುದ್ರಾಧಾರಣೆ, ಸಾಮೂಹಿಕ ಪಾದಪೂಜೆ, ಶ್ರೀ ವಿಠ್ಠಲ ಕೃಷ್ಣ ಸಂಸ್ಥಾನ ಪೂಜೆ, ತೀರ್ಥ ಪ್ರಸಾದ, ಭಜನೆ ಪಲ್ಲಕ್ಕಿ ಸೇವೆ, ಅಷ್ಟಾವಧಾನ, ತೊಟ್ಟಿಲು ಸೇವೆ ಜರುಗಿದವು.

    ಸಾಮೂಹಿಕ ಅಷ್ಟೋತ್ತರ ಪಾರಾಯಣ, ವಿವಿಧೆಡೆಯಿಂದ ಬಂದಿದ್ದ ಭಜನಾ ಮಂಡಳಿಗಳಿಂದ ನಿರಂತರ ಭಜನೆ, ದಾಸವಾಣಿ ಹಮ್ಮಿಕೊಳ್ಳಲಾಗಿತ್ತು.

    ಮಠದ ಪ್ರತಿನಿಧಿಗಳಾದ ಮನೋಹರ ಮಾಡಿಗೇರಿ, ಕೃಷ್ಣದೇಸಾಯಿ, ಗುರುರಾಜ್ ಕುಲ್ಕರ್ಣಿ, ಶ್ರೀಮದ್ ಯೋಗೀಶ್ವರ ಯಾಜ್ಞವಲ್ಕ್ಯ ಸೇವಾ ವಿಶ್ವಸ್ಥ ಟ್ರಸ್ಟ್ ಸಮಿತಿ ಅಧ್ಯಕ್ಷ ಮುರಳೀಧರ ಕುಲ್ಕರ್ಣಿ, ಪದಾಧಿಕಾರಿಗಳಾದ ರಾಘವೇಂದ್ರ ಮೇಗೂರು, ಪ್ರಸನ್ನ ರಾಂಭಟ್ ಜೋಶಿ, ರಂಗನಾಥ ವಟಗಲ್, ಶೇಷಗಿರಿ ಕುಲ್ಕರ್ಣಿ, ಮನೋಹರ ನಂದವಾಡಗಿ, ಪವನಕುಮಾರ ಜೋಶಿ, ರವಿ ವೀರಾಪುರ, ಲೆಕ್ಕಿಹಾಳ್ ರಾಘವೇಂದ್ರರಾವ್, ನರಸಿಂಹಮೂರ್ತಿ ಆಲ್ಲಂಪಲ್ಲಿ, ಗೋಪಿನಾಥ ದಿನ್ನಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts