More

  ಸಂಗೀತ ಕಾರ್ಯಕ್ರಮಗಳಿಂದ ಹೊಸ ಕಲಾವಿದರಿಗೆ ಅವಕಾಶ

  ಗಂಗಾವತಿ: ಕಲಾವಿದರನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರೋತ್ಸಾಹಿಸುತ್ತಿದ್ದು, ಸಂಗೀತ ಮತ್ತಿತರ ಕಾರ್ಯಕ್ರಮಗಳಿಂದ ಹೊಸ ಕಲಾವಿದರಿಗೆ ಅವಕಾಶ ದೊರೆತಿವೆ ಎಂದು ಡಾ.ಪಂ.ಪುಟ್ಟರಾಜ ಕವಿ ಗವಾಯಿಗಳ ಸಂಗೀತ ಸಂಸ್ಥೆ ಅಧ್ಯಕ್ಷ ರಾಜಾಸಾಬ್ ಮುದ್ದಾಬಳ್ಳಿ ಹೇಳಿದರು.

  ಇಲ್ಲಿನ ಜಯನಗರ ತಾಯಮ್ಮದೇವಿ ದೇವಾಲಯ ಆವರಣದಲ್ಲಿ ಪರಿಸರ ಸೇವಾ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಸೋಮವಾರ ಮಾತನಾಡಿದರು. ರಾಜಾಡಳಿತದಲ್ಲಿ ಕಲಾ ಪ್ರಪಂಚಕ್ಕಾಗಿ ಪ್ರತ್ಯೇಕ ವ್ಯವಸ್ಥೆಯಿದ್ದು, ಸಂಗೀತ ಮತ್ತು ಸಾಂಸ್ಕೃತಿ ಕಾರ್ಯಕ್ರಮಗಳಿಗೆ ವಿಶೇಷ ಮಾನ್ಯತೆಯಿತ್ತು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಘ ಸಂಸ್ಥೆಗಳೇ ಕಲಾವಿದರನ್ನು ಪೋಷಿಸಬೇಕಿದ್ದು, ಇಲಾಖೆ ನೆರವು ಪಡೆಯುವಂತೆ ಸಲಹೆ ನೀಡಿದರು.

  ಅಧ್ಯಕ್ಷತೆ ವಹಿಸಿದ್ದ ಕಲಾವಿದ ಸೋಮಣ್ಣ ಮಾಸ್ತರ್ ಮಾತನಾಡಿ, ನಿರಂತರ ಅಭ್ಯಾಸ ಮತ್ತು ಏಕಾಗ್ರತೆಯಿಂದ ಕಲೆಯನ್ನು ಒಲಿಸಿಕೊಳ್ಳಬಹುದಾಗಿದೆ ಎಂದರು.

  ಮಲ್ಲಾಪುರದ ಹಾರ್ಮೋನಿಯಂ ಕಲಾವಿದ ಪರಶುರಾಮ್ ಮಾಸ್ತರ್‌ರಿಂದ ಹಾರ್ಮೋನಿಯಂ ವಾದನ, ಜನಪದ ಗಾಯನ ಸೇರಿ ವಿವಿಧ ಕಲಾವಿದರಿಂದ ಸಂಗೀತ ಸುಧೆ ಜರುಗಿತು.

  ಕಲ್ಯಾಣ ಕರ್ನಾಟಕ ಒಕ್ಕೂಟದ ಜಿಲ್ಲಾ ಗೌರವಾಧ್ಯಕ್ಷ ಡಿ.ಎಸ್. ಪೂಜಾರ್ ಮ್ಯಾದನೇರಿ, ಕಲಾವಿದರಾದ ಶಿವಮ್ಮ ಹೇರೂರು, ರಿಜ್ವಾನ್ ಮುದ್ದಾಬಳ್ಳಿ, ಸುರೇಶ ಛಲವಾದಿ, ರುದ್ರೇಶ ಹಡಪದ, ಮುಖಂಡರಾದ ಉಡುಮಕಲ್ಲಿನ ಶಿವಲಿಂಗಯ್ಯಶಾಸಿ, ವಿವೇಕಾನಂದ ಜೋಶಿ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts