ಸೃಷ್ಟಿ ಸೊಬಗು ವೀಕ್ಷಣೆಗೆ ಕಣ್ಣುಗಳು ಮುಖ್ಯ

ಗಂಗಾವತಿ: ಸೃಷ್ಟಿ ಸೊಬಗು ವೀಕ್ಷಣೆಗೆ ಕಣ್ಣುಗಳು ಮುಖ್ಯವಾಗಿದ್ದು, ದೃಷ್ಟಿ ವಂಚಿತರಿಗೆ ನೋಡುವ ಭಾಗ್ಯ ನೀಡುವ ಕಾಯಕ ಶ್ರೇಷ್ಠ ಎಂದು ವಿಜಯಪುರದ ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಹೇಳಿದರು.

ನಗರದ ಐಎಂಎ ಹಾಲ್‌ನಲ್ಲಿ ಲಯನ್ಸ್ ಕ್ಲಬ್‌ನ ಸುವರ್ಣ ಮಹೋತ್ಸವ ಪ್ರಯುಕ್ತ ಭಾರತೀಯ ವೈದ್ಯಕೀಯ ಸಂಘ, ಜೆಎಸ್‌ಡಬ್ಲೂೃ, ಜಿಲ್ಲಾ ಅಂಧತ್ವ ನಿಯಂತ್ರಣ ಸಂಘ ಮತ್ತು ಬೆಂಗಳೂರಿನ ಶ್ರೀ ಸ್ವಾಮಿ ವಿವೇಕಾನಂದ ಸೇವಾಶ್ರಮ ಕಣ್ಣಿನ ಆಸ್ಪತ್ರೆ ಸಹಯೋಗದೊಂದಿಗೆ ಗುರುವಾರ ಹಮ್ಮಿಕೊಂಡಿದ್ದ ನೇತ್ರ ಶಸ ಚಿಕಿತ್ಸೆ ಉಚಿತ ಶಿಬಿರ ಉದ್ಘಾಟಿಸಿ ಮಾತನಾಡಿದರು. ದೇವರು ಮತ್ತು ದೃಷ್ಟಿ ನೀಡುವ ವೈದ್ಯರಿಗೆ ಋಣಿಯಾಗಿರಬೇಕಿದ್ದು, ದೃಷ್ಟಿ ಹೀನತೆ ನಿವಾರಣೆಗಾಗಿ ವೈದ್ಯರು ಹಮ್ಮಿಕೊಂಡ ಶಿಬಿರ ಪ್ರಶಂಸನೀಯ. ಕಣ್ಣಿದ್ದರೆ ಮಾತ್ರ ಎಲ್ಲವನ್ನೂ ಪಡೆಯಲು ಸಾಧ್ಯವಿದ್ದು, ಅಂತಃಚಕ್ಷುವಿನ ಮೂಲಕ ಧನ್ಯತಾಭಾವ ಪ್ರದರ್ಶಿಸಬೇಕಿದೆ. ಶಿಬಿರದ ಸದ್ಬಳಕೆಗೆ ಸಾರ್ವಜನಿಕರ ಸಹಕಾರ ಮುಖ್ಯವಾಗಿದ್ದು, ವೈದ್ಯರ ಸೇವೆಯನ್ನು ಸ್ಮರಿಸಬೇಕಿದೆ ಎಂದರು.

ವೈದ್ಯ ಡಾ.ಶಿವಕುಮಾರ ಮಾಲಿ ಪಾಟೀಲ್ ಮಾತನಾಡಿ, ಲಯನ್ಸ್ ಕ್ಲಬ್‌ನಿಂದ ಹಲವು ಸಮಾಜಸೇವಾ ಚಟುವಟಿಕೆ ಹಮ್ಮಿಕೊಂಡಿದ್ದು, ಸುವರ್ಣ ಮಹೋತ್ಸವ ನಿಮಿತ್ತ ವೈವಿಧ್ಯಮಯ ಕಾರ್ಯಕ್ರಮಗಳು ಜರುಗಲಿವೆ ಎಂದರು.

ಶಿಬಿರದಲ್ಲಿ 500ಕ್ಕೂ ಹೆಚ್ಚು ಲಾನುಭವಿಗಳು ಭಾಗವಹಿಸಿದ್ದು, ರಕ್ತದೊತ್ತಡ ಮತ್ತು ಮಧುಮೇಹ ತಪಾಸಣೆ ಉಚಿತ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಮಾಜಿ ಸಂಸದ ಎಸ್.ಶಿವರಾಮನಗೌಡ, ಜಿಂದಾಲ್ ಪ್ರಬಂಧಕ ದೇವರಾಜ್, ಉಪವಿಭಾಗ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಈಶ್ವರ ಸವಡಿ, ಲಯನ್ಸ್ ಕ್ಲಬ್ ಅಧ್ಯಕ್ಷ ಡಾ.ಅನಂತರಾಜ ಗೋಗಿ, ಕಾರ್ಯದರ್ಶಿ ಡಿ.ಎಂ.ಅಭಿಷೇಕ, ಯೋಜನಾಧಿಕಾರಿ ಡಾ. ಜಂಬುನಾಥಗೌಡ, ಐಎಂಎ ಅಧ್ಯಕ್ಷ ಡಾ.ಶ್ರೀನಿವಾಸರೆಡ್ಡಿ, ವೈದ್ಯರಾದ ಡಾ.ಯು.ಮಾಧವ ಶೆಟ್ಟಿ, ಡಾ.ಬಸವರಾಜ ಸಿಂಗನಾಳ್, ಡಾ.ಅರ್ಜುನ ಹೊಸಳ್ಳಿ ಇತರರಿದ್ದರು. ನಿವೃತ್ತ ಪ್ರಾಚಾರ್ಯ ಪ್ರೊ.ಎ್.ಎಚ್.ಚಿತ್ರಗಾರ ನಿರ್ವಹಿಸಿದರು.