More

  ಯುವಕರಲ್ಲಿ ಧಾರ್ಮಿಕ ಮನೋಭಾವನೆ ಹೆಚ್ಚಲಿ

  ಗಂಗಾವತಿ: ಉತ್ತಮ ಮಳೆ, ಬೆಳೆ ಭಗವಂತ ದಯಪಾಲಿಸಲಿ ಎಂದು ಪಾದಯಾತ್ರೆ ಕೈಗೊಳ್ಳಲಾಗಿದೆ ಎಂದು ಆರ್ಯ ವೈಶ್ಯ ಸಮಾಜದ ವಿರುಪಾಪುರ ಘಟಕದ ಅಧ್ಯಕ್ಷ ದರೋಜಿ ನಾಗರಾಜ ಶ್ರೇಷ್ಠಿ ಹೇಳಿದರು.

  ಲೋಕಕಲ್ಯಾಣಕ್ಕಾಗಿ ನಗರದ ಹಿರೇಜಂತಕಲ್ ವಿರುಪಾಪುರ ಆರ್ಯ ವೈಶ್ಯ ಸಮಾಜದಿಂದ ಹಮ್ಮಿಕೊಂಡಿದ್ದ ತಾಲೂಕಿನ ವೆಂಕಟಗಿರಿಯ ಶ್ರೀಲಕ್ಷ್ಮೀ ವೆಂಕಟೇಶ್ವರ ದೇವಾಲಯಕ್ಕೆ ಪಾದಯಾತ್ರೆಯ ಸಮಾರೋಪದಲ್ಲಿ ಭಾನುವಾರ ಮಾತನಾಡಿದರು.

  ಯುವ ಸಮುದಾಯದಲ್ಲಿ ಧಾರ್ಮಿಕ ಮನೋಭಾವನೆ ಹೆಚ್ಚಿಸುವ ಉದ್ದೇಶವಿದ್ದು ದೇವರಿಗೆ ವಿವಿಧ ಸೇವೆ ಮಾಡಲಾಗುತ್ತಿದೆ ಎಂದರು. ನಗರದ ಹಿರೇಜಂತಕಲ್ ಶ್ರೀ ಕನ್ಯಕಾಪರಮೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆಯೊಂದಿಗೆ ಆರಂಭವಾದ ಪಾದಯಾತ್ರೆ, ಶ್ರೀ ವೆಂಕಟಗಿರಿಯ ಶ್ರೀಲಕ್ಷ್ಮೀ ವೆಂಕಟೇಶ್ವರ ದೇವಾಲಯದವರಿಗೂ ಭಜನೆ ಮತ್ತು ಹರಿನಾಮ ಕೀರ್ತನೆಯೊಂದಿಗೆ ಜರುಗಿತು. 250ಕ್ಕೂ ಹೆಚ್ಚು ಪಾದಯಾತ್ರೆಗಳು ಭಾಗವಹಿಸಿದ್ದು, ದೇವಾಲಯದಲ್ಲಿ ಪಂಚಾಮೃತಾಭಿಷೇಕ, ಅಷ್ಟೋತ್ತರ ಪಾರಾಯಣ, ವಿಶೇಷ ಪೂಜೆ, ನಿರಂತರ ಭಜನೆ ಮತ್ತು ನರ್ತನ ಸೇವೆ ಸಲ್ಲಿಸಲಾಯಿತು.

  ಆರ್ಯವೈಶ್ಯ ಸಮಾಜದ ಹಿರೇಜಂತಕಲ್, ಅರ್ಚಕ ಗುರುಭೀಮಭಟ್ ಜೋಶಿ, ಪದಾಧಿಕಾರಿಗಳಾದ ಆನೆಗೊಂದಿ ಗೋಪಾಲ ಶ್ರೇಷ್ಠಿ. ದಮ್ಮೂರು ಸುರೇಶ, ದಮ್ಮೂರ ರಾಜಕುಮಾರ, ಯಲ್ಲಯ್ಯ, ದರೋಜಿ ವೆಂಕಟೇಶ, ಸಂತೋಷ ಹೇಮಗುಡ, ಸುಧಾಕರ ಇಂದಿರಗಿ, ಅಶೋಕ ಗುಡಕೋಟೆ, ದರೋಜಿ ನರಸಿಂಹ ಶ್ರೇಷ್ಠಿ ಇತರರಿದ್ದರು.

  See also  G Parameshwar On Mahagathbandhan | ಬಿಜೆಪಿ ಅಧಿಕಾರಕ್ಕೆ ಬರದಿರಲು ಮಹಾಘಟಬಂಧನ್ ಸಭೆ ನಡೆಸಿದ ಕಾಂಗ್ರೆಸ್​

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts