ಗಂಗಾವತಿ: ನಗರದ 27ನೇ ವಾರ್ಡ್‌ನ ಹಿರೇಜಂತಕಲ್‌ನಲ್ಲಿ ಛಲವಾದಿ ಸಮಾಜದಿಂದ ಶ್ರಾವಣ ಮಾಸದ ನಿಮಿತ್ತ ಶ್ರೀ ಜಗಜ್ಯೋತಿ ಬಸವೇಶ್ವರ ಮೂರ್ತಿ ಮೆರವಣಿಗೆ ಸೋಮವಾರ ಹಮ್ಮಿಕೊಳ್ಳಲಾಗಿತ್ತು.
ಬೆಳ್ಳಿ ಬಸವಣ್ಣ ಮೂರ್ತಿ ಮೆರವಣಿಗೆಯನ್ನು ಬಸವೇಶ್ವರ ದೇವಾಲಯದಿಂದ ಆರಂಭಿಸಿ ದೇವಘಾಟ ತುಂಗಭದ್ರಾ ನದಿವರೆಗೆ ಕುಂಭ, ಕಲಶದೊಂದಿಗೆ ಅದ್ದೂರಿಯಾಗಿ ನೆರವೇರಿಸಲಾಯಿತು. ನಂತರ ವಿಶೇಷ ಪೂಜೆ ಮತ್ತು ಭಜನೆ ಹಮ್ಮಿಕೊಳ್ಳಲಾಗಿತ್ತು.
ಶ್ರಾವಣ ಮಾಸದಲ್ಲಿ ಕೈಗೊಂಡ ಧಾರ್ಮಿಕ ಕಾರ್ಯಕ್ರಮ ಕುರಿತು ಛಲವಾದಿ ಸಮಾಜದ ಮುಖಂಡ ಹುಲುಗಪ್ಪ ಮಾಗಿ ಮಾತನಾಡಿದರು. ವಕೀಲ ತಿಮ್ಮಣ್ಣ ಮುಂಡಾಸ್, ಛಲವಾದಿ ಸಮಾಜದ ಅಧ್ಯಕ್ಷ ಹರ್ಷಪ್ಪ, ಮುಖಂಡರಾದ ಹುಲುಗಪ್ಪ ಮಾಸ್ತರ್, ಪರಶುರಾಮ್ ಕಿರಿಕಿರಿ, ವೀರೇಶ ಆರ್ತಿ, ಭೀಮಣ್ಣ ಕರಿಮೂತಿ, ರವಿಕುಮಾರ ಸೋಮನಾಳ, ಆಂಜನೇಯ ಸೋಮನಾಳ ಇತರರಿದ್ದರು.