
ಗಂಗಾವತಿ: ಗುಳೆ ತಪ್ಪಿಸಲು ನರೇಗಾ ಯೋಜನೆ ಪೂರಕವಾಗಿದ್ದು, ಸರ್ಕಾರಿ ಆಸ್ತಿ ಸೃಜಿಸಲು ಸಹಕಾರಿಯಾಗಿದೆ ಎಂದು ಶಾಸಕ ಗಾಲಿ ಜನಾರ್ದನರೆಡ್ಡಿ ಹೇಳಿದರು.
ತಾಲೂಕಿನ ಬಸಾಪಟ್ಟಣದಲ್ಲಿ ತಾಪಂ ನರೇಗಾ ಯೋಜನೆಯಡಿ ನಿರ್ಮಿಸಿರುವ ಮಹಿಳಾ ಸ್ವಸಹಾಯ ಗುಂಪುಗಳ (ಎನ್‌ಆರ್‌ಎಲ್‌ಎಂ)ಶೆಡ್‌ಗಳನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು. ವಿವಿಧ ಇಲಾಖೆ ಅನುದಾನ ಕ್ರೋಡೀಕರಣದೊಂದಿಗೆ ಗ್ರಾಮಾಭಿವೃದ್ಧಿ ಕೈಗೊಳ್ಳಲಾಗುತ್ತಿದೆ. ರಸ್ತೆ ಅಭಿವೃದ್ಧಿ, ಕುಡಿವ ನೀರು, ನೈರ್ಮಲೀಕರಣ ಸೇರಿ ಮೂಲ ಸೌಕರ್ಯಗಳನ್ನು ಕಾಲಮಿತಿಯೊಳಗೆ ಒದಗಿಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ 2023-24ನೇ ಸಾಲಿನ ತಾಪಂ ಅನಿರ್ಭಂದಿತ ಅನುದಾನದಡಿ 10.89 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಅಂಗವಿಕಲರ ಕೇಂದ್ರದ ಕಚೇರಿಯನ್ನು ಉದ್ಘಾಟಿಸಿದರು.
ಗ್ರಾಪಂ ಅಧ್ಯಕ್ಷ ಆಂಜನೇಯ ನಾಯಕ, ಉಪಾಧ್ಯಕ್ಷೆ ರತ್ನಮ್ಮ, ಪಿಡಿಒ ವಿದ್ಯಾವತಿ, ಬಿಜೆಪಿ ಮುಖಂಡರಾದ ಚನ್ನಪ್ಪ ಮಳಗಿ, ಮನೋಹರಗೌಡ ಹೇರೂರು, ಡಿ.ಕೆ.ಆಗೋಲಿ, ಅರ್ಜುನ ನಾಯಕ, ಆನಂದ ಗೌಡ, ಕನಕರಾಜ, ಶ್ರೀಕಾಂತ, ಸಿ.ಎಚ್. ಪ್ರಸಾದ, ವಿಆರ್‌ಡಬ್ಲುೃ ಭಾಷಾಸಾಬ ಇತರರಿದ್ದರು.
ಭೂಮಿ ಪೂಜೆ: ವಿಧಾನಸಭೆ ಕ್ಷೇತ್ರದ ಜಿನ್ನಾಪುರ ತಾಂಡಾದಲ್ಲಿ 2022-23ನೇ ಸಾಲಿನ ಜೆಜೆಎಂ ಯೋಜನೆಯಡಿ ಜನವಸತಿ ಗ್ರಾಮಗಳ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿಗೆ ಶಾಸಕ ಗಾಲಿ ಜನಾರ್ದನರೆಡ್ಡಿ ಭೂಮಿ ಪೂಜೆ ನೆರವೇರಿಸಿದರು.
ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ ಅನುದಾನದಡಿ ನಿರ್ಮಿಸಲಾಗುತ್ತಿದ್ದು, ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ನಿರ್ವಹಣೆ ಇಂಜಿನಿಯರಿಗೆ ಶಾಸಕ ಜನಾರ್ದನ ರೆಡ್ಡಿ ಸೂಚಿಸಿದರು. ಮಾಜಿ ಎಂಲ್ಸಿ ಕರಿಯಣ್ಣ ಸಂಗಟಿ, ಗ್ರಾಪಂ ಅಧ್ಯಕ್ಷ ಶ್ರೀಕಾಂತ ಹುಲಸನಟ್ಟಿ, ಇಇ ಮಹೇಶ ಶಾಸಿ, ಎಇ ಲಕ್ಷ್ಮಿ, ಮುಖಂಡರಾದ ನಾಗಪ್ಪ ರಾಠೋಢ, ಸಂಗಮೇಶ ಬಾದವಾಡಗಿ, ಮಲ್ಲೇಶಪ್ಪ ಗುಂಗೇರಿ, ಚನ್ನವೀರನಗೌಡ, ರಾಜೇಶ ರೆಡ್ಡಿ ಇತರರಿದ್ದರು.