More

    ನಾಯಕತ್ವ ಕಳೆದುಕೊಂಡ ಕಾಂಗ್ರೆಸ್‌ನಲ್ಲಿ ಪ್ರಚಾರಕರ ಕೊರತೆ

    ಗಂಗಾವತಿ: ಕ್ಷೇತ್ರದಲ್ಲಿ ಅಕ್ಷರ ಪ್ರಮಾಣಕ್ಕೆ ಹೆಚ್ಚಿನ ಮಹತ್ವ ನೀಡಿರುವ ರಾಜ್ಯ ಸರ್ಕಾರ ಹೆಚ್ಚುವರಿ ಪಿಯು ಮತ್ತು ಉನ್ನತ ಶಿಕ್ಷಣದ ಕೇಂದ್ರಗಳನ್ನು ಆರಂಭಿಸಿದೆ ಎಂದು ಬಿಜೆಪಿ ಅಭ್ಯರ್ಥಿ ಪರಣ್ಣ ಮುನವಳ್ಳಿ ಹೇಳಿದರು.

    ನಗರದ ಬಿಜೆಪಿ ಕಚೇರಿಯಲ್ಲಿ ಪಕ್ಷದ ವಿವಿಧ ಮೋರ್ಚಾದಿಂದ ಬುಧವಾರ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಸರ್ಕಾರಿ ಕೃಷಿ, ಇಂಜಿನಿಯರಿಂಗ್ ಕಾಲೇಜು ಆರಂಭಿಸಿತ್ತಲ್ಲದೇ, ಹೋಬಳಿ ವ್ಯಾಪ್ತಿಯಲ್ಲಿ ಪಿಯು ಕಾಲೇಜುಗಳನ್ನು ತೆರೆಯಲಾಗಿದೆ.

    ರಸ್ತೆ ಅಭಿವೃದ್ಧಿಗೆ ಪ್ರಾಮುಖ್ಯತೆ ನೀಡಲಾಗಿದ್ದು, ನಗರಗಳಲ್ಲಿ ಸಿಸಿ ರಸ್ತೆ ಮತ್ತು ಗ್ರಾಮೀಣ ಭಾಗದಲ್ಲಿ ಬಿಟಿ ರಸ್ತೆಗಳನ್ನು ನಿರ್ಮಿಸಲಾಗಿದೆ. ಜೆಜೆಎಂ ಯೋಜನೆಯಡಿ ಮನೆಮನೆಗೂ ಗಂಗೆ ಹರಿಸಲಾಗುತ್ತಿದೆ. ನಗರೋತ್ಥಾನ 4ನೇ ಹಂತದಲ್ಲಿ 40 ಕೋಟಿ ರೂ. ಮಂಜೂರಾಗಿದ್ದು, ವಿಪಕ್ಷಗಳ ಕುತಂತ್ರದಿಂದ ಗೊಂದಲ ಕೋರ್ಟ್‌ನಲ್ಲಿದೆ ಎಂದರು.

    ಬಿಜೆಪಿಯಲ್ಲಿ ನಾಯಕರ ಸಂಖ್ಯೆ ಹೆಚ್ಚಿದ್ದು, ಪ್ರತಿ ಕ್ಷೇತ್ರಗಳ ಬಗ್ಗೆ ಗಮನಹರಿಸುತ್ತಿದ್ದಾರೆ. ನಾಯಕತ್ವ ಕಳೆದುಕೊಂಡ ಕಾಂಗ್ರೆಸ್‌ನಲ್ಲಿ ಪ್ರಚಾರಕರಿಲ್ಲದಂತಾಗಿದ್ದು, ಕಾಂಗ್ರೆಸ್ ವರ್ತನೆಗೆ ಜನ ಬೇಸತ್ತಿದ್ದಾರೆ. ಜನರಲ್ಲಿ ಮತ ಕೇಳಲು ಯಾವುದೇ ವಿಷಯವಿಲ್ಲದಿದ್ದರಿಂದ ಸುಳ್ಳು ಭರವಸೆಗಳನ್ನು ಮತ್ತು ಬಿಜೆಪಿ ಮೇಲೆ ಅನಗತ್ಯ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ದೂರಿದರು.

    ಇದನ್ನೂ ಓದಿ: ನಟ ಸುದೀಪ್​ ಕಾಂಗ್ರೆಸ್ ಪರ ಕೂಡ ಕೆಲ ಕ್ಷೇತ್ರಗಳಲ್ಲಿ ಪ್ರಚಾರ ಮಾಡ್ತಾರೆ: ಡಿ.ಕೆ. ಶಿವಕುಮಾರ್​ ಹೇಳಿಕೆ

    ಕಾಡಾ ಮಾಜಿ ಅಧ್ಯಕ್ಷ ಬಿ.ಎಚ್.ಎಂ.ತಿಪ್ಪೇರುದ್ರಸ್ವಾಮಿ ಮಾತನಾಡಿ, ಸಮುದಾಯದ ನಡುವಿನ ವೈಮನಸ್ಸಿನಿಂದ ದೂರವಾಗಿದ್ದೇ ಹೊರತು, ಬಿಜೆಪಿ ಬಗ್ಗೆ ಯಾವುದೇ ದೂರುಗಳಿಲ್ಲ.

    ಗೊಂದಲಗಳನ್ನು ರಂಭಾಪುರಿ ಶ್ರೀಗಳು ಬಗೆಹರಿಸಿದ್ದು, ಬಿಜೆಪಿ ಅಭ್ಯರ್ಥಿ ಪರಣ್ಣ ಮುನವಳ್ಳಿ ಪರ ಪ್ರಚಾರ ಕೈಗೊಳ್ಳಲಾಗುತ್ತಿದ್ದು, ಗೆಲುವಿಗೆ ಶ್ರಮಿಸಲಾಗುವುದು. ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದರು.

    ಕ್ಷೇತ್ರದ ಉಸ್ತುವಾರಿ ಪ್ರಭು ಕಪಗಲ್ ಮಾತನಾಡಿ, ಹಿಂದುತ್ವ ಮತ್ತು ಧಾರ್ಮಿಕ ವಿಚಾರದಲ್ಲಿ ಬಿಜೆಪಿ ಬದ್ಧವಾಗಿದ್ದು, ಮಠ ಮಾನ್ಯಗಳು ಪಕ್ಷದ ಸಿದ್ಧಾಂತವನ್ನು ಒಪ್ಪಿಕೊಂಡಿವೆ. ಶಿಸ್ತು ಮತ್ತು ಬದ್ಧತೆಯಿಂದಾಗಿ ಬೇರೆ ಪಕ್ಷಗಳ ಕಾರ್ಯಕರ್ತರು ಬಿಜೆಪಿಗೆ ಬರುತ್ತಿದ್ದಾರೆ ಎಂದರು.

    ವಿದ್ಯಾನಿಕೇತನ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ನೆಕ್ಕಂಟಿ ಸೂರಿಬಾಬು, ಜಿಪಂ ಮಾಜಿ ಸದಸ್ಯ ಎಚ್.ಎಂ.ಸಿದ್ರಾಮಯ್ಯಸ್ವಾಮಿ, ನಗರಸಭೆ ವಿಪಕ್ಷ ನಾಯಕ ನವೀನ್ ಮಾಲಿ ಪಾಟೀಲ್, ಮಾಜಿ ಸದಸ್ಯ ಜೋಗದ ಹನುಮಂತಪ್ಪನಾಯಕ, ನಯೋಪ್ರಾ ಸದಸ್ಯ ಶಿವಪ್ಪ ಮಾದಿಗ, ಬಿಜೆಪಿ ಮಾಧ್ಯಮ ವಕ್ತಾರ ಡಬ್ಲುೃ. ವೀರಭದ್ರಪ್ಪ ನಾಯಕ, ವಿವಿಧ ಮೋರ್ಚಾ ಪದಾಧಿಕಾರಿಗಳಾದ ಹುಸೇನಪ್ಪ ಸ್ವಾಮಿ ಮಾದಿಗ, ಮರಿಯಪ್ಪ ಕುಂಟೋಜಿ, ಸಂಗಯ್ಯಸ್ವಾಮಿ ಸಂಶಿಮಠ, ಕೆ.ವೆಂಕಟೇಶ ಇತರರಿದ್ದರು.

    ಬಿಎಸ್‌ವೈ-ಕಿಚ್ಚ ಸುದೀಪ್ ಆಗಮನ

    ಕ್ಷೇತ್ರದಲ್ಲಿ ಬಿಜೆಪಿ ಪರ ಪ್ರಚಾರಕ್ಕಾಗಿ ಸ್ಟಾರ್ ಪ್ರಚಾರಕರು ಬರಲಿದ್ದು, ಚಿತ್ರನಟ ಸುದೀಪ್ ಮೇ 4ರಂದು ಆಗಮಿಸುವ ನಿರೀಕ್ಷೆಯಿದೆ. ಅದರಂತೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಹಿಂದುತ್ವ ಪ್ರತಿಪಾದಕ ಬಸವನಗೌಡ ಯಾತ್ನಾಳ್ ಸೇರಿ ಪಕ್ಷದ ರಾಜ್ಯ ಪದಾಧಿಕಾರಿಗಳು ಬರಲಿದ್ದಾರೆ. ಕೆಲವರು ರೋಡ್ ಶೋ ನಡೆಸಿದರೆ, ಇನ್ನೂ ಕೆಲವರು ಬಹಿರಂಗ ಸಭೆ ಮೂಲಕ ಮತಯಾಚನೆ ಮಾಡಲಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಪರಣ್ಣ ಮುನವಳ್ಳಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts