ಗಂಗಾವತಿ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನಿಂದ ಹಮ್ಮಿಕೊಂಡ ರಾಜ್ಯ ಸಮ್ಮೇಳನದ ಭಿತ್ತಿ ಪತ್ರಗಳನ್ನು ನಗರದ ಸ್ಫೂರ್ತಿ ನರ್ಸಿಂಗ್ ಕಾಲೇಜಿನಲ್ಲಿ ಗುರುವಾರ ಬಿಡುಗಡೆಗೊಳಿಸಲಾಯಿತು.
ಪರಿಷತ್ ಬಳ್ಳಾರಿ ವಿಭಾಗದ ಪ್ರಮುಖ ಅಭಿಷೇಕ ಹಿರೇಮಠ ಮಾತನಾಡಿ, ಡಿ.27ರಿಂದ 29ರವರೆಗೆ ಕಲಬುರಗಿಯಲ್ಲಿ ರಾಜ್ಯಮಟ್ಟದ ಸಮಾವೇಶ ಹಮ್ಮಿಕೊಂಡಿದ್ದು, ವಿದ್ಯಾರ್ಥಿಗಳ ಸಮಸ್ಯೆಗಳ ಚರ್ಚೆ ಮತ್ತು ಪರಿಹಾರಕ್ಕೆ ವೇದಿಕೆ ಕಲ್ಪಿಸಲಾಗಿದೆ.
ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕಾಗಿ ಪರಿಷತ್ ಪರಿಣಾಮಕಾರಿ ಹೋರಾಟ ನಡೆಸಿದ್ದು, ಹಲವು ಯಶಸ್ವಿಯಾಗಿವೆ. ವಿದ್ಯಾರ್ಥಿ ಸಂಘಟನೆ ಬಲಪಡಿಸುವ ಮತ್ತು ರಾಷ್ಟ್ರಭಕ್ತಿ ಹೆಚ್ಚಿಸುವುದಕ್ಕಾಗಿ ರಾಜ್ಯ ಸಮ್ಮೇಳನ ವೇದಿಕೆಯಾಗಲಿದೆ ಎಂದರು.
ಉಪವಿಭಾಗ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಈಶ್ವರ ಸವಡಿ ಮಾತನಾಡಿ, ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಸಂಘಟನೆಗಳು ಸ್ಪಂದಿಸಲಿ ಎಂದರು. ಪರಿಷತ್ ನಗರ ಘಟಕದ ಅಧ್ಯಕ್ಷ ಸಂಗಮೇಶ, ಪದಾಧಿಕಾರಿಗಳಾದ ಎಂ.ವಿ.ಕಿರಣ, ಉದಯ ಕುಮಾರ್, ಭೀಮೇಶ, ಪ್ರವೀಣ ಇತರರಿದ್ದರು.
